ಕೋಲಾರ

ನಿರ್ದೇಶಕರಿಗೆ ಅಭಿನಂದನಾ ಸಭೆ

Published On :

ಟೇಕಲ್: ಮಾಲೂರು ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳೆ ಅಧ್ಯಕ್ಷ, ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಜೆಡಿಎಸ್ ಮುಖಂಡ ಕೆ.ವೈ. ನಂಜೇಗೌಡ ತಿಳಿಸಿದರು.
ಚಿಕ್ಕನೂಟವೆ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಅಧ್ಯಕ್ಷ, ನಿರ್ದೇಶಕರ ಅಭಿನಂದನಾ ಸಭೆಯಲ್ಲಿ ಮಾತನಾಡಿದರು. ದೊಡ್ಡನಾಯಕನಹಳ್ಳಿ, ತೊರಲಕ್ಕಿ ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನೂತನ ಅಧ್ಯಕ್ಷ ಹನುಮಪ್ಪ ಮಾತನಾಡಿದರು. ಅಣ್ಣಯ್ಯ, ಎಂ. ರವಿಂದ್ರ, ಈರಪ್ಪ, ಚಂದ್ರಪ್ಪ, ನಾಗರಾಜು, ರಾಜಪ್ಪ, ಅಣ್ಣಯ್ಯಚಾರಿ, ವೆಂಕಟಗಿರಿಯಪ್ಪ, ಸುರೇಶ್ ಇದ್ದರು.
ನೂತನ ಕಾರ್ಯಕಾರಿ ಮಂಡಳಿ: ಸಂಘದ ನಿರ್ದೇಶಕರಾಗಿ ಅಶೋಕ್, ಭಾಗ್ಯಮ್ಮ, ರಾಜಮ್ಮ, ವೆಂಕಟೇಶಪ್ಪ, ರಾಮು, ಮುನಿಯಪ್ಪ, ವೆಂಕಟೇಶ್ಗೌಡ, ವಿ. ಕೆಂಪಣ್ಣ, ಮುನಿಸ್ವಾಮಿ, ರಮೇಶ್, ಅವಿರೋಧ ಆಯ್ಕೆಯಾಗಿದ್ದಾರೆ.


ನೀರಿನ ಸಮಸ್ಯೆ ನಿವಾರಿಸಿ
ಕೋಲಾರ: ಬಂಗಾರಪೇಟೆ ತಾಲೂಕಿನ ಉಕ್ಕುಂದ ಗ್ರಾಮದಲ್ಲಿ ಸಮರ್ಪಕವಾಗಿ ನೀರಿನ ವ್ಯವಸ್ಥೆ ಮಾಡದೆ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮದ ಮುಖಂಡ ವಿ. ಮುನಿರಾಜು ಆರೋಪಿಸಿದ್ದಾರೆ.
ನೀರು ಗಂಟಿ ತನಗಿಷ್ಟ ಬಂದ ಕಡೆ ನೀರು ಬಿಡುತ್ತಿದ್ದು  ಉಕ್ಕುಂದ ಗ್ರಾಮದಲ್ಲಿ ಇಬ್ಬರು ಗ್ರಾಪಂ ಸದಸ್ಯರಿದ್ದು ಇದನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ. ಅನೇಕ ಬಾರಿ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಪಂಚಾಯತಿಗೆ ದೂರು ನೀಡಿದ್ದರೂ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ. ಡಿಪಾಸಿಟ್ ಕಟ್ಟಿರುವವರಿಗೆ ನೀರು ಬರುತಿಲ್ಲ. ಕೆಲವರು ಒಂದು ಪೈಪಿಗೆ ಐದು ಕನೆಕ್ಷನ್ ಹಾಕಿದ್ದಾರೆ. ಇವೆಲ್ಲವೂ ಗ್ರಾಪಂ ಸದಸ್ಯರಿಗೆ ಗೊತ್ತಿದ್ದರೂ ಸಮ್ಮನಿದ್ದಾರೆ. ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳು ಕೂಡಲೇ ಈ ಸಮಸ್ಯೆಯನ್ನು ಪರಿಹರಿಸುವಂತೆ ಅವರು ಒತ್ತಾಯಿಸಿದ್ದಾರೆ.


ಕೊಳವೆಬಾವಿ ನಾಶ; ಪ್ರಕರಣ ದಾಖಲು

ಚಿಂತಾಮಣಿ: ರಾಜಕೀಯ ದುರುದ್ದೇಶದಿಂದ ಹಲವು ಕಿಡಿಗೇಡಿಗಳು ನೀರು ಇರುವ ಕೊಳವೆ ಬಾವಿಗೆ ಕಲ್ಲು, ಮಣ್ಣು ಹಾಕಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಕೆ.ಎಂ. ವೆಂಕಟೇಶಪ್ಪ ಪೊಲೀಸರಿಗೆ ದೂರು ನೀಡಿರುವ ಘಟನೆ ಕಾವಲುಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಅಂಬಾಜಿದುರ್ಗ ಹೋಬಳಿ ಕಾವಲುಗಾನಹಳ್ಳಿ ಗ್ರಾಪಂ ಸದಸ್ಯೆ ಸೀತಮ್ಮ ಕಳೆದ ಗ್ರಾಪಂ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದರಿಂದ ರಾಜಕೀಯ ಸೇಡು ತೀರಿಸಿಕೊಳ್ಳಲು ಹಲವರು ಫೆ.15 ರಂದು ನಲ್ಲಗುಟ್ಟಹಳ್ಳಿ ಗ್ರಾಮದ ಜಮೀನಿನಲ್ಲಿ ಹಾಕಿಸಿರುವ ಕೊಳವೆ ಬಾವಿ ಪಂಪ್ ಸೆಟ್ಗಳನ್ನು ನಾಶಪಡಿಸಿರುವುದಾಗಿ ಆರೋಪಿಸಲಾಗಿದೆ.
ಸಬ್ಇನ್ಸ್ಪೆಕ್ಟರ್ ಹೊನ್ನೇಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದ ಆನಂದ್, ಕೃಷ್ಣ, ಅಶ್ವತ್ಥಪ್ಪ, ಮಂಜುನಾಥ, ಕಿಟ್ಟಪ್ಪ ವಿರುದ್ಧ ದೂರಿನಲ್ಲಿ ಅನುಮಾವ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.

ಶಾಲೆ ಮುಂದೆ ಕಸ: ನಾಗರಿಕರ ಖಂಡನೆ



ಕೋಲಾರ: ನಗರದ ಹಾರೋಹಳ್ಳಿಯ ಸರ್ಕಾರಿ ಶಾಲೆಯ ಮುಂಭಾಗವೇ ಕಸದ ರಾಶಿ ಹರಡಿದಿದು ಇದರಿಂದ ಪರಿಸರಕ್ಕೆ ಮಾತ್ರವಲ್ಲದೆ ಮಕ್ಕಳ ನೆಮ್ಮದಿಗೆ ಭಂಗ ಉಂಟಾಗಿದೆ. ಕೇಂದ್ರ ಸಚಿವರ ನಿವಾಸವಿರುವ ಮುಖ್ಯ ರಸ್ತೆಯಲ್ಲೇ ಈ ಅವ್ಯವಸ್ಥೆ ಕಂಡು ಬಂದಿದೆ. ಹಾರೋಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗವೇ ಕಸದ ರಾಶಿ ಕೊಳೆತು ನಾರುತ್ತಾ ರಸ್ತೆಗೆ ಹರಡಿಕೊಂಡಿದ್ದರೂ ನಗರಸಭೆಯವರು ಗಮನ ನೀಡಿಲ್ಲವೆಂದು ನಾಗರಿಕರು ಆರೋಪಿಸಿದ್ದಾರೆ. ಹಾರೋಹಳ್ಳಿ ಮುಖ್ಯ ರಸ್ತೆಯಲ್ಲಿ ಸ್ವಚ್ಛತೆ ಇಲ್ಲ, ಕಳೆದ ಹಲವು ತಿಂಗಳುಗಳಿಂದ ಬೀದಿ ದೀಪಗಳಿಲ್ಲದೇ ಸರಗಳ್ಳರ ಭೀತಿಯಲ್ಲೇ ಜನತೆ ಓಡಾಡುವಂತಾಗಿದೆ ಎಂದು ದಲಿತ ಮುಖಂಡ ಹಾರೋಹಳ್ಳಿ ವಿಜಯಕುಮಾರ್ ಆರೋಪಿಸಿದ್ದಾರೆ. ಈ ವಾರ್ಡಿನ ಸದಸ್ಯರಾದ ಮಹಾಲಕ್ಷ್ಮೀಯವರು ಕೂಡಲೇ ಶಾಲೆಯ ಮುಂಭಾಗ ಹರಡಿರುವ ಕಸವನ್ನು ತೆಗೆಸಿ ಪರಿಸರ ಕಾಪಾಡಬೇಕು, ಬೀದಿ ದೀಪಗಳನ್ನು ಅವಳಡಿಸಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.