ಕೇಸರಿಕರಣ ಹೆಸರಿನಲ್ಲಿ ರಾಜ್ಯ ಸರ್ಕಾರದಿಂದ ಪಠ್ಯ ಬದಲಿಗೆ ಹುನ್ನಾರ
ಮಾಲೂರು: ರಾಷ್ಟ್ರೀಯತೆ-ದೇಶ ಭಕ್ತಿ ಹೆಚ್ಚಿಸುವಂತಹ ಪಠ್ಯಗಳನ್ನು ಇಂದಿನ ರಾಜ್ಯ ಸರ್ಕಾರ ಕೇಸರಿಕರಣ ಎಂಬ ನೆಪವೊಡ್ಡಿ ಬದಲಾವಣೆ ಮಾಡುವ ಹುನ್ನಾರ ನಡೆಸಿದ್ದು, ಯಾವೂದೇ ಕಾರಣಕ್ಕೂ ಬದಲಾವಣೆ ಮಾಡಕೂಡದು ಎಂದು ವಿಧಾನಪರಿಷತ್ ಸದಸ್ಯ ಶಿವಯೋಗಿ ಸ್ವಾಮಿ ಹೇಳಿದರು.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿಕ್ಷಣದಲ್ಲಿ ರಾಷ್ಟ್ರೀಯತೆ ಮೂಡಿಸುವ ಸಂಗತಿಗಳು, ನಮ್ಮ ಮಕ್ಕಳಿಗೆ ಹಿರಿಯರ ಸಾಧನೆ ತಿಳಿಸುವ ನೈಜ ಇತಿಹಾಸವನ್ನು ಹೇಳಿಕೊಡುವ ಪಠ್ಯ ಕ್ರಮಕ್ಕೆ ಹಿಂದಿನ ನಮ್ಮ ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಲಾಗಿತ್ತು. ಇಂದಿನ ಮಕ್ಕಳು ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಪೂರ್ವಜರ ಸಾಧನೆ ಪ್ರೇರಣೆಯಾಗುವಂತೆ ತಯಾರಿಸಿದ ಪಠ್ಯಗಳ ಬಗ್ಗೆ ವಿರೋಧ ಶಕ್ತಿ-ವ್ಯಕ್ತಿಗಳು ಕೇಸರಿಕರಣ ಎಂದು ಹೆಸರಿಟ್ಟು, ರಾಜ್ಯ ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ಪಠ್ಯಕ್ರಮ ಬದಲಿಸುವ ಹುನ್ನಾರ ಕೈಬಿಡಬೇಕು. ಈ ಬಗ್ಗೆ ವಿಧಾನ ಪರಿಷತ್ನಲ್ಲಿ ವಿರೋಧಿಸುವುದಾಗಿ ಅವರು ತಿಳಿಸಿದರು.
ಮುಂದಿನ ಲೋಕಸಭೆ ಚುನಾವಣೆಗಾಗಿ ಚೀಪ್ ಪಾಪುಲರಿಟಿ ಗಿಮಿಕ್ಗಾಗಿ ರಾಜ್ಯ ಸರ್ಕಾರವು ಪೂರ್ವ ಸಿದ್ಧತೆ ಇಲ್ಲದೆ ಹಲವು ಯೋಜನೆಗಳನ್ನು ಆತುರವಾಗಿ ತೀರ್ಮಾನ ಕೈ ಗೊಂಡು ಅನುಷ್ಠಾನಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳು ವಿಫಲವಾಗಿವೆ ಎಂದು ಅವರು ದೂರಿದರು.
ತಾಲೂಕಿನ ಡಿ.ಎನ್. ದೊಡ್ಡಿಯಲ್ಲಿನ ಕಾಲೇಜು ಬಳಿಯಲ್ಲೇ ಮದ್ಯದಂಗಡಿ ಇದ್ದು, ವಿಶೇಷವಾಗಿ ವಿದ್ಯಾರ್ಥಿನಿಯರ ಒಳಿತಿಗಾಗಿ ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಬಿಜೆಪಿ ರಾಜ್ಯ ಎಸ್ಸಿ ಎಸ್ಟಿ ಮೋರ್ಚಾ ಸಂಚಾಲಕ ವೆಂಕಟೇಶ್ಮೌರ್ಯ, ಜಿಲ್ಲಾ ಕಾರ್ಯದರ್ಶಿ ಗೋಪಾಲ್ಗೌಡ, ತಾಲೂಕು ಅಧ್ಯಕ್ಷ ವೆಂಕಟೇಶ್, ಯುವ ಬಿಜೆಪಿ ತಾಲೂಕು ಅಧ್ಯಕ್ಷ ಶೇಷಗಿರಿ, ಜಿಲ್ಲಾ ವಕ್ತಾರ ಮಹೇಶ್ ಬಾಬು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

