ಕೋಲಾರ

ನಿಗದಿತ ಸಮಯಕ್ಕೆ ಕಾಮಗಾರಿ ಮುಚ್ಚಳಿಕೆ ಪಡೆಯಲು ಸೂಚನೆ

Published On :

ಕೋಲಾರ: ಜಿಪಂನಿಂದ ನಡೆಯುವ ಸರ್ಕಾರಿ ಕಟ್ಟಡಗಳನ್ನು ಕಾಮಗಾರಿಯನ್ನು ಸಂಬಂಧಪಟ್ಟ ಗುತ್ತಿಗೆದಾರರು ಸಕಾಲಕ್ಕೆ ಮುಗಿಸುತ್ತಿಲ್ಲವಾದ್ದರಿಂದ ಕಾಲಮಿತಿಯ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಂದ ಮುಚ್ಚಳಿಕೆಯನ್ನು ಬರೆಸಿಕೊಳ್ಳುವಂತೆ ಜಿಪಂ ಅಧ್ಯಕ್ಷ ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ತೂಪಲ್ಲಿ ನಾರಾಯಣಸ್ವಾಮಿ ಅದಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಗುತ್ತಿಗೆ ಪಡೆಯುವ ಏಜೆನ್ಸಿಗಳು ಸಕಾಲಕ್ಕೆ ಹಣವನ್ನು ಪಡೆಯುತ್ತಾರೆ. ಆದರೆ, ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರ ಮಾಡುತ್ತಿಲ್ಲವೆಂದು ವಿಷಾಧಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶಕುಂತಲಾ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿರುವ 771 ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ದೀಪಗಳು ಮತ್ತು ಫ್ಯಾನ್ಗಳನ್ನು ಅಳವಡಿಸಲು ನಿರ್ಮಿತಿ ಕೇಂದ್ರಕ್ಕೆ ಮುಂಗಡವಾಗಿ ಹಣ ಪಾವತಿಸಿದ್ದರೂ ಕೆಲಸ ಆರಂಭಿಸಿಲ್ಲವೆಂದು ಆರೋಪಿಸಿದರು.
ಪ್ರತಿ ಅಂಗನವಾಡಿ ಕೇಂದ್ರಕ್ಕೆ 8,500 ರು. ಮಂಜೂರಾಗಿದ್ದು ಗುತ್ತಿಗೆದಾರರು ಹಣ ಸಾಕಾಗುವುದಿಲ್ಲ ಎಂದು ವಿದ್ಯುತ್ದೀಪ ಮತ್ತು ಫ್ಯಾನ್ ಅಳವಡಿಸಿಲ್ಲ ಎಂದು ತಿಳಿಸಿದರು.ಇದಕ್ಕೆ ಧ್ವನಿಗೂಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇಶಕ ಪದ್ಮನಾಭ್ ಮಾತನಾಡಿ, ಶ್ರೀನಿವಾಸಪುರ ತಾಲೂಕಿನ ಪುಲಗರಕೋಟ, ರಾಯಲ್ಪಾಡು, ಮುಳಬಾಗಲು ತಾಲೂಕಿನ ಎನ್. ವಡ್ಡಹಳ್ಳಿಯಲ್ಲಿ ಶಿಕ್ಷಕರ ವಸತಿ ನಿಲಯ ನಿರ್ಮಾಣಕ್ಕೆ ನಿರ್ಮಿತಿ ಕೇಂದ್ರದವರು ಗುತ್ತಿಗೆ ಪಡೆದು ಇದುವರೆಗೂ ಇಲಾಖೆಗೆ ಒಪ್ಪಿಸಿಲ್ಲವೆಂದರು.
ಅದೇ ರೀತಿ ಮಾಲೂರು ತಾಲೂಕಿನ ಬಿ.ಎನ್. ದೊಡ್ಡಿ, ಬೇತಮಂಗಲದಲ್ಲಿ ಶಿಕ್ಷಕರ ವಸತಿ ನಿಲಯಕ್ಕೆ ತಲಾ 48 ಲಕ್ಷ ಬಿಡುಗಡೆಯಾಗಿದೆ ಆದರೆ ಇದುವರೆಗೂ ಕಾಮಗಾರಿ ಪ್ರಾರಂಭಗೊಂಡಿಲ್ಲ ಎಂದು ದೂರಿದರು.
ನಿರ್ಮಿತಿ ಕೇಂದ್ರ ಅಧಿಕಾರಿ ನಾರಾಯಣಗೌಡ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತತ್ದ್ವೀಪ ಮತ್ತು ಫ್ಯಾನ್ಗಳನ್ನು ಅಳವಡಿಸಲಾಗಿದೆ, ತಮಗೆ ಹೆಚ್ಚುವರಿಯಾಗಿ 7.50 ರು. ಬರಬೇಕಾಗಿದ್ದು, ತಾ.ಪಂ.ಅನುದಾನದಲ್ಲಿ  ಹಣ ನೀಡಬಹುದು ಎಂದು ಹೇಳಿದರು. ಜಿಪಂ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಯಾವುದೇ ರೀತಿಯ ಅಧಿಕಾರವಿಲ್ಲ, ಸುತ್ತೋಲೆಗಳನ್ನು ಅಧಿಕಾರಿಗಳಿಗೆ ತಲುಪಿಸುವಂತಹ ಪೋಸ್ಟ್ ಆಫೀಸ್ ಆಗಿ ಜಿಪಂ ಪರಿವರ್ತನೆ ಆಗುತ್ತಿದೆ ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.
ಮುಳಬಾಗಲು ತಾಲೂಕಿನ ರಾಜೇಂದ್ರಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆಯನ್ನು ಮುಂದಿನ ಫೆ.12 ರೊಳಗೆ ಇತ್ಯರ್ಥ ಮಾಡುವಂತೆ ಜಿಪಂ ಅಧ್ಯಕ್ಷರು ಡಿಎಚ್ಒ ಪಯಾಜಜ್ಖಾನ್ಗೆ ಸೂಚನೆ ನೀಡಿದರು. ಸ್ಥಾಯಿ ಸಮಿತಿಯ ಸದಸ್ಯರಾದ ಮಂಗಮ್ಮ ಮುನಿಸ್ವಾಮಿ, ಕಿಟ್ಟಪ್ಪ, ಸೋಮಶೇಖರ್, ಸಿಇಒ ವಿನೋತ್ ಪ್ರಿಯಾ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.