ಏಕವಚನದಲ್ಲಿ ಮಾತನಾಡಿದ ನಾಯಕನನ್ನು ಬಿಡಬೇಕೆ?
ಚಿಕ್ಕಬಳ್ಳಾಪುರ: ದಲಿತರ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರಕರಣವನ್ನು ತಮ್ಮ ಪರ ಇತ್ಯರ್ಥಗೊಳಿಸಬೇಕೆಂದು ಹಲವರಿಂದ ತನಗೆ ದೂರವಾಣಿ ಕರೆಗಳು ಸಾಕಷ್ಟು ಬರುತ್ತವೆ. ಆದರೆ, ನಾನು ಎಂದೂ ದಲಿತರಿಗೆ ಅನ್ಯಾಯ ಮಾಡಿಲ್ಲ. ಮಹಿಳೆಯರು ಎನ್ನುವುದನ್ನು ನೋಡದೇ ಏಕವಚನದಲ್ಲಿ ಮಾತನಾಡಿದ ಮುಖಂಡನನ್ನು ಬಿಡಬೇಕೇ? ಹೀಗಂತ ಪ್ರಶ್ನೆ ಮಾಡಿದವರು ಉಪ ವಿಭಾಗಾಧಿಕಾರಿ ಶಾಂತಲಾ ಅವರು.
ಈ ಸಂಬಂಧ ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡುತ್ತೇನೆ, ಆರೋಪ ಋಜುವಾತುಪಡಿಸುತ್ತೇನೆ ಎಂದು ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಅನುಮತಿ ನೀಡಬೇಕೆಂದು ಕೋರಿ ತಮ್ಮ ಬಳಿಗೆ ಆಗಮಿಸಿದ ದಲಿತ ಮುಖಂಡರಿಗೆ ಉಪ ವಿಭಾಗಾಧಿಕಾರಿ ಶಾಂತಲಾ ಖಡಕ್ಕಾಗಿ ಹೇಳಿದರು. ದಲಿತರ ನೋವೇನು ಎನ್ನುವುದು ನನಗೂ ಗೊತ್ತಿದೆ. ನನ್ನ ಬಳಿಗೆ ದಲಿತ ಮುಖಂಡರು ಬಂದ ತಕ್ಷಣ ಸ್ಪಂದಿಸಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತೇನೆ. ಕ್ಲಿಷ್ಟಕರವಾದ ಪಿಟಿಸಿಲ್ ಪ್ರಕರಣಗಳು ತ್ವರಿತವಾಗಿ ಇತ್ಯರ್ಥಪಡಿಸುತ್ತಿದ್ದೇನೆ. ನಾನು ಬಂದ ಮೇಲೆ ಅದೆಷ್ಟು ಪ್ರಕರಣಗಳು ಬಗೆಹರಿದಿವೆ. ಹೀಗಿದ್ದರೂ ಕಚೇರಿಗೆ ಬಂದು ಏಕವಚನದಿಂದ ಮಾತನಾಡುವುದು ಯಾವ ದಲಿತ ಸಂಘದ ಧೋರಣೆ, ಮಾತನಾಡುವಾಗ ಮಹಿಳೆ ಎಂಬ ಗೌರವವನ್ನು ಕೊಡುವುದು ಬೇಡವೇ ನಾವು ಎಷ್ಟು ಬಾರಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು, ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಇದೇ ರೀತಿ ಮಾತನಾಡಿದರೆ ಸುಮ್ಮನೆ ಇರುತ್ತೀರಾ, ಒಬ್ಬ ಮಹಿಳೆಗೆ ಗೌರವ ಕೊಡದ ಸಂಘಟನೆಗಳು ಇದ್ದು ಏನು ಪ್ರಯೋಜನ, ಒಂದು ಸಂಘಟನೆಯ ಮುಖಂಡ ಹೀಗೆ ವರ್ತಿಸವುದು ಸರಿಯೇ ಎಂದು ದಲಿತ ಮುಖಂಡರನ್ನೇ ಪ್ರಶ್ನಿಸಿದರು.
ಅಲ್ಲದೇ ತಹಸೀಲ್ದಾರ್ ನಟೇಶ್ ಮತ್ತು ಗಲಾಟೆ ನಡೆದಿದೆ ಎನ್ನಲಾದ ಸಂದರ್ಭದಲ್ಲಿದ್ದ ಮಹಿಳಾ ನೌಕರರನ್ನು ತಮ್ಮ ಬಳಿಗೆ ಕರೆಸಿಕೊಂಡು ಅವರ ಬಾಯಿಂದಲೂ ಹೇಳಿಸಿದರು.
ಮಾತುಕತೆ ಮುಗಿದ ಅಧ್ಯಾಯ, ದಲಿತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೀವು ಹೋರಾಟ ಮಾಡಿಕೊಳ್ಳಿ, ನಮ್ಮ ಅಭ್ಯಂತರವಿಲ್ಲ, ತಾವು ಕೊಟ್ಟ ಆದೇಶದ ಬಗ್ಗೆ ಗೊಂದಲವಿದ್ದರೆ ನೀವು ಮೇಲಿನ ನ್ಯಾಯಾಲಯಕ್ಕೆ ಹೋಗಬಹುದು, ನಿಮ್ಮ ಮುಖಂಡನ ಬಂಧನ ಪ್ರಕರಣದ ಬಗ್ಗೆ ನನ್ನ ಬಳಿ ಏನೂ ಹೇಳಲು ಬರಬೇಡಿ, ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿ ಕಳುಹಿಸಿದರು.
ಬೇಂದ್ರೆ ಗೀತ ಗಾಯನ ನಮನ
ಕೋಲಾರ: ಇಂದಿನ ಪೀಳಿಗೆಯ ಮಕ್ಕಳಿಗೆ ಬೇಂದ್ರೆಯವರ ಆದರ್ಶಗಳನ್ನು ಅವರ ಕವಿತೆಗಳನ್ನು, ಸಾಹಿತ್ಯದ ತಿರುಳನ್ನು ಮನ ಮುಟ್ಟುವಂತೆ ಮಕ್ಕಳ ಮನಸ್ಸಲ್ಲಿ ಬೇರೂರುವಂತೆ ಮಾಡಬೇಕೆಂದು ಶಾಲಾ ಶಿಕ್ಷಕರು ಪ್ರಯತ್ನಿಸಬೇಕೆಂದು ವಕ್ಕಲೇರಿ ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣಪ್ಪ ತಿಳಿಸಿದರು. ಅವರು ಕೋಲಾರ ತಾಲೂಕು ಚುಟುಕು ಸಾಹಿತ್ಯ ಪರಿಷತ್ವತಿಯಿಂದ ವಕ್ಕಲೇರಿ ಹೋಬಳಿಯ ಮಾರ್ಕಂಡಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೇಂದ್ರೆ ಗೀತಗಾಯನ ಕಾರ್ಯಕ್ರಮವನ್ನು ಕುರಿತು ಅಧ್ಯಕ್ಷತೆ ವಹಿಸಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

