ಕೋಲಾರ

ಒಂದೇ ದಿನ ಮೂರು ಹಸು ಸಾವು

Published On :

ಮುಳಬಾಗಲು: ಪಟ್ಟಣದ ಮಂಡಿಕಲ್ಲು ಗ್ರಾಮದಲ್ಲಿ ಚಾಮಣ್ಣ ಎಂಬವರ ಮನೆಯಲ್ಲಿ ಮಂಗಳವಾರ ಮೂರು ಬೆಲೆ ಬಾಳುವ ರು. 1.50 ಲಕ್ಷ ಬೆಲೆಬಾಳುವ ಸೀಮೆ ಹಸುಗಳು ಕಾಲುಬಾಯಿ ಜ್ಜರದಿಂದ ಸಾವಿಗೀಡಾಗಿದೆ. ಮುಳಬಾಗಲು ಪಶುಪಾಲನೆ ಇಲಾಖೆಯವರು ಸ್ಥಳಕ್ಕೆ ದಾವಿಸಿ ಮರಣೋತ್ತರ ಪರಿಕ್ಷೆ ನಡೆಸಿದರು.
ಅನುಮಾನಾಸ್ಪದ ವ್ಯಕ್ತಿಗಳ ಬಂಧನ
ಶಿಡ್ಲಘಟ್ಟ; ಜಂಗಮ ಕೋಟೆ ಹೋಬಳಿಯ ಫಕೀರನ ಹೋಬಳಿ ಬಳಿ ಅನುಮಾಸ್ಪಾದ ವ್ಯಕ್ತಿಗಳನ್ನು ಬಂಧಿಸಿ ಅವರಿಂದ 1,000 ಮೀಟರ್ ಬೋರ್‌ವೆಲ್ ಪವರ್ ಕೇಬಲ್ ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಫಕೀರನ ಹೊಸಹಳ್ಳಿ ಗೇಟ್ ಬಳಿ ಅನುಮಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಅವರ ಬಳಿ ಕೇಬಲ್ ಪತ್ತೆಯಾಗಿದೆ.
 ಆಂಧ್ರಪ್ರದೇಶದ ಮದನಪಲ್ಲಿ ತಾಲೂಕಿನ ಸೋಮಲ ಗ್ರಾಮದ ವಾಸಿಗಳಾದ ರವಿ(30), ರಾಮಕೃಷ್ಣ(30), ಸುಬ್ರಮಣ್ಯಂ(26) ಆರೋಪಿಗಳಾಗಿದ್ದಾರೆ. ಆರೋಪಿಗಳು ಕಳೆದ 1 ತಿಂಗಳಿನಿಂದ ಜಂಗಮಕೋಟೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೇಬಲ್ ಕಳ್ಳತನ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಕಳವು
ಮುಳಬಾಗಲು: ಪಟ್ಟಣದ ಗಣೇಶಪಾಳ್ಯದ ಮನೆಯೊಂದರ ಮುಂದೆ ನಿಲ್ಲಿಸಿದ್ದ ಕಾರು ಮಂಗಳವಾರ ಕಳುವಾಗಿದೆ. ಬೆಂಗಳೂರಿನಲ್ಲಿ ವಕೀಲರಾಗಿರುವ ತಾಲೂಕಿನ ಪೆದ್ದೂರು ಗ್ರಾಮದ ವಿಜಯಭಾಸ್ಕರ ರೆಡ್ಡಿ ತಮ್ಮ ಸ್ನೇಹಿತರ ಮನೆಯ ಮುಂದೆ ನಿಲ್ಲಿಸಿದ್ದು, ಮಂಗಳವಾರ ಮುಂಜಾನೆ ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಶಂಕರಪ್ಪ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಅರಣ್ಯದಲ್ಲಿ ಕಡಿತಲೆ; ಆರೋಪಿಗಳಿಗೆ 500 ದಂಡ
ಶಿಡ್ಲಘಟ್ಟ: ತಾತಹಳ್ಳಿಯ ಸರ್ಕಾರಿ ಅರಣ್ಯದಲ್ಲಿ ಮರಗಳನ್ನು ಕಡಿದು ಸರ್ಕಾರಕ್ಕೆ ನಷ್ಟವುಂಟುಮಾಡಿದ ಪ್ರಕರಣ 2011ರಲ್ಲಿ ದಾಖಲಾಗಿದ್ದು ಜೆಎಮ್‌ಎಫ್‌ಸಿ ನ್ಯಾಯಾಲಯ ಆರೋಪಿಗೆ ದಂಡ ವಿದಿಸಿದೆ.
2011ರಲ್ಲಿ ತಾತಹಳ್ಳಿಯ ಸರ್ಕಾರಿ ಅರಣ್ಯದಲ್ಲಿ ಮರ ಕಡಿದು ಸರ್ಕಾರಕ್ಕೆ ನಷ್ಟವುಂಟುಮಾಡಿದ ಪ್ರಕರಣದಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗಳಾದ ತಾತಹಳ್ಳಿಯ ನಿವಾಸಿಗಳಾದ ತಿರುಮಲೇಶ್, ತಿಮ್ಮರಾಯ, ಮುನಿರಾಜು, ಹರೀಶ್, ನಾಗರಾಜ್, ನರಸಿಂಹಪ್ಪ, ಎಂಬವರಿಗೆ ತಲಾ 500 ದಂಡ, ದಂಡ ಕಟ್ಟದಿದ್ದಲ್ಲಿ 15 ದಿನಗಳ ಜೈಲು ಶಿಕ್ಷೆ ವಿದಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.