ಕೋಲಾರ

ಪ್ರಾಕೃತಿಕ ಸಂಪನ್ಮೂಲ ಮಿತವಾಗಿ ಬಳಸಿ

Published On :

ಚಿಂತಾಮಣಿ: ಪ್ರಾಕೃತಿಕ ಸಂಪನ್ಮೂಲವನ್ನು ಮಿತವಾಗಿ ಬಳಸಿ, ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಹೇಳಿದರು.
ತಾಲೂಕಿನ ಕೈವಾರ ಗ್ರಾಮದ ಶ್ರೀ ಯೋಗಿ ನಾರೇಯಣ ಮಠದಲ್ಲಿ ನಡೆದ ಹುಣ್ಣಿಮೆ ಕಾರ್ಯಕ್ರಮದಲ್ಲಿ ಕಾಲಜ್ಞಾನ ಚಿಂತನೆ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಇನ್ನೂರು ವರ್ಷಗಳ ಹಿಂದೆ ಕೈವಾರದ ಯೋಗಿ ನಾರೇಯಣ ತಾತಯ್ಯನವರು ದಿವ್ಯದೃಷ್ಟಿಯಿಂದ ರಚಿಸಿರುವ ಕಾಲಜ್ಞಾನ ಹಲವಾರು ವಿಶಿಷ್ಟತೆಗಳಿಂದ ಕೂಡಿದ್ದು, ಮನಕುಲಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದರು.
ತಾತಯ್ಯನವರ ಕಾಲಜ್ಞಾನದ ಮೊದಲ ಪದ್ಯದಲ್ಲಿಯೇ 'ಈ ಭೂಮಿ ಭಾರವನ್ನು ನಾನು ಹೊರೆಯಲಾರೆ ಎಂದು ಭೂಮಿ ತಾಯಿ ಮೊರೆಯಿಡುವ' ಪದ್ಯವನ್ನು ರಚಿಸಿದ್ದಾರೆ.
ಕಾಲಜ್ಞಾನದ 5ನೇ ಪದ್ಯದಲ್ಲಿ ವಿವರಿಸಿರುವಂತೆ 'ಜಯನಾಮಾಂತ್ಯಮು ಪ್ರಜುಲ ಬಹು ಘಾಸಿ, ವಕಕಾಸು ಪರಹಾನಿ, ಲೇಮಿ ವರ್ತಕುಲಕು, ಆದಿಗಾಕ ಧ್ಯಾನಮು ಅಗ್ಗವ ಕಾದುರಾ' ಜಯನಾಮಾಂತ್ಯವು ಪ್ರಜೆಗಳಿಗೆ ಬಹಳ ಕಷ್ಟ, ಹಣಕಾಸಿಗಾಗಿ ಪರರನ್ನು ಹಿಂಸಿಸಬೇಕಾಗುತ್ತದೆ. ವ್ಯಾಪಾರ ವಾಣಿಜ್ಯಗಳ ಅವನತಿ, ನಷ್ಟ ಅನುಭವಿಸಬೇಕಾಗಿರುತ್ತದೆ. ದವಸ ಧಾನ್ಯಗಳ ಬೆಲೆ ಕಡಿಮೆಯಾಗುವುದಿಲ್ಲ ಎಂದಿದ್ದಾರೆ. 2014 ಮಾರ್ಚ್ 31 ರಿಂದ ಬರುವುದೇ ಜಯನಾಮ ಸಂವತ್ಸರ. ಈಗಾಗಲೇ ಬೆಲೆಗಳು ಗಗನಕ್ಕೇರಿ ಜನರಿಗೆ ಬಿಸಿ ಮುಟ್ಟಿಸಿದೆ ಎಂದು ಕಾಲಜ್ಞಾನದ ಅರ್ಥ ವಿವರಿಸಿದರು.
ಕೈವಾರ ತಾತಯ್ಯನವರು ರಚಿಸಿರುವ ಕಾಲಜ್ಞಾನ ಇಡೀ ವಿಶ್ವಕ್ಕೆ ಸಂಬಂಧಿಸಿದ್ದು, ಅದು ಸರ್ವಕಾಲಿಕ ಸತ್ಯವಾಗಿದೆ. ಸತ್ಯ ಯಾವಾಗಲೂ ಕಹಿ ಯಾಗಿರುತ್ತದೆ ಇದುವರೆಗೂ ತಾತಯ್ಯನವರು ಹೇಳುವ ಎಲ್ಲಾ ಭವಿಷ್ಯಗಳು ಸತ್ಯವಾಗಿದೆ ಎಂದುಹೇಳಿದರು. ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ಮತ್ತು ಅಷ್ಟವಧಾನ ಸೇವೆ ನೆರೆವೇರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.