ಒಟ್ಟಿಗೆ ಕಾಣಿಸಿಕೊಂಡ ಎಂಎಲ್ಸಿಗಳು
ಕೋಲಾರ: ಹಲವು ವರ್ಷಗಳಿಂದ ರಾಜಕೀಯ ವಿರೋಧಿಗಳಾಗಿರುವ ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ ಮತ್ತು ಆರ್. ಚೌಡರೆಡ್ಡಿ ಒಂದೇ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಗರ ಹೊರವಲಯದ ಗೋಕುಲ ಎಂಬಿಎ ಕಾಲೇಜಿನಲ್ಲಿ, ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಉದ್ಘಾಟನಾ ಸಮಾರಂಭದಲ್ಲಿ ಇವರಿಬ್ಬರು ಕಾಣಿಸಿಕೊಂಡರೂ ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳಕ್ಕೆ ಮೌನಕ್ಕೆ ಶರಣಾಗಿದ್ದರು.
ಇಬ್ಬರು ರಾಜಕಾರಣಿಗಳು ಶ್ರೀನಿವಾಸಪುರ ತಾಲೂಕಿನವರೇ ಆಗಿದ್ದಾರೆ. ವೈಎಎನ್ ಒಂದು ಬಾರಿ ಪಕ್ಷೇತರ ಸದಸ್ಯರಾಗಿ, ನಂತರ 2ನೇ ಬಾರಿ ಬಿಜೆಪಿ ಸದಸ್ಯರಾಗಿ ಗೆದ್ದು ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದಾರೆ. ಸತತ 2 ಸೋಲುಗಳ ನಡುವೆ ಇತ್ತೀಚೆಗೆ ನಡೆದ ಪದವೀದರರ ಕ್ಷೇತ್ರದಿಂದ ತೂಪಲ್ಲಿ ಚೌಡರೆಡ್ಡಿ 3ನೇ ಪ್ರಯತ್ನದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಈ ಇಬ್ಬರು ಸದಸ್ಯರು ಪರಿಷತ್ನಲ್ಲಿ ಕೂರುವಂತಾಗಿದೆ.
ವೈಎಎನ್ ಭಾಷಣದ ಸರದಿ ಬಂದಾಗ ವೇದಿಕೆಯ ಮೇಲಿದ್ದ ಅತಿಥಿಗಳ ಹೆಸರು ಪ್ರಸ್ತಾಪಿದ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾಗಿರುವ ತೂಪಲ್ಲಿ ಚೌಡರೆಡ್ಡಿ ಯವರೇ ಎಂದು ಹೆಸರಿಸಿ ಸ್ವಾಗತಿಸಿದರು. ಆದರೆ ಚೌಡರೆಡ್ಡಿ ಇದಕ್ಕೆ ತದ್ವಿರುದ್ಧವಾಗಿ ಯಾರೊಬ್ಬರ ಹೆಸರು ಹೇಳಲಿಲ್ಲ. ಇದನ್ನು ಗಮನಿಸಿದ ಅಲ್ಲಿದ್ದವರು ಸನ್ಮಾನ ಮಾಡುವ ಸಂದರ್ಭದಲ್ಲಿ ಇವರಿಬ್ಬರನ್ನು ಅಕ್ಕ-ಪಕ್ಕ ಕೂರಿಸಿ, ಒಂದೇ ಬಾರಿಗೆ ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

