ಬೋರ್ವೆಲ್ನಲ್ಲಿ ಲಭಿಸಿದ ನೀರು; ಸಂತಸ
ಬಂಗಾರಪೇಟೆ: ಬರದಿಂದ ತತ್ತರಿಸಿರುವ ಕ್ಷೇತ್ರದ ಜನರು ಇತ್ತೀಚಿಗೆ ಸುರಿದ ಮಳೆ ಕಾರಣದಿಂದ ಕೊರೆಸಿದ ಎಲ್ಲಾ ಬೋರ್ವೆಲ್ಗಳಲ್ಲಿ ನೀರು ಲಭ್ಯವಾಗುತ್ತಿರುವುದು ಶಾಸಕರಿಗೆ ಸಂತಸ ತಂದಿದೆ. ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಮ್ಮ ಟ್ರಸ್ಟ್ವತಿಯಿಂದ ಇಡೀ ಕ್ಷೇತ್ರಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದರು, ಈಗಲೂ ಅದನ್ನು ಮುಂದುವರೆಸಿದ್ದಾರೆ. ಎಸ್.ಎನ್. ನಾರಾಯಣಸ್ವಾಮಿ ಶಾಸಕರಾದ ನಂತರ ಐದು ತಿಂಗಳಲ್ಲಿ ಸುಮಾರು 300 ಹೊಸ ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ ಈ ಪೈಕಿ 250ರಲ್ಲಿ ನೀರು ಸಿಕ್ಕಿದೆ, ಈಗ ಗ್ರಾಮಗಳಲ್ಲಿ ನೀರಿನ ಭವಣೆ ಅಷ್ಟಾಗಿಲ್ಲ,ಪಟ್ಟಣದಲ್ಲಿ ಮಾತ್ರ ಸಮಸ್ಯೆ ಇನ್ನೂ ಕೆಲವು ವಾರ್ಡುಗಳಲ್ಲಿ ಗಂಭೀರವಾಗಿಯೇ ಇದೆ. ಮಂಗಳವಾರ ತಾಲೂಕಿನ ಹುಲಿಬೆಲೆ ಗ್ರಾಮದಲ್ಲಿ ಕೊರೆಸಿದ್ದ ಬೋರ್ವೆಲ್ನಲ್ಲಿ ಸಮೃದ್ಧವಾಗಿ ನೀರು ಲಭಿಸಿದ್ದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಸಕ ನಾರಾಯಣಸ್ವಾಮಿರನ್ನು ಗ್ರಾಮಕ್ಕೆ ಕರೆತಂದು ಸತ್ಕರಿಸಿದರು. ಗ್ರಾಮಸ್ಥರ ಸನ್ಮಾನ ಸ್ವಿಕರಿಸಿ ಮಾತನಾಡಿದ ಶಾಸಕರು, ಕ್ಷೇತ್ರದಲ್ಲಿ ನೀರಿನ ಅಭಾವ ಕಾಣದಂತೆ ರೂಪಿಸುವುದೇ ನನ್ನ ಗುರಿಯಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಕೆ. ಚಂದ್ರಾರೆಡ್ಡಿ, ನಾರಾಯಣಗೌಡ, ಸುರೇಶ್, ಹೊಸರಾಯಪ್ಪ, ಪುರಸಭೆ ಸದಸ್ಯ ಶಫಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

