ಕೋಲಾರ

ಸ್ಮಶಾನ ಜಾಗ ಒತ್ತುವರಿ ನಾಚಿಕೆಗೇಡು: ಸುಧಾಕರ್

Published On :

ಚಿಕ್ಕಬಳ್ಳಾಪುರ: ಆಲಯಗಳು ಮತ್ತು ಸ್ಮಶಾನಗಳೂ ಸಹ ಹೆಚ್ಚಿಗೆ ಅಕ್ರಮ ಒತ್ತುವರಿಗೆ ಗುರಿಯಾಗುತ್ತಿರುವಂತಹುದು ಬೇಸರ ಸಂಗತಿ ಎಂದು ಶಾಸಕ ಡಾ. ಕೆ. ಸುಧಾಕರ್ ವಿಷಾದ ವ್ಯಕ್ತಪಡಿಸಿದರು.
ತಾಲ್ಲೂಕಿನ ಗಿಡ್ನಹಳ್ಳಿ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಜಾಗಗಳನ್ನು ಉಳಿಸುವಂತಹ ಜವಾಬ್ದಾರಿಯು ಪ್ರತಿಯೊಬ್ಬರ ಮೇಲಿದೆ. ಆದರೆ, ಹಲವರ ದುರಾಸೆಯ ಫಲವಾಗಿ ಸರ್ಕಾರಿಗಳು ಜಾಗಗಳು ಅಕ್ರಮ ಒತ್ತುವರಿಗೆ ನಲುಗುತ್ತಿವೆ. ಅದರಲ್ಲೂ ಶಾಲಾ ಆವರಣ, ದೇವಸ್ಥಾನದ ಜಾಗ ಹಾಗೂ ಸ್ಮಶಾನ ಭೂಮಿ ಒತ್ತುವರಿ ಆಗುತ್ತಿರುವುದು ದುರದೃಷ್ಟಕರ. ಗ್ರಾಮಕ್ಕೊಂದು ಮೀಸಲಿಡಲಾಗುತ್ತಿರುವ ಸ್ಮಶಾನಗಳು ಕೂಡ ಸುರಕ್ಷಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವ ಸಲುವಾಗಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.
ಮನುಷ್ಯ ತನ್ನ ಬಳಿ ಇರುವ ಆಸ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕು.ಪರರ ಆಸ್ತಿಗೆ ಆಸೆ ಪಡಬಾರದು. ವಿಶಾಲ ಮನೋಭಾವ ಉಳ್ಳ ವ್ಯಕ್ತಿ ಅತ್ಯಂತ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ,ತಾ.ಪಂ. ಸದಸ್ಯ ರವಿ, ಗ್ರಾಪಂ. ಸದಸ್ಯರಾದ ಮಂಜುನಾಥ್, ಲಕ್ಷ್ಮಕ್ಕ, ಮುಖಂಡರಾದ ಸಿ.ಡಿ.ನಾರಾಯಣಸ್ವಾಮಿ, ಚನ್ನಕೃಷ್ಣಪ್ಪ, ಜಗದೀಶ್, ವೆಂಕಟೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.