ಕೋಲಾರ

ವರದಕ್ಷಿಣೆ ಕಿರುಕುಳ: ಮಹಿಳೆ ಸಾವು ಖಂಡಿಸಿ ಧರಣಿ

Published On :

ಶಿಡ್ಲಘಟ್ಟ: ಕೆ.ಕೆ ಪೇಟೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಿ ಸೀಮೆಎಣ್ಣೆ ಸುರಿದು ರೇವತಿ ಎಂಬಾಕೆ ಅತ್ತೆ ಮತ್ತು ಗಂಡ ಸುಟ್ಟಿರುವುದಾಗಿ ಆರೋಪಿಸಿ ಪುರ ಠಾಣೆ ಎದುರು ಶವವನ್ನಿಟ್ಟು ಪ್ರತಿಭಟಿಸಿದ ಘಟನೆ ಗುರುವಾರ ನಡೆದಿದೆ.
ಪಟ್ಟಣದ ಕೆ.ಕೆ. ಪೇಟೆ ವಾಸಿ ಚಂದ್ರಶೇಖರ್ ಕೆ.ಎಚ್.ಬಿ ಕಾಲೋನಿಯ ರೇವತಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇತ್ತೀಚೆಗೆ ವರದಕ್ಷಿಣೆ ತರುವಂತೆ ಆಕೆಯನ್ನು ಹೊಡೆದು ತವರು ಮನೆಗೆ ಕಳಿಸಿದ್ದ ಎನ್ನಲಾಗಿದೆ. ಗಂಡನ ದೈಹಿಕ ಹಲ್ಲೆಯಿಂದ ರೇವತಿ ಸರ್ಕಾರಿ ಆಸ್ಪತ್ರೆಗೆ ಎರಡು ಬಾರಿ ದಾಖಲಾಗಿದ್ದು, ಪುರಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಜಿ ಪಂಚಾಯಿತಿ ಮೂಲಕ ಶ್ರೀನಿವಾಸ ಮತ್ತು ಅವನ ತಾಯಿ ಮತ್ತೆ ಕರೆದೊಯ್ದಿದ್ದರು.
ಆದರೆ ಗಂಡ ಮತ್ತು ಅತ್ತೆ ಸೇರಿ ರೇವತಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಲಾಗಿದ್ದು, ಶೇ.80 ರಷ್ಟು ಸುಟ್ಟ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಘಟನೆ ಕುರಿತು ಪುರಠಾಣೆಯಲ್ಲಿ ದೂರು ನೀಡಿದ್ದರು. ರೇವತಿಗೆ ಎರಡು ವರ್ಷದ ಹೆಣ್ಣು ಮಗುವಿದ್ದು, ಕೊನೆಯುಸಿರೆಳೆಯುತ್ತಿರುವ ತಾಯಿಗೆ ಮಗುವನ್ನೂ ತೋರಿಸದೆ ಆರೋಪಿಗಳು ಮಗುವಿನೊಂದಿಗೆ ಪರಾರಿಯಾಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದರು.
ಹತ್ತು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೇವತಿ ಬುಧವಾರ ಮೃತಪಟ್ಟಿದ್ದು, ಆಕೆಯ ಸಂಬಂಧಿಕರು, ಸ್ತ್ರೀ ಶಕ್ತಿ ಸಂಘದವರು ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ಗುರುವಾರ ಶವವನ್ನು ಠಾಣೆಯ ಮುಂದಿಟ್ಟು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾದ ಪೊಲೀಸರ ವಿರುದ್ಧ ಕಿಡಿ ಕಾರಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಂದು ನ್ಯಾಯ ಒದಗಿಸಬೇಕು, ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.