ಕೋಲಾರ

ಜಿಲ್ಲೆಗೆ ಮುನಿಯಪ್ಪ ಕೊಡುಗೆ ಶೂನ್ಯ'

Published On :

ಬಂಗಾರಪೇಟೆ: 25 ವರ್ಷಗಳಿಂದ ಜಿಲ್ಲೆಯನ್ನು ಪ್ರತಿನಿಧಿಸಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಜಿಲ್ಲೆಗೆ ನೀಡಿರುವ ಕೊಡುಗೆ ಏನು, ಈ ಬಾರಿ ದೇಶದಲ್ಲಿ ನರೇಂದ್ರ ಮೋದಿ ಅಲೆ ಹಬ್ಬಿದ್ದು ಈ ಅಲೆಗೆ ಕೆ.ಎಚ್. ಮುನಿಯಪ್ಪ ಕೊಚ್ಚಿ ಹೋಗುವುದು ಖಚಿತ ಎಂದು ಬಿಜೆಪಿ ಪಕ್ಷದ ಕೋಲಾರ ಲೋಕಸಭೆ ಕ್ಷೇತ್ರದ ಉಸ್ತುವಾರಿ ನಂದೀಶ್ರೆಡ್ಡಿ ಹೇಳಿದರು.
ನವೆಂಬರ್ನಲ್ಲಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಸಮಾರಂಭಕ್ಕೆ ಕರೆತರುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಳೆಯಾಶ್ರಿತ ಜಿಲ್ಲೆಯಲ್ಲಿ ರೈತರು ಕೃಷಿ ಮಾಡಲು ನೀರಿಲ್ಲ. ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಈ ಬಾರಿ ಬಿಜೆಪಿ ಕೈಗೆ ಅಧಿಕಾರ ನೀಡಿ ದೇಶದ ಎಲ್ಲಾ ನದಿಗಳನ್ನು ಜೋಡಣೆ ಮಾಡಿ ಜಿಲ್ಲೆಗೆ ಅಂಟಿಕೊಂಡಿರುವ ನೀರಾವರಿ ಶಾಪವನ್ನು ವಿಮೋಚನೆ ಮಾಡುವುದಾಗಿ ಭರವಸೆ ನೀಡಿದರು.
ಇನ್ನು ಮುಂದೆ ಕೆ.ಎಚ್. ಮುನಿಯಪ್ಪರವರ ತಂತ್ರಗಾರಿಕೆ ನಡೆಯಲ್ಲ. ನೆಹರು ಕುಟುಂಬದಿಂದ ಬಂದಿರುವ ರಾಹುಲ್ ಪಕ್ಕದಲ್ಲಿ ಗಾಂಧಿ ಹೆಸರನ್ನು ಬಳಕೆ ಮಾಡುತ್ತಿರುವುದು ನಾಚಿಕೆಕೇಡಿನ ಸಂಗತಿ. ದೇಶದಲ್ಲಿ ಈ ಬಾರಿ ರಾಜಕೀಯ ಪರಿವರ್ತನೆಯಾಗುವುದು ಖಚಿತ ಮತ್ತು ನರೇಂದ್ರ ಮೋದಿ ಪ್ರಧಾನಿಯಾಗುವುದೂ ಅಷ್ಟೇ ಸತ್ಯವಾಗಿದ್ದು ಜನರು ಬೆಣ್ಣೆ ಮಾತುಗಳಿಗೆ ಬೆರಗಾಗಬೇಡಿ ಎಂದು ಕೋರಿದರು.
ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿ ಎಂ. ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಈಗ ಮೋದಿ ಶೆಕೆ ಆರಂಬವಾಗಿರುವುದರಿಂದ ಕಾಂಗ್ರೆಸ್ನವರಿಗೆ ನಡುಕ ಶುರುವಾಗಿದ್ದು ಇದರಿಂದ ಹೊರಬರಲಾಗದೆ ಮೋದಿ ಬಗ್ಗೆ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ. ಮೋದಿ ಪ್ರಧಾನಿಯಾದರೆ ದೇಶದ ಆರ್ಥಿಕತೆ ಸುಧಾರಿಸಲಿದೆ ಮತ್ತು ಭ್ರಷ್ಟಾಚಾರ ನಿಗ್ರಹವಾಗಲಿದೆ ಎಂದು ಹೇಳಿದರು.
ಎಂಎಲ್ಸಿ ಡಿ.ಎಸ್. ವೀರಯ್ಯ, ಮಾಜಿ ಶಾಸಕ ವೈ. ಸಂಪಂಗಿ, ತಾಪಂ ಅಧ್ಯಕ್ಷ ರೇಣುಕಾ, ಜಿಪಂ ಸದಸ್ಯರಾದ ಸೀಮೋಲ್ ಮೋಹನ್ ಮೂರ್ತಿ, ಆನಂದ್, ಬಿ.ಸಿ. ಮೂರ್ತಿ, ವೇದಾವತಿ ಪ್ರಭಾಕರ್, ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ತಾ.ಅಧ್ಯಕ್ಷ ಮಾರ್ಕಂಡೇಗೌಡ, ಹನುಮಪ್ಪ, ಓಂಶಕ್ತಿ ಚಲಪತಿ, ನಾಗಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.