ವಿಕಲಚೇತನರ ತಪಾಸಣಾ ಶಿಬಿರ
ಶಿಡ್ಲಘಟ್ಟ: ಸರ್ಕಾರದ ಸೌಲಭ್ಯ ಪಡೆಯಲು ವಿಕಲಚೇತನರು ಗುರುತಿನ ಚೀಟಿಗಳಿಗಾಗಿ ಜಿಲ್ಲಾಸ್ಪತ್ರೆಗೆ ಅಲೆದಾಡುವ ಅವಶ್ಯಕತೆಯಿಲ್ಲವೆಂದು ವೈದ್ಯಾಧಿಕಾರಿ ಡಾ.ಅಮರೇಶ್ ಗದ್ದಿ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂಗವಿಕಲರಿಗಾಗಿ ಏರ್ಪಡಿಸಿದ್ದ ತಪಾಸಣಾ ಶಿಬಿರದಲ್ಲಿ ಮಾತನಾಡಿ, ವಿಕಲಾಂಗರಿಗೆ ಸರ್ಕಾರ ವಿತರಣೆ ಮಾಡುವ ಮಾಶಾಸನ, ಉಚಿತ ಬಸ್ಪಾಸ್, ಬ್ಯಾಂಕುಗಳ ಮುಖಾಂತರ ಸಾಲವಿತರಣೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯಲು ಗುರುತಿನ ಚೀಟಿ ಉಪಯುಕ್ತವಾಗಿದೆ, ಪ್ರತಿತಿಂಗಳು 2 ನೇ ಮಂಗಳವಾರ ತಪಾಸಣಾ ಶಿಬಿರ ಏರ್ಪಡಿಸಿ, ಅಂಗವೈಕಲ್ಯ, ದೃಷ್ಟಿದೋಷ ಸೇರಿದಂತೆ ಅನೇಕ ವೈಕಲ್ಯಗಳನ್ನು ಗುರ್ತಿಸಲು ಮೂಳೆತಜ್ಞರು, ನೇತ್ರ ತಜ್ಞರು ಉಪಸ್ಥಿತರಿದ್ದು, ಉಚಿತವಾಗಿ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತದೆ ಎಂದರು. ತಾಲೂಕಿನ ವಿವಿಧ ಭಾಗಗಳಿಂದ ಆಸ್ಪತ್ರೆಗೆ ಬಂದಿದ್ದ ಅಂಗವಿಕಲರಿಗೆ ಆಸ್ಪತ್ರೆಯ ವೈದ್ಯರಾದ ಡಾ.ತಿಮ್ಮೇಗೌಡ, ಡಾ. ಅಮರೇಶ್ಗದ್ದಿ, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ವೈದ್ಯ ಕುಮಾರ್ ಪರೀಕ್ಷೆ ನಡೆಸಿದರು. ಗುರುತಿನ ಚೀಟಿಯನ್ನು ಪಡೆಯಲು ತಾಲೂಕಿನ ವಿವಿಧ ಗ್ರಾಮಗಳಿಂದ ವಿಕಲಾಂಗರು ಆಸ್ಪತ್ರೆಯಲ್ಲಿ ಸಾಲುಗಟ್ಟಿ ನಿಂತಿದ್ದರು.
ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ನಂಗಲಿಯಲ್ಲಿ ಸನ್ಮಾನ
ಮುಳಬಾಗಲು: ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ವಿ. ಚಂದ್ರಶೇಖರ್ ನಂಗಲಿ ಅವರನ್ನು ಅವರು ಸ್ವಂತ ಗ್ರಾಮವಾದ ನಂಗಲಿಯಲ್ಲಿ ಬುಧವಾರ ಸನ್ಮಾನಿಸುವುದರೊಂದಿಗೆ ಅವರ ದಂಪತಿಗಳಿಗೆ ಗ್ರಾಮದಲ್ಲಿ ಮೆರವಣೆಗೆ ನಡೆಸಲಾಯಿತು. ನಂತರ ಗ್ರಾಮದಿಂದ ನೂರಾರು ಮಂದಿ ವಾಹನಗಳಲ್ಲಿ ಕೋಲಾರಕ್ಕೆ ತೆರಳಿದರು. ನಂಗಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗಡಿನಾಡು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ. ಪ್ರಭಾಕರಗುಪ್ತ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮು.ಕೃ. ಪದ್ಮನಾಭರಾವ್, ಕಾರ್ಯಕಾರಿ ಸಮಿತಿ ಸದಸ್ಯ ಕೆ.ಪ್ರಕಾಶ್, ಗ್ರಾಪಂ ಅಧ್ಯಕ್ಷೆ ಸವಿತಾ ಅಮರೇಂದ್ರಕುಮಾರ್, ನಿವೃತ್ತ ಹಿರಿಯ ಮುಖ್ಯ ಶಿಕ್ಷಕ ಎನ್.ಎಸ್. ಸುಬ್ಬಣ್ಣ, ಗ್ರಾಪಂ ಸದಸ್ಯ ಶ್ರೀಧರ್, ಶಿಕ್ಷಣ ಸಂಯೋಜಕ ನಿರಂಜನ್, ಸುಬ್ರಮಣಿ, ಕೆ.ಅಶೋಕ್, ಶಿಕ್ಷಕ ಜಿ.ಕೆ. ಶಂಕರ್, ಮತೀನ್, ನವಾಜ್ಪಾಷ, ಕೃಷ್ಣಪ್ಪ, ಕೋದಂಡಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

