ಕೋಲಾರ

ಮುನಿಯಪ್ಪ ಶಾಶ್ವತ ನೀರಾವರಿ ಭರವಸೆ ನೀಡಿದರೆ ಕಣದಿಂದ ನಿವೃತ್ತಿ: ಕೆ. ಕೇಶವ

Published On :

ಬಂಗಾರಪೇಟೆ: 6 ಬಾರಿ ಸಂಸದರಾಗಿರುವ ಕೆ.ಎಚ್.ಮುನಿಯಪ್ಪ ಅವರು ಕೋಲಾರ ಜಿಲ್ಲೆಗೆ ಏನೂ ಕೊಡುಗೆ ನೀಡಿಲ್ಲ. ಶಾಶ್ವತ ನೀರಾವರಿ ಅನುಷ್ಠಾನದ ಭರವಸೆ ಕೊಟ್ಟರೆ, ನಾನು ಈ ಕ್ಷಣದಿಂದಲೇ ಕಣದಿಂದ ನಿವೃತ್ತಿಯನ್ನು ಘೋಷಿಸುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಸವಾಲು ಹಾಕಿದರು. ತಾಲೂಕಿನ ಹುಲಿಬೆಲೆ, ಸೂಲಿಕುಂಟೆ, ಐನೂರ ಹೊಸಹಳ್ಳಿ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ನಿಮ್ಮ ಮತಪಡೆದು ಹಿತ ಕಾಯದ ನಾಯಕರು ಈ ಬಾರಿ ಸೋಲಲಿದ್ದಾರೆ. ಮುನಿಯಪ್ಪಗೆ ಬೆಂಬಲ ಸೂಚಿಸಿರುವ ವರ್ತೂರ್ ಪ್ರಕಾಶ್ ಕೂಡಾ ಭವಿಷ್ಯದಲ್ಲಿ ಮೂಲೆಗುಂಪಾಗಲಿದ್ದಾರೆ ಎಂದು ಭವಿಷ್ಯ ನುಡಿದರು. ಬಂಗಾರಪೇಟೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇಲ್ಲಿನ ರಾಜಕಾರಣಿಗಳು ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಸಮಸ್ಯೆ ಪರಿಹರಿಸುತ್ತಿಲ್ಲ ಎಂದ ದೂರಿದರು


ಅನಿತಾ ಕುಮಾರಸ್ವಾಮಿ ಬಿರುಸಿನ ಪ್ರಚಾರ

ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪರ ಅನಿತಾ ಕುಮಾರಸ್ವಾಮಿ ಶನಿವಾರ ಇಡೀ ದಿನ ತಾಲೂಕಿನ ವಿವಿಧೆಡೆ ರ್ಯಾಲಿ ಮೂಲಕ ಭರ್ಜರಿ ಪ್ರಚಾರ ನಡೆಸಿದರು. ನಗರದ ಹೊರ ವಲಯದಲ್ಲಿರುವ ನಂದಿ ಕ್ರಾಸ್ ನಿಂದ ಪ್ರಚಾರ ಕಾರ್ಯ ಪ್ರಾರಂಭವಾಯಿತು. ಮೊದಲಿಗೆ ಬೆಳಿಗ್ಗೆ ತಾಲೂಕಿನ ನಂದಿ ಕ್ರಾಸ್, ತಿಪ್ಪೇನಹಳ್ಳಿ, ಪೊಶೆಟ್ಟಿಹಳ್ಳಿ, ಮಧ್ಯಾಹ್ನ ಮಂಚೇನಹಳ್ಳಿ, ಚಿಕ್ಕಬಳ್ಳಾಪುರ ನಗರದಲ್ಲಿ ರೋಡ್ ಶೋ, ಆವಲಗುರ್ಕಿ, ಸಂಜೆ ಮಂಡಿಕಲ್, ಪೆರೇಸಂದ್ರ, ದಿಬ್ಬೂರು, ಅಂಗರೇಖನಹಳ್ಳಿ, ಗುಂಡ್ಲುಗುರ್ಕಿ, ಪಟ್ರೇನಹಳ್ಳಿಗೆ ಬಂದು ಪ್ರಚಾರ ಮುಕ್ತಾಯಗೊಳಿಸಿದರು. ಹಲವೆಡೆ ಪಕ್ಷದ ಮುಖಂಡರು ಮತ್ತು ಮಹಿಳೆಯರು ಅನಿತಾ ಕುಮಾರಸ್ವಾಮಿಗೆ ಅರತಿ ಎತ್ತಿ ಬಾಗಿನ ಕೊಟ್ಟು ಗೌರವಿಸಿದರು. ಜೆಡಿಎಸ್ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್, ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.