ಗುಡಿಬಂಡೆಯಲ್ಲಿ ಸಿದ್ಧವಾಗುತ್ತಿದೆ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ
ಗುಡಿಬಂಡೆ: ಗಡಿ ಪ್ರದೇಶವಾದ ಪಟ್ಟಣದಲ್ಲಿ ತಾಲೂಕು ಕಸಾಪದಿಂದ ನಡೆಸಲು ಉದ್ದೇಶಿಸಿರುವ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಪಟ್ಟಣದ ಸರ್ಕಾರಿ ಪ್ರೌಢ ಶಾಲಾ ಆವರಣದ ಟಿ.ಪಿ. ಕೈಲಾಸಂ ರಂಗ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಲವಾರು ಗಣ್ಯರು, ಕವಿಗಳು ಭಾಗವಹಿಸಲಿದ್ದಾರೆ.
ಸಮ್ಮಳನಾಧ್ಯಕ್ಷರ ನುಡಿ: ಚಿಕ್ಕಬಳ್ಳಾಪುರ ಜಿಲ್ಲೆ ಆಂಧ್ರದ ಗಡಿಯ ಚಿಕ್ಕ ತಾಲೂಕಾದ ಗುಡಿಬಂಡೆಯಲ್ಲಿ ಹೆಚ್ಚುಪ ಮಂದಿ ತೆಲುಗು ಭಾಷೆ ಮಾತನಾಡುವವರಾಗಿದ್ದು, ಕನ್ನಡದ ಅಭಿವೃದ್ಧಿ ಕುಂಠಿತವಾಗಿದೆ. ಈ ಸನ್ನಿವೇಶದಲ್ಲಿ ಕನ್ನಡ ಭಾಷೆ ನೆಲ, ಜಲ ಹಾಗೂ ಸಾಹಿತ್ಯ ಪೋಷಣೆ ಮಾಡುವ ಗುರುತರ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಸಮ್ಮೇಳನಾಧ್ಯಕ್ಷ ರಫೀಕ್ ಗುಡಿಬಂಡೆ ತಿಳಿಸಿದ್ದಾರೆ.
ಕಸಾಪ ಅಧ್ಯಕ್ಷರ ನುಡಿ: ಸದಭಿರುಚಿ ಸಹೃದಯಿಗಳೇ ತುಂಬಿರುವ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯಾಗಿದೆ. ತಾಲೂಕಿನಲ್ಲಿ ಕನ್ನಡ ಮಾತ್ರವಲ್ಲದೆ, ಗಡಿ ಸಮಸ್ಯೆ, ನೆಲ ಜಲಕ್ಕೆ ಸಂಬಂಧಿಸಿದ ವಿಷಯಗಳಲ್ಲಿರುವ ಹಿನ್ನಡೆಯನ್ನು ಪರಿಹರಿಸಿಕೊಳ್ಳುವ ಪ್ರಯತ್ನ ಆಗಬೇಕಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ.ನ.ನಾಗೇಂದ್ರ ತಿಳಿಸಿದರು.
ಕಾರ್ಯಕ್ರಮದ ವಿವರ: ತಹಸೀಲ್ದಾರ್ ನಂಜಪ್ಪರಿಂದ ರಾಷ್ಟ್ರ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಜಿತ್ ಪ್ರಸಾದ್ರಿಂದ ನಾಡಧ್ವಜಾರೋಹಣ, ಘಟಕದ ಅಧ್ಯಕ್ಷ ಸ.ನ. ನಾಗೇಂದ್ರರಿಂದ ಪರಿಷತ್ ಧ್ವಜಾರೋಹಣ, ಬಳಿಕ ಪಟ್ಟಣದ ರಾಜ ಬೀದಿಯಲ್ಲಿ ಸಮ್ಮೇಳನಾಧ್ಯಕ್ಷ, ಕನ್ನಡಾಂಬೆ ಭುವನೇಶ್ವರಿ ಮೆರವಣಿಗೆ ಮತ್ತು ಕಲಾ ದಿಬ್ಬಣಕ್ಕೆ ಸ್ವಾಗತ. ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿರಿಂದ ಕಾರ್ಯಕ್ರಮ ಉದ್ಘಾಟನೆ, ತಾಲೂಕು ಕ.ಸಾ.ಪ. ಹೊರತರುತ್ತಿರುವ ಗುಡಿ ಹೊತ್ತಿಗೆ ಸ್ಮರಣ ಸಂಚಿಕೆ ಬಿಡುಗಡೆ. ಮಧ್ಯಾಹ್ನ ವಿಚಾರ ಗೋಷ್ಟಿಗಳು, ಬಳಿಕ ಖ್ಯಾತ ಕವಿಗಳಿಂದ ಕವಿ ಗೋಷ್ಠಿ, ಸಂಜೆ ಸಾಧಕರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ, ಐಶ್ವರ್ಯ ಕಲಾನಿಕೇತನ ತಂಡದಿಂದ ನಾಟಕಪ್ರದರ್ಶನ ನಡೆಯುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

