ಕೋಲಾರ

ನ್ಯಾಯಾಧೀಶರೆದುರೇ ರೌಡಿ ವಿಷ ಸೇವನೆ

Published On :

ಮಾಲೂರು: ಅಮಾಯಕನಾದ ತನ್ನನ್ನು ಪೊಲೀಸರು, ಗ್ರಾಪಂ ಅಧಿಕಾರಿ ಜೊತೆ ಸೇರಿ ರೌಡಿ ಶೀಟನಲ್ಲಿ ಸೇರಿಸಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ರೌಡಿಯೂಬ್ಬ ನ್ಯಾಯಾಧೀಶರ ಮುಂದೆ ವಿಷ ಸೇವಿಸಿ ಅತ್ಮಹತ್ಸೆಗೆ ಯತ್ನಿಸಿದ ಘಟನೆ ಗುರುವಾರ ಇಲ್ಲಿನ ನ್ಯಾಯಲಯದಲ್ಲಿ ನಡೆದಿದೆ.
ತಾಲೂಕಿನ ಅಂಚೆಮುಸ್ಕೂರು ಗ್ರಾಮದ ವಿ.ದೇವರಾಜ್ ಎಂಬ ರೌಡಿ ಇಲ್ಲಿನ ನ್ಯಾಯಾಲಯಕ್ಕೆ ನುಗ್ಗಿ ನ್ಯಾಯಾಧೀಶರ ಎದುರು ವಿಷ ಸೇವಿಸಿದ್ದಾನೆ. ಘಟನೆಯಿಂದ ವಿಚಿಲತರಾದ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್ ಅವರು ತಕ್ಷಣ ನ್ಯಾಯಾಲಯದ ಸಂಕೀರ್ಣದಲ್ಲಿದ್ದ ಪೊಲೀಸ್ ಪೇದೆಯನ್ನು ಕರೆಸಿ ವಿಷ ಸೇವಿಸಿದ ದೇವರಾಜ್‌ನನ್ನು ಆಸ್ಪತ್ರೆಗೆ ಸಾಗಿಸಿ ಪ್ರಕರಣದ ವಿಚಾರ ತಿಳಿಸುವಂತೆ ಆದೇಶಿಸಿದರು.
ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಸಾಗಿಸಲಾಗಿದೆ. ಇನ್ಸ್‌ಪೆಕ್ಟರ್ ಶಿವುಕುಮಾರ್ ಹಾಗೂ ಎಸ್‌ಐ ದಯಾನಂದ್ ಆಸ್ಪತ್ರಗೆ ಭೇಟಿ ನೀಡಿ ವಿಷ ಸೇವಿಸಿದ ರೌಡಿ ದೇವರಾಜ್ ನಿಂದ ಸ್ಟೇಟ್‌ಮೆಂಟ್ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಂಚಾಯ್ತಿ ಕಚೇರಿಯಲ್ಲಿ ದಾಂಧಲೆ ಮಾಡಿದ್ದ ದೇವರಾಜ್- ಕಳೆದ ವರ್ಷ 27-7-13 ರಂದು ತಾಲೂಕಿನ ಚಿಕ್ಕ ತಿರುಪತಿ ಗ್ರಾಪಂನಲ್ಲಿ ಪಡಿತರ ವಿತರಣೆಯಲ್ಲಿ ತಕರಾರು ಮಾಡಿ ಕಚೇರಿಯಲ್ಲಿದ್ದ ಕಂಪ್ಯೂಟರ್ ಸೇರಿದಂತೆ ಇತರೆ ವಸ್ತುಗಳನ್ನು ಹೊಡೆದು ಹಾಕಿದ್ದ. ಈತನ ವಿರುದ್ಧ ಅಂದಿನ ಪಂಚಾಯ್ತಿ ಅಧಿಕಾರಿಗಳು ದೂರು ನೀಡಿದ್ದರು ಪ್ರಕರಣ ಈಗ ನ್ಯಾಯಲಯದ ಅಂಗಳಕ್ಕೆ ಬಂದಿದ್ದು, ಈ ಸಂಬಂಧ ಸಮನ್ಸ್ ಆರೋಪಿಗೆ ಹೋಗಿತ್ತು. ಹಾಲಿ ಅಮ್ಮ ಚಾರಿಟಬಲ್ ಟ್ರಸ್ಟ್ ಹಾಗೂ ಡಾ.ಅಂಬೇಡ್ಕರ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿಕೊಂಡಿದ್ದ ದೇವರಾಜ್ ಅನ್ನದಾನ, ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದ. ಪಂಚಾಯ್ತಿ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರ ಕುತಂತೇರದಿಂದ ನನ್ನ ಹೆಸರು ರೌಡಿ ಪಟ್ಟಿಯಲ್ಲಿ ಸೇರಿಸಿದ್ದಾರೆ. ಇದರಿಂದ ಮಾನ ಹೋಗುತ್ತಿದೆ ಎಂದು ಹೇಳಿ ನ್ಯಾಯದೂರಕಿಸುವಂತೆ ನ್ಯಾಯಧೀಶರ ಮುಂದೆ ಚಿಗಡಿ ಬೆಳೆಗೆ ಉಪಯೋಗಿಸುವ ಬಾಯರ್ಸ್ ಕಂಪನಿಯ ಫೇಮ್ ವಿಷ ತಗೆದುಕೊಂಡಿದ್ದಾನೆ.
ವಿಷ ತೆಗೆದುಕೊಂಡ ನಂತರ ಕನ್ನಡ ಪ್ರಭದೊಂದಿಗೆ ಮಾತನಾಡಿದ ದೇವರಾಜ್, ರೌಡಿ ಪಟ್ಟಿಯಿಂದ ಹೆಸರು ತೆಗೆಸುವಂತೆ ನ್ಯಾಯಾಧೀಶರಲ್ಲಿ ಹಾಗೂ ಶಾಸಕರಲ್ಲಿ ಒತ್ತಾಯಿಸಿರುವ ಪತ್ರ ನೀಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.