ಕೋಲಾರ

ಭಾಷಾ ಮಾಧ್ಯಮ: ಸುಪ್ರೀಂ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿ

Published On :

ಕೋಲಾರ: ರಾಜ್ಯ ಸರ್ಕಾರದ ದ್ವಂದ್ವ ನೀತಿಯಿಂದಾಗಿ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಪೋಷಕರಿಗೇ ಶಿಕ್ಷಣ ಮಾಧ್ಯಮ ಆಯ್ಕೆಯ ವಿಷಯ ಬಿಡುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ್ದು ಇದೇನು ತೀರ್ಪಲ್ಲವಾದ್ದರಿಂದ ರಾಜ್ಯ ಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಬೇಕೆಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕಲಿಸುವಂತಾಗದಿದ್ದರೆ ರಾಜ್ಯದಲ್ಲಿ ಕನ್ನಡ ಉಳಿಯಲ್ಲವೆಂದು ಅಭಿಪ್ರಾಯಪಟ್ಟರು. ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ ನಂಗಲಿ ಮಾತನಾಡಿ, ಭೂಮಿತತ್ವದ ಆಧಾರದ ಮೇಲೆ ಪರಿಸರ ಅವಲಂಬಿತವಾಗಿದ್ದು, ಬ್ರಿಟಿಷರನ್ನು ದೇಶ ಬಿಟ್ಟು ಓಡಿಸಲು ನಡೆದ ರೀತಿಯಲ್ಲೇ ಪರಿಸರ ಉಳಿವಿಗಾಗಿ ರಾಷ್ಟ್ರೀಯ ಚಳವಳಿ ನಡೆಯಬೇಕಾಗಿದೆ ಎಂದು ಪ್ರತಿಪಾದಿಸಿದರು. ಪರಿಸರ ಸಂರಕ್ಷಣೆ ಮೊದಲು ನಮ್ಮ ಮನೆಗಳಿಂದ ಆರಂಭವಾಗಬೇಕು, ನಂತರ ಹಳ್ಳಿ, ಹೋಬಳಿ, ಪಟ್ಟಣ, ನಗರ, ತಾಲೂಕು, ಜಿಲ್ಲೆ, ರಾಜಧಾನಿ ಹಾಗೂ ರಾಷ್ಟ್ರಕ್ಕೆ ವಿಸ್ತರಣೆ ಆದಲ್ಲಿ ಮಾತ್ರ ಭೂಮಿತಾಯಿ ಕರುಣಿಸುತ್ತಾಳೆಂದು ಹೇಳಿದರು.
ಸಾಹಿತಿ ಆಗ್ರಹಾರ ಕೃಷ್ಣಮೂರ್ತಿ ಸಮಾರೋಪ ಭಾಷಣ ಮಾಡಿ, ಭಾಷೆಯನ್ನು ಪ್ರೀತಿಸದವರು ದೇಶವನ್ನು ಪ್ರೀತಿಸಲಾರರು, ಕನ್ನಡಕ್ಕೆ ಇರುವ ಸ್ಥಾನಮಾನದ ಬಗ್ಗೆ ಅರಿತು ನಾಡನ್ನು ಸಮೃದ್ಧಿಯಾಗಿ ಕಟ್ಟಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ 2013-14ನೇ ಸಾಲಿನಲ್ಲಿ ಬಿಎ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್‌ಗಳಿಸಿ 7 ಚಿನ್ನದ ಪದಕ ಗಳಿಸಿರುವ ಹಾಗೂ ಪ್ರಸ್ತುತ ಬೆಂಗಳೂರು ವಿವಿಯಲ್ಲಿ ಕನ್ನಡ ಎಂಎ ವ್ಯಾಸಂಗ ಮಾಡುತ್ತಿರುವ ಮಾಲೂರು ತಾಲೂಕಿನ ಮಾಸ್ತಿ ಹೋಬಳಿಗೆ ಸೇರಿದ ಚಾವರಮಂಗರದ ತಿಮ್ಮರಾಯಪ್ಪನವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತ ವಾಸುದೇವಹೊಳ್ಳ, ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ, ಗೌ. ಕಾರ್ಯದರ್ಶಿ ಮಾಲೂರು ಅಶ್ವತ್ಥರೆಡ್ಡಿ, ಮಾಲೂರು ಘಟಕದ ಅಧ್ಯಕ್ಷ ಮಧುಸೂಧನ್, ಬಂಗಾರಪೇಟೆಯ ಆರ್. ಅಶ್ವತ್, ಕೋಲಾರದ ನಾರಾಯಣಪ್ಪ, ಶ್ರೀನಿವಾಸಪುರದ ಮುನಿವೆಂಕಟೇಗೌಡ, ನಾಗೇಶ್ವರಿ ಚಂದ್ರಶೇಖರ ನಂಗಲಿ ಇದ್ದರು. ಇದಕ್ಕೂ ಮುನ್ನ ಖ್ಯಾತ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಸಂಗೀತ ಸಂಯೋಜನೆಯಲ್ಲಿ ಕವಿ ಕಾವ್ಯ ಗಾಯನ ನಡೆಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.