ಕುರುಬರ ಸಂಘದ ಚುನಾವಣೆ ಮಹಿಳಾ ಅಭ್ಯರ್ಥಿ ಪ್ರತಿಭಟನೆ
ಕ.ಪ್ರ. ವಾರ್ತೆ, ಕೋಲಾರ, ಸೆ.29
ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಆಯ್ಕೆಗಾಗಿ ಭಾನುವಾರ ನಗರದ ಕನಕ ಮಂದಿರದಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಕೆಲವರು ನಕಲಿ ಮತದಾನ ಮಾಡುತ್ತಿದ್ದಾರೆಂದು ಹಾಗೂ ಮತಪಟ್ಟಿಗೆಗೆ ಇಂಕನ್ನು ಸುರಿಯಲಾಗಿದೆ ಎಂದು ಮಹಿಳಾ ಅಭ್ಯರ್ಥಿಯೊಬ್ಬರು ಚುನಾವಣಾಧಿಕಾರಿಗೆ ದೂರು ನೀಡಿದ್ದರಿಂದ ಗೊಂದಲ ಉಂಟಾಯಿತು.
ಮಹಿಳಾ ಅಭ್ಯರ್ಥಿ ಬೀರೇಶ್ವರಿ ಅವರು ನಕಲಿ ಮತದಾನಕ್ಕಾಗಿಯೇ ಈ ರೀತಿ ಗೊಂದಲ ಸೃಷ್ಟಿಸಲಾಗಿದೆ, ಭಾವಚಿತ್ರ ಸಹಿತ ಮತಪಟ್ಟಿಯ ಆಧರಿಸಿ ಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಚುನಾವಣಾಧಿಕಾರಿಗಳನ್ನು ಆಗ್ರಹಿಸಿದರಲ್ಲದೆ, ಮತದಾನ ನಿಲ್ಲಿಸುವಂತೆ ಪ್ರತಿಭಟಿಸಿದರು.
ಮತದಾನ ಕೇಂದ್ರ ಬಳಿಯಿದ್ದ ಕೆಲವರು ಬೀರೇಶ್ವರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದಾಗ ಎರಡು ಗುಂಪುಗಳ ನಡುವೆ ಜಗಳವಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಯಾವುದೇ ಅಹಿತಕರ ಘಟನೆ ನಡೆಯಂತೆ ನೋಡಿಕೊಂಡರು.
ಯಾವುದೇ ಕಾರಣಕ್ಕೂ ಮತದಾನವನ್ನು ನಿಲ್ಲಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದ ಕುರುಬರ ಸಂಘದ ಮುಖಂಡರು ಮತ್ತು ಹಿರಿಯರು ಮತದಾನ ಮುಂದುವರೆಸಲು ಅವಕಾಶ ಕಲ್ಪಿಸಿದರು.
ಸುಮಾರು 2158 ಮತದಾರರ ಪೈಕಿ 1358 ಮತಗಳು ಚಲಾವಣೆಯಾಗಿದ್ದು ಮತಎಣಿಕೆ ಕಾರ್ಯ ಬಿರುಸಿನ ಸಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

