ವೈಭವದ ಬ್ರಹ್ಮ ರಥೋತ್ಸವ
ಗುಡಿಬಂಡೆ: ತಾಲೂಕಿನ ಎಲ್ಲೋಡು ಗ್ರಾಮದ ಬಳಿಯಿರುವ ಇತಿಹಾಸ ಪ್ರಸಿದ್ಧ ಕೂರ್ಮಗಿರಿ ಬೆಟ್ಟದಲ್ಲಿ ನೆಲೆಸಿರುವ ಲಕ್ಷ್ಮೀ ಆದಿನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.
ಸೋಮವಾರದಿಂದ ಪ್ರಾರಂಭವಾಗಿ ಭಾನುವಾರದವರೆಗೂ ಒಂದು ತಿಂಗಳ ಕಾಲ ಕೂರ್ಮಗಿರಿ ಬೆಟ್ಟದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿಗೆ ವಿಶೇಷ ಪೂಜೆ ಕೈಂಕರ್ಯಗಳನ್ನು ಮಾಡಲಾಗಿದ್ದು, ದೇವರಿಗೆ ಸೋಮವಾರ ರಾತ್ರಿ ಆರ್ಯವೈಶ್ಯ ಮಂಡಳಿಯಿಂದ ಮೂಲದೇವರ ಉತ್ಸವ ಮೂರ್ತಿಯನ್ನು ವಿಶೇಷ ಹೂವಿನ ಪಲ್ಲಕಿಯೊಂದಿಗೆ ಮೆರವಣಿಗೆ ಮಾಡಲಾಯಿತು. ರಾಜ್ಯ ಮತ್ತು ನೆರೆಯ ಆಂದ್ರಪ್ರದೇಶ, ತಮಿಳುನಾಡಿನಿಂದ ಬಂದಿದ್ದ ಸಾವಿರಾರು ಭಕ್ತರ ಸಮೂಹ ಗೋವಿಂದ ಗೋವಿಂದ ಜಯಘೋಷಗಳೊಡನೆ ರಥವನ್ನು ಎಳೆದು ಭಕ್ತಿಭಾವ ಮೆರೆದರು.
ಯುವಜನ ಮೇಳದಲ್ಲಿ ಕಲಾವಿದರ ಗರ್ಜನೆ
ಕ.ಪ್ರ. ವಾರ್ತೆ ಕೋಲಾರ ಫೆ.17
ಸರಿಯಾದ ಮಾಹಿತಿ, ಪ್ರಚಾರವಿಲ್ಲದೆ ತಾಲೂಕು ಮಟ್ಟದ ಯುವಜನ ಮೇಳ ನಡೆಸಲಾಗುತ್ತಿದೆ ಎಂದು ಆರೋಪಿಸಿ ಯುವ ಕಲಾವಿದರು ಕೆಲವರು ವೇದಿಕೆಗೆ ಮುಗ್ಗಿ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ ಘಟನೆ ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ನಡೆಯಿತು.
ಜಿಲ್ಲಾ ಯುವಜನ ಸಬಲೀಕರಣ ಇಲಾಖೆಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಯುವಜನ ಮೇಳಕ್ಕೆ ಬಂದಿದ್ದ ಭೀಮಶಕ್ತಿ ಜಿಲ್ಲಾಧ್ಯಕ್ಷ ಗುಜಮಾರಂಡಳ್ಳಿ ಜಗದೀಶ್ ಹಾಗೂ ಕೃಷ್ಣಪ್ಪ ಇನ್ನಿತರರು ವೇದಿಕೆಗೆ ನುಗ್ಗಿ ಸರಿಯಾದ ಮಾಹಿತಿ ಮತ್ತು ಪ್ರಚಾರ ಇಲ್ಲದೆ ನಿಮಗಿಷ್ಟ ಬಂದವರನ್ನು ಕರೆಸಿ ಕಾರ್ಯಕ್ರಮ ನಡೆಸುತ್ತಿದ್ದೀರಾ, ಇದರಿಂದ ಪ್ರತಿಭಾವಂತ ಕಲಾವಿದರಿಗೆ ಅನ್ಯಾಯವಾಗಿದೆ, ಈ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲವೆಂದು ಅಧಿಕಾರಿ ರುದ್ರಪ್ಪನವರನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕು ಮಟ್ಟದ ಯುವಜನ ಮೇಳದ ಬಗ್ಗೆ ಸಾಕಷ್ಟು ಪ್ರಚಾರ ನೀಡಲಾಗಿದೆ, ಇದರಲ್ಲಿ ಇಲಾಖೆಯ ತಪ್ಪೇನು ಇಲ್ಲವೆಂದು ಅಧಿಕಾರಿ ರುದ್ರಪ್ಪ ಸ್ಪಷ್ಟನೆ ನೀಡಿದರೂ ಸುಮ್ಮನಾಗದ ಯುವಕರು, ಕಳೆದ ವರ್ಷವೂ ಇದೇ ರೀತಿ ಪ್ರತಿಭಟನೆ ನಡೆದಿದೆ. ತಾವು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ, ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ನ್ಯಾಯ ಒದಗಿಸುವವರೆಗೆ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದನ್ನು ಗಮನಿಸಿದ ಕಾರ್ಯಕ್ರಮದ ಸಂಘಟಕರು ವೇದಿಕೆಯಲ್ಲಿದ್ದ ಯುವಕರನ್ನು ಸಮಾಧಾನಪಡಿಸಲು ಹೆಣಗಾಡಿದರಲ್ಲದೆ, ಕಾರ್ಯಕ್ರಮ ಮುಗಿದ ಬಳಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣವೆಂದು ಹೇಳಿದ ನಂತರ ಉದ್ಘಾಟನಾ ಸಮಾರಂಭ ಆರಂಭಕ್ಕೆ ಒಪ್ಪಿಗೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೆಂಬೋಡಿಯ ನಿವೃತ್ತ ಶಿಕ್ಷಣ ಸಂಯೋಜಕ ಎಂ.ವಿ.ಗಿರಿಯಪ್ಪ, ಭಾರತೀಯ ಕಲೆ, ಸಂಸ್ಕೃತಿ ಜಗತ್ತಿನಲ್ಲಿ ಶ್ರೇಷ್ಠವಾಗಿದ್ದು ವಿವಿದ ರೀತಿಯ ಕಲಾವಿದರನ್ನು ಒಳಗೊಂಡಿದ್ದು ಯುವಜನತೆಯು ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮುಂದಾಗಬೇಕೆಂದರು.
ತಾಲೂಕಿನಲ್ಲಿ ಇರುವ ಎಲ್ಲ ಪ್ರತಿಭಾವಂತ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮಗಳನ್ನು ನಡೆಸಿದಾಗ ಮಾತ್ರ ಸರ್ಕಾರದ ಆಶಯಗಳು ಈಡೇರುತ್ತದೆ, ಮುಂದಿನ ದಿನಗಳಲ್ಲಿ ಇಲಾಖೆಯ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಯುವಜನ ಮೇಳಗಳನ್ನು ಅರ್ಥಪೂರ್ಣವಾಗಿಸಬೇಕೆಂದರು.
ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪ ಮಾತನಾಡಿ ಭಾರತ ಕಲೆ,ಸಂಸ್ಕೃತಿ ಹಾಗೂ ಧರ್ಮ ಮಾರ್ಗಕ್ಕೆ ಪ್ರಸಿದ್ಧವಾಗಿದ್ದು, ಜಗತ್ತಿನ ಅನೇಕರು ನಮ್ಮನ್ನು ಅನುಕರಣೆ ಮಾಡುತ್ತಿದ್ದಾರೆ,ಯುವ ಜನರ ಮೂಲಕ ಕಲೆ, ಸಂಸ್ಕೃತಿ ಉಳಿಸಬಹುದಾಗಿದೆ ಎಂದು ನುಡಿದರು. ಖ್ಯಾತ ಜನಪದ ಗಾಯಕ ಜನ್ನಘಟ್ಟ ಕೃಷ್ಣ ಮೂರ್ತಿ, ರವೀಂದ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

