ಮೆಡಿಕಲ್ಸ್ ಬಾಗಿಲು ಮುರಿದು ಕಳವು
ಚಿಂತಾಮಣಿ: ಕಳ್ಳರ ಗುಂಪೊಂದು ಔಷಧಿ ಅಂಗಡಿ ಬಾಗಿಲ ಬೀಗ ಹೊಡೆದು ಒಳ ನುಗ್ಗಿ ಸಾವಿರಾರು ರುಪಾಯಿ ನಗದು ದೋಚಿ ಪರಾರಿಯಾಗಿರುವ ಘಟನೆ ಮಾರುತಿ ಮೆಡಿಕಲ್ಸ್‌ನಲ್ಲಿ ನಡೆದಿದೆ.
ನಗರದ ಜೋಡಿ ರಸ್ತೆಯ ರಾಘವೇಂದ್ರಸ್ವಾಮಿ ದೇವಾಲಯದ ಪಕ್ಕದ ಮಾರುತಿ ಮೆಡಿಕಲ್ಸ್ ಮಾಲೀಕ ಲಕ್ಷ್ಮಿನಾರಾಯಣ ಶೆಟ್ಟಿ ಸೋಮವಾರ ರಾತ್ರಿ ಬೀಗ ಹಾಕಿ ಹೋದ ನಂತರ ಒಳನುಗ್ಗಿರುವ ಕಳ್ಳರು ಸುಮಾರು 15 ಸಾವಿರ ರುಪಾಯಿ ನಗದು ಮತ್ತು ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.ಸ್ಥಳಕ್ಕೆ ವೃತ್ತ ನಿರೀಕ್ಷಕ ನಂಜಪ್ಪ, ಕ್ರೈಮ್ ಸಬ್‌ಇನ್ಸ್‌ಪೆಕ್ಟರ್ ಬಸವರಾ ಬಂದು ಪರಿಶೀಲಿಸಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದೇಗುಲದಲ್ಲಿ ಕಳವು
ತಾಲೂಕಿನ ಆನೂರು ಗ್ರಾಮದ ಸೋಮೇಶ್ವರ ದೇವಾಲಯದಲ್ಲಿ ಸೋಮವಾರ ರಾತ್ರಿ ಕಳ್ಳರು ದೇವಾಲಯ ಮುಂಭಾಗದ ಬಾಗಿಲನ್ನು ಹೊಡೆದು ಒಳ ನುಗ್ಗಿ ಹುಂಡಿಯಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಓಟದ ಸ್ಪರ್ಧೆ ವೇಳೆ ಕಲ್ಲು ತೂರಾಟ; 4 ಮಂದಿ ಬಂಧನ
ಬಂಗಾರಪೇಟೆ: ಕಳೆದ ಭಾನುವಾರ ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಅನಧಿಕೃತವಾಗಿ ಏರ್ಪಡಿಸಿದ್ದ ರಾಸುಗಳ ಓಟದ ಸ್ಪರ್ಧೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಿದ ನಾಲ್ವರು ಆರೋಪಿಗಳನ್ನು ಕಾಮಸಮುದ್ರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಟ್ಟಣದ ರೆಹಮಾನ್, ವರದರಾಜು, ತಮಿಳುನಾಡಿನ ನರಸಿಂಹನ್ ಮತ್ತು ಪ್ರಭು ಎಂದು ಗುರುತಿಸಲಾಗಿದೆ. ಪೊಲೀಸ್ ಇಲಾಖೆ ಅನುಮತಿ ಇಲ್ಲದೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಸುಗಳ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಇದಕ್ಕೆ ಪಕ್ಕದ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದಲೂ ಜನರು ಭಾಗವಹಿಸಿದ್ದರು. ಪೊಲೀಸರಿಗೆ ಮಾಹಿತಿ ಇದ್ದರೂ ಓಟದ ಸ್ಪರ್ಧೆ ಮೊದಲೇ ತಡೆಯದೆ ಜನಸಂಖ್ಯೆ ಹೆಚ್ಚಾಗಿ ಸ್ಪರ್ಧೆ ಮುಗಿಯುವ ಹಂತದಲ್ಲಿ ಪೊಲೀಸರು ನಿಲ್ಲಿಸುವಂತೆ ಸೂಚಿಸಿದ್ದೆ ಕಲ್ಲು ತೂರಲು ಕಾರಣವಾಗಿದೆ.
ಈ ಘಟನೆಯಿಂದ ಮೂರು ಪೊಲೀಸರು ಗಾಯಗೊಂಡು ಮೂರು ವಾಹನಗಳಿಗೂ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅಪಘಾತ; ಪಾರಾದ ಬೈಕ್ ಸವಾರ
ಮಾಲೂರು: ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ಎರಡು ವಾಹನಗಳ ನಡುವೆ ಸಿಲುಕಿದ ಬೈಕ್ ಸವಾರ ಗಾಯವಿಲ್ಲದೆ ಪಾರಾದ ಘಟನೆ ಪಟ್ಟಣದ ಪುರಸಭೆ ರಸ್ತೆಯಲ್ಲಿ ನಡೆದಿದೆ. ಬಸ್‌ನಿಲ್ದಾಣದ ಕಡೆಯಿಂದ ಬಂದ ಬೈಕ್ ಸವಾರ ಎದುರಿಗೆ ಬಂದ ಶಾಲಾ ವಾಹನವನ್ನು ಬಲಗಡೆ ಯಿಂದ ಪಾಸ್ ಮಾಡಲು ಹೋದಾಗ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟಾಟಾ ಸುಮೋ ಹಾಗೂ ಶಾಲಾ ವಾಹನದ ಮಧ್ಯೆ ಸಿಲುಕಿತು. ಈ ವೇಳೆ ಬೈಕ್ ಸವಾರ ಎರಡು ಕಾಲುಗಳನ್ನು ಮೇಲೆತ್ತಿದ ಪರಿಣಾಮ ಅಪಾಯ ತಪ್ಪಿದೆ. ಸಾರ್ವಜನಿಕರು ಟಾಟಾ ಸುಮೋದಿಂದ ಜಜ್ಜಿಹೋಗಿದ್ದ ಬೈಕ್‌ನ್ನು ಬೇರ್ಪಡಿಸಿದರು. ಈ ಘಟನೆಯಿಂದ ಅರ್ಧ ಗಂಟೆಕಾಲ ಮುಖ್ಯ ಬಜಾರ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಆದರೆ ಘಟನೆ ನಡೆದು ಅರ್ಧ ಗಂಟೆಯಾದರೂ ಪೊಲೀಸರು ಕಾಣಿಸಿಕೊಳ್ಳದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

