ಕೋಲಾರ

ಪ್ರಗತಿ ಸಾಧಿಸಲು ಮಹಿಳೆಯರಿಗೆ ಸಲಹೆ

Published On :

ಕೋಲಾರ: ಮಹಿಳೆಯರು ಎಲ್ಲಾ ರಂಗಗಳಲ್ಲಿ ಮುಂದೆ ಬರುವ ಮೂಲಕ ತಾನು ಅಬಲೆಯಲ್ಲ ಎಂಬುದನ್ನು ನಿರೂಪಿಸಬೇಕೆಂದು ಜಿಪಂ ಸದಸ್ಯೆ ಮಂಗಮ್ಮ ಮುನಿಸ್ವಾಮಿ ಅಭಿಪ್ರಾಯಪಟ್ಟರು. ನಗರದ ಪತ್ರಕರ್ತರ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಕೋಲಾರ ಜಿಲ್ಲೆ ಆಶ್ರಯದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗೆಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ಒಂದು ಬ್ಯಾಂಕುಗಳಲ್ಲಿ ಮಹಿಳೆಯರ ಸಂಘಗಳಿಗೆ ಸಾಲ ನೀಡಿತ್ತಿದ್ದು ಅದನ್ನು ಸರಿಯಾದ ರೀತಿ ಉಪಯೋಗಿಸಿ ಕೊಳ್ಳುವ ಮೂಲಕ ಗಂಡಸಿಗೆ ಸಮನಾಗಿ ನಿಲ್ಲಬೇಕೆಂದರು. ಸುಮಾರು 40 ಕ್ಕೂ ಹೆಚ್ಚು ಮಳಿಗೆಗಳು ವಿಧವಿಧವಾದ ಕರಕುಶಲ ಮನೆ ಮನಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳ ಬಟ್ಟೆಗಳು, ಸಂಬಾರು ಪದಾರ್ಥಗಳ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿ ವಸ್ತು ಪ್ರದರ್ಶನಕ್ಕೆ ತಂದಿದ್ದು ವಿಶೇಷವಾಗಿತ್ತು.
ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ
ಗುಡಿಬಂಡೆ: ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ 11 ನಿರ್ದೇಶಕರ ಸ್ಥಾನಗಳಲ್ಲಿ 7 ಜನ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಉಳಿದ 3 ಜನ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎಚ್. ಓಬಳೇಶ್ ತಿಳಿಸಿದ್ದಾರೆ. ಎಚ್.ಸಿ. ಕೃಷ್ಣಪ್ಪ, ಚಿತ್ತೂರು ರಂಗಪ್ಪ, ಜಿ.ವಿ.ಪ್ರಭಾಕರ, ಮಂಜುನಾಥ ದೀಕ್ಷಿತ್, ಜಿ.ಟಿ. ವೆಂಕಟೇಶ, ಎಚ್. ವೆಂಕಟೇಶಪ್ಪ, ಸುಬ್ಬರಾಯಪ್ಪ, ಚಾಂದ್ ಬಾಷ ಅವಿರೋಧವಾಗಿ ಆಯ್ಕೆಯಾದರೆ, ಭಾನುವಾರ ನಡೆದ ಚುನಾವಣೆಯಲ್ಲಿ ಜಿ. ಗಂಗಾಧರಪ್ಪ, ಉಮಾದೇವಿ ಮತ್ತು ಅನಿತ ಆಯ್ಕೆಯಾಗಿದ್ದಾರೆ.
ನಿರ್ದೇಶಕರ ಆಯ್ಕೆ
ಶಿಡ್ಲಘಟ್ಟ: ತಾಲೂಕಿನ ದೇವರಮಳ್ಳೂರು ಗ್ರಾಪಂ ವ್ಯಾಪ್ತಿಯ ಸೊಣ್ಣೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ ಅವಿರೋಧವಾಗಿ ನಡೆಯಿತು. ಸಾಮಾನ್ಯ ಸ್ಥಾನದಿಂದ ಕೇಶವಪ್ಪ, ದೇವರಾಜ್ ಪಿ. ಪಿಳ್ಳಮುನಿಯಪ್ಪ, ಮುನಿರಾಜು, ರಾಮಚಂದ್ರಪ್ಪ, ಕೆ.ಶ್ರೀನಿವಾಸ್, ಪಿ.ಶ್ರೀರಾಮರೆಡ್ಡಿ, ಹಿಂದುಳಿದ ವರ್ಗ ಸ್ಥಾನದಿಂದ ಚನ್ನಕೃಷ್ಣಪ್ಪ, ಮಹಿಳಾ ಮೀಸಲು ಸ್ಥಾನದಿಂದ ಸುವರ್ಣಮ್ಮ, ಪಾರ್ವತಮ್ಮ, ಪರಿಶಿಷ್ಟ ಜಾತಿ, ಪಂಗಡ ಮೀಸಲು ಸ್ಥಾನದಿಂದ ತಿರುಮಲೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.  ತಾಲೂಕಿನ ಪಲಿಚೇಲರ್ ಗ್ರಾಪಂ ಬೈರಗಾನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸಾಮಾನ್ಯ ಸ್ಥಾನದಿಂದ ಬಿ.ಎಲ್.ದೇವರಾಜ್, ಗೋಪಾಲಪ್ಪ, ಬಿ.ನಾರಾಯಣಸ್ವಾಮಿ, ವೆಂಕಟೇಗೌಡ, ವೆಂಕಟೇಶಪ್ಪ, ಬಿ.ಕೆ.ನಾರಾಯಣಪ್ಪ, ಶಶಿಕಲಾ, ಸಂಜೀವಪ್ಪ (ಹಿಂದುಳಿದ ವರ್ಗ), ಬಿ.ವೈ.ದ್ಯಾವಪ ್ಪ(ಪರಿಶಿಷ್ಟ ಜಾತಿ, ಪಂಗಡ ಮೀಸಲು), ನಾರಾಯಣಮ್ಮ ಹಾಗೂ ನಾಗರತ್ನಮ್ಮ (ಮಹಿಳಾ ಮೀಸಲು) ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.



ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ


ಕೋಲಾರ: ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸುವ ಜವಾಬ್ದಾರಿ. ಇಲಾಖೆ ಹಾಗೂ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕೆಜಿಎಫ್ ಶಾಸಕಿ ವೈ. ರಾಮಕ್ಕ ತಿಳಿಸಿದರು.
ಅವರು ಬಂಗಾರಪೇಟೆ ತಾಲೂಕಿನ ಬಂಗಾರು ತಿರುಪತಿಯ ಪ್ರೌಢಶಾಲೆಯಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆಗಳಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳು ಹಾಗೂ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಎಲ್ಲರ ಸಹಕಾರ ಅತ್ಯಗತ್ಯವೆಂದರು.
ಈ ಶಾಲೆಗೆ ಅವಶಕತೆ ಇರುವ ರಸ್ತೆ ಮತ್ತು ಕೊಠಡಿಗಳು, ಸರ್ಕಾರ ನೀಡಿರುವ ಸೈಕಲ್ಗಳನ್ನು ನಿಲ್ಲಿಸಲು ಒಂದು ಸೈಕಲ್ ನಿಲ್ದಾಣ ಹಾಗೂ ಕಾಪೌಂಡ್ ಶೀಘ್ರದಲ್ಲಿಯೇ ವ್ಯವಸ್ಥೆ ಮಾಡುವುದಾಗಿ ಈಗ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲು ಸ್ಥಳೀಯರ ಸಹಕಾರ ಕೋರಿದರು ಇದಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡುವುದು ಅಗತ್ಯವೆಂದರು. ಮಾಜಿ ಶಾಸಕ ವೈ. ಸಂಪಂಗಿ, ಸುಮಾ ನಾಗರಾಜ್, ಗೋಪಾಲರೆಡ್ಡಿ, ನರಸಿಂಹಗೌಡ, ರಾಧಮ್ಮ, ಸುಬ್ರಮಣಿ, ಶ್ರೀಧರ್ ಶರ್ಮ ಮುನಿಸ್ವಾಮಿರೆಡ್ಡಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರ್. ಶ್ರೀನಿವಾಸನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.