ಕೋಲಾರ

ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಜೈಲಿಗೆ: ಮಂಜುನಾಥಗೌಡ

Published On :

ಮಾಲೂರು: ತೀವ್ರವಾಗಿರುವ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಅಧಿಕಾರಿಗಳು ಸಮರೋಪಾದಿಯಾಗಿ ಕಾರ್ಯ ನಿರ್ವಹಿಸಬೇಕು, ಕರ್ತವ್ಯ ಲೋಪ ಎಸೆಗಿದ ಅಧಿಕಾರಿಗಳು ಜೈಲಿಗೆ ತೆರಳಲು ಸಿದ್ಧರಾಗಿ ಎಂದು ಶಾಸಕ ಮಂಜುನಾಥ್ ಗೌಡ ಖಡಕ್ ಆಗಿ ಎಚ್ಚರಿಸಿದರು.
ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಪಟ್ಟಣದ ಕುಡಿಯುವ ನೀರಿನ ಪರಿಸ್ಥಿತಿ ಅವಲೋಕನ ಸಭೆಯಲ್ಲಿ ಮಾತನಾಡಿ, ಪಟ್ಟಣದ 23 ವಾರ್ಡ್‌ಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಿಲ್ಲಾಧಿಕಾರಿಗಳಿಂದ ಒಂದು ಕೋಟಿ ಹೆಚ್ಚುವರಿ ಹಣ ಬಿಡುಗಡೆಯಾಗಿದೆ ಎಂದರು. ಬಿಡುಗಡೆಯಾಗಿರುವ ಹಣದಲ್ಲಿ ಅವಶ್ಯವಿರುವ ಕಡೆ ಕೊಳವೆ ಬಾವಿ ಕೊರೆಸುವುದು ಹಾಗೂ ಟ್ಯಾಂಕರ್‌ನಲ್ಲಿ ನೀರು ಸರಬಾರಾಜು ಮಾಡುವಂತೆ ಪುರಸಭೆ ಅದಿಕಾರಿಗಳಿಗೆ ಸೂಚಿಸಿದರು. ವಾರ್ಡ್ ಸದಸ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ತಡ ಮಾದಡೆ ಸ್ಪಂದಿಸಿ, ಒಂದು ವೇಳೆ ನೀರಿನ ವಿಷಯದಲ್ಲಿ ಕರ್ತವ್ಯ ಲೋಪ ವೆಸೆಗುವ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವಂತೆ ಶಿಫಾರಸ್ಸು ಮಾಡಿ ಎಂದು ತಹಸೀಲ್ದಾರ್ ರವರಿಗೆ ಶಾಸಕರು ಆದೇಶಿಸಿದರು.
ಪುರಸಭೆ ಮುಖ್ಯಾಧಿಕಾರಿ ರೇಣುಕಾ ಮಾತನಾಡಿ, ಪಟ್ಟಣದ ವಾರ್ಡ್‌ಗಳಲ್ಲಿ 6 ಹೊಸ ಕೊಳವೆ ಬಾವಿ ಕೊರೆಯುವ ಜತೆಗೆ 19 ಕೊಳವೆ ಬಾವಿಗಳನ್ನು ರೀಬೋರಿಂಗ್ ಮಾಡಲಾಗುತ್ತದೆ. ದಿನ ಪ್ರತಿ 118 ಟ್ಯಾಂಕರ್ ನೀರನ್ನು ವಾರ್ಡ್‌ಗಳಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳು 17 ಲಕ್ಷ ವ್ಯಯಮಾಡಲಾಗುತ್ತದೆ ಎಂದರು. ಅವಶ್ಯವಿರುವ ಕಡೆ ಫೈಪ್‌ಲೈನ್ ಆಳವಡಿಸುವುದು, ಹೂಸ ಪಂಪು ಮೋಟಾರ್ ಆಳವಡಿಸಲಾಗುವುದು. ಪಟ್ಟಣದ ಪ್ರತಿ ಮನೆಗೆ ನೀರು ಸಿಗುವ ಹಾಗೆ ಯೋಜನೆ ರೂಪಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಮ್ಮ ವಾರ್ಡ್‌ನಲ್ಲಿ ಮಾಂಸದಂಗಡಿ ಸೇರಿದಂತೆ ಮುಸ್ಲಿಂ ವಾಸಿಗಳ ಸಂಖ್ಯೆ ಹಚ್ಚಾಗಿದ್ದು, ವಾರ್ಡ್‌ನಲ್ಲಿನ ಶುಚಿತ್ವ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಪುರಸಭೆ ವಿಫಲವಾಗಿದೆ ಎಂದು ಅಪಾದಿಸಿದ 17 ನೇ ವಾರ್ಡ್ ಸದಸ್ಯ ಸಾಬೂಸಾಬ್‌ರನ್ನು ಸಮಾಧನ ಪಡಿಸಿದ ತಹಸೀಲ್ದಾರ್ ಶಿವು ಕುಮಾರ್ ತಕ್ಷಣ ವಾರ್ಡ್‌ಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ಉಪಾಧ್ಯಕ್ಷೆ ಶ್ರೀ ವಲ್ಲಿ, ಅಭಿಯಂತರ ಮಂಜುನಾಥ್, ಎಲ್ಲ ಸದಸ್ಯರು ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.