ದಾರ್ಶನಿಕರ ವ್ಯಕ್ತಿತ್ವ ಬಣ್ಣನೆಗೆ ಮಾತ್ರ ಸೀಮಿತವಾಗದಿರಲಿ: ಶಿವಶಂಕರರೆಡ್ಡಿ
ಗೌರಿಬಿದನೂರು: ದೇಶಪ್ರೇಮಿಗಳು, ದಾರ್ಶನಿಕರು, ಸಾಧಕರ ಆದರ್ಶಗಳನ್ನು ಹೊಗಳಿಕೆಗೆ ಮಾತ್ರ ಸೀಮಿತಗೊಳಿಸದೆ, ಉತ್ತಮ ವ್ಯಕ್ತಿತ್ವವನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎದು ವಿಧಾನಸಭೆ ಉಪಾಧ್ಯಕ್ಷ ಎನ್.ಹೆಚ್. ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಸಮತಾ ಪ್ರೌಢಶಾಲೆಯ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ನ್ಯಾಯವಾದಿ ದಿ.ಜಿ.ವಿ. ಶಾಂತರಾಜು ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿ.ವಿ. ಶಾಂತರಾಜು ಅವರು ನ್ಯಾಯಾಂಗ ವ್ಯವಸ್ಥೆಗೆ ಹಾಗೂ ವಕೀಲ ಸಮುದಾಯಕ್ಕೆ ಹೊಸ ಆಯಾಮವನ್ನೇ ನೀಡಿ ಪ್ರತಿಭಾವಂತ ನ್ಯಾಯಾಧೀಶರನ್ನು ಹಾಗೂ ವಕೀಲರನ್ನು ಈ ಸಮಾಜಕ್ಕೆ ನೀಡಿದರು ಎಂದಿಗೂ ಹಣಕ್ಕಾಗಿ ತನ್ನ ತನವನ್ನು ಮಾರಿಕೊಳ್ಳದೆ ನಿಷ್ಠೆ ಹಾಗೂ ಪ್ರಾಮಾಣಿಕತೆ ಉಳಿಸಿಕೊಂಡರು.
2005ರಲ್ಲಿ ಕರ್ನಾಟಕ ಸರ್ಕಾರ ಇವರನ್ನು ಹಿರಿಯ ನ್ಯಾಯವಾದಿಗಳನ್ನಾಗಿ ನೇಮಿಸಿತ್ತು, ಪ್ರತಿಷ್ಠಿತ ಸಂಸ್ತೆಗಳಾದ ಸಕ್ಕರೆ ಕಾರ್ಖಾನೆಗಳು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ಹಾಲು ಒಕ್ಕೂಟ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಂತಾದವುಗಳಿಗೆ ನ್ಯಾಯ ವಾದಿಯಾಗಿದ್ದರು.
ಮಾತ್ರವಲ್ಲ, ಸಂಗೀತ-ಸಾಹಿತ್ಯ ಪ್ರೇಮಿಯಾಗಿದ್ದ ಅವರು ಮಂಕುತಿಮ್ಮನ ಕಗ್ಗದ ಬಗ್ಗೆ ಅಪಾರ ಗೌರವವಿಟ್ಟುಕೊಂಡಿದ್ದರು. ಅದರ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ಶ್ಲಾಘಿಸಿದರು.
ಈ ನಿಟ್ಟಿನಲ್ಲಿ ಶ್ರೀಯುತ ಸ್ಮರಣಾರ್ಥ ಶಾಶ್ವತ ಯೋಜನೆ ರೂಪಿಸಿ, ಇಂದಿನ ಯುವ ವಕೀಲ ಪೀಳಿಗೆಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಬೇಕು ಎಂದು ಅವರು ತಿಳಿಸಿದರು.
ಪ್ರಾಧ್ಯಾಪಕ ಎಚ್.ಎಸ್.ಗಣೇಶ್ಭಟ್ ಅವರು ಮಾತನಾಡಿ, ಡಿವಿಜಿ ಅವರ ಮಂಕುತಿಮ್ಮ ಕಗ್ಗದಲ್ಲಿ ಮಾರ್ಗದರ್ಶನವಿದೆ ಇಂತಹ ಕಗ್ಗವನ್ನು ಜಿ.ವಿ.ಶಾಂತರಾಜು ಇಷ್ಟಪಡುತ್ತಿದ್ದರು ಎಂದು ವಿವರಿಸಿದರು.
ರವಿಕುಮಾರ್ ಗೌಡಗೆರೆ, ಡಿ.ಜೆ.ಚಂದ್ರಮೋಹನ್, ಕೆ.ವರಾಹಮೂರ್ತಿ, ಜಿ.ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

