ಮೋದಿ ಹಿಟ್ಲರ್ ಸಂತತಿಯ ಕುಡಿ
ಕ.ಪ್ರ. ವಾರ್ತೆ ಕೋಲಾರ ಫೆ.17
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಿಟ್ಲರ್ ಸಂತತಿಯ ಕುಡಿ ಎಂದು ಸಿಪಿಎಂ ಮುಖಂಡ, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಆರೋಪಿಸಿದರು.
ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಎಸ್ಎಫ್ಎ ರಾಜ್ಯ ಸಮ್ಮೇಳನದ 4ನೇ ದಿನವಾದ ಸೋಮವಾರ ಅವರು ಲೇಖಕ, ಪತ್ರಕರ್ತ ಕಾ. ವಿಶ್ವ ಕುಂದಾಪುರರವರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಕೋಮುವಾದವನ್ನು ಪ್ರತಿಪಾದಿಸುವ ನರೇಂದ್ರ ಮೋದಿ ಗುಜರಾತ್ನಲ್ಲಿ 2 ಸಾವಿರ ಜನರನ್ನು ಕೊಂದ ನರಹಂತಕ, ಇಂತಹವರನ್ನು ದೇಶದ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಣೆ ಮಾಡಿರುವುದು ಆ ಪಕ್ಷದ ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು. ಬಿಜೆಪಿಯವರು ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದರೆ ನವ ಹೊಸಾಹತುಶಾಹಿತನದ ಪ್ರತಿಪಾದಕರಾದ ಕಾಂಗ್ರೆಸ್ ಪಕ್ಷದವರು ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಹೊರಟಿದ್ದಾರೆ, ದೇಶದ ಪ್ರಧಾನಿ ಯಾರಾಗಬೇಕೆಂಬುದನ್ನು ಮತದಾರರು ನಿರ್ಧರಿಸಬೇಕೇ ಹೊರತು ಬಿಜೆಪಿ ಇಲ್ಲವೇ ಕಾಂಗ್ರೆಸ್ ಪಕ್ಷದವರಲ್ಲವೆಂದು ಅಭಿಪ್ರಾಯಿಸಿದರು.
ಪ್ರಧಾನಿ ಆಗಲು ಹರ ಸಾಹಸ ಮಾಡುತ್ತಿರುವ ಮೋದಿ ಮತ್ತು ರಾಹುಲ್ ರ್ಸಾಜನಿಕ ಸಭೆಗಳಲ್ಲಿ ಪರಸ್ವರ ದೋಷಿಸಿಕೊಳ್ಳುತ್ತಿದ್ದಾರೆಯೇ ಹೊರತು ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆ ಬಗ್ಗೆ, ನವ ಸಾಮ್ರಾಜ್ಯಶಾಯಿತನದ ಬಗ್ಗೆ ಏಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿದರು.
ಬ್ರಿಟಿಷರನ್ನು ದೇಶದಿಂದ ಓಡಿಸಲು ನಡೆಸ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಹೋರಾಡಿದ್ದಾರೆ, ಸ್ವಾತಂತ್ರ್ಯ ನಂತರ ದೇಶ ಹೇಗೆ ಮುನ್ನಡೆಯಬೇಕೆಂಬ ಪರಿಕಲ್ಪನೆ ಇತ್ತು. ಆದರೆ, ನವ ಸಾಮ್ರಾಜ್ಯಶಾಯಿತನದ ಪ್ರತಿಪಾದಕರಿಂದಾಗಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ವ್ಯತ್ಯಾಸಗಳು ಆದ್ದರಿಂದ ಮತ್ತು ಕೋಮುವಾದಿಗಳು ಇತಿಹಾಸ ತಿರುಚಿದ್ದರಿಂದ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಯುವಶಕ್ತಿಯ ರೀತಿಯಲ್ಲಿ ಇಂದಿನ ವಿದ್ಯಾರ್ಥಿಗಳು, ಯುವಕರು ಚಳವಳಿಯ ಭಾಗವಾಗಿ ಉಳಿಯಲಾಗುತ್ತಿಲ್ಲವೆಂದು ವಿಷಾದಿಸಿದರು.
ಸ್ವಾಮಿ ವಿವೇಕಾನಂದರು ಶುದ್ರಶಕ್ತಿಯಾಗಿದ್ದರು, ಹಿಂದೂ ಧರ್ಮದಲ್ಲಿ ಸಹಿಷ್ಣುತೆ ಇರಬೇಕೆಂದು ಬಯಸಿದ್ದರು. ಆದರೆ ಎಬಿವಿಪಿಯವರು ಕೋಮುವಾದಿಗಳಾಗಿದ್ದಾರೆ, ವಿವೇಕಾನಂದರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಟೀಕಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದೂ 66 ವರ್ಷಗಳಾದರೂ 40 ಕೋಟಿ ಜನರಿಗೆ ಇನ್ನು ವಸತಿ ಸೌಲಭ್ಯ ಸಿಕ್ಕಿಲ್ಲ, ಶೇ.70 ಕುಟುಂಬಗಳಿಗೆ ಸ್ವಂತ ಶೌಚೌಲಯಗಳಿಲ್ಲ, ವಿದ್ಯಾರ್ಥಿಗಳು, ಯುವಕರು ಜೀವನಕ್ಕೆ ಬೇಕಾಗುವಷ್ಟು ದುಡಿಮೆಯ ಜೊತೆಗೆ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಪರಿಸ್ಥಿತಿ ಸುಧಾರಣೆಗೆ ಚಿಂತನೆ ಮಾಡದಿದ್ದರೆ ಗುಲಾಮರಾಗಿಯೇ ಬದುಕಬೇಕಾಗುತ್ತದೆ ಎಂದರು.
ಎಸ್ಎಫ್ಐ ಮಾತ್ರ ತಾತ್ವಿಕ ಸಿದ್ಧಾಂತಗಳಡಿ ಹೋರಾಡುವ ಶಕ್ತಿ ಹೊಂದಿದೆ, ರಾಜಕೀಯವಾಗಿ ಪ್ರಬಲ ಶಕ್ತಿಯಾಗಬೇಕಾಗಿದೆ ಎಂದರು. ವಿಶ್ವಕುಂದಾಪುರ ಕೃತಿಯ ಬಗ್ಗೆ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಶಿವಪ್ಪ ಮಾತನಾಡಿದರು, ಅಧ್ಯಕ್ಷತೆಯನ್ನು ಎಸ್ಎಫ್ಐ ರಾಜ್ಯಾಧ್ಯಕ್ಷ ಅನಂತ ನಾಯ್ಕ್ ವಹಿಸಿದ್ದರು. ಲೇಖಕ ವಿಶ್ವಕುಂದಾಪುರ, ಬೆಂಗಳೂರಿನ ಕ್ರಿಯಾ ಪ್ರಕಾಶನದ ವ್ಯವಸ್ಥಾಪಕ ಚಂದ್ರು, ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಹುಳ್ಳಿ ರಮೇಶ್, ಸ್ವಾಗತಿ ಸಮಿತಿ ಅಧ್ಯಕ್ಷ ಎಂ.ಬಿ. ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿ.ಅಂಬರೀಶ್, ಸಂಘಟನಾ ಕಾರ್ಯದರ್ಶಿಗಳಾದ ಮಾರ್ಕಂಡಯ್ಯ , ಸಿ.ಅಮರೇಶ್, ಖಜಾಂಚಿ ಕೆ. ವಾಸುದೇವರೆಡ್ಡಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ. ಗೀತಾ, ನಗರಸಭೆ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ, ಡಿವೈಎಫ್ಐ ಜಿಲ್ಲಾಧ್ಯಕ್ಷ ಸಂಪಂಗಿ, ವಿಜಯಕೃಷ್ಣ ಇದ್ದರು.
ಕೋಮುವಾದವನ್ನು ಪ್ರತಿಪಾದಿಸುವ ನರೇಂದ್ರ ಮೋದಿ ಗುಜರಾತ್ನಲ್ಲಿ 2 ಸಾವಿರ ಜನರನ್ನು ಕೊಂದ ನರಹಂತಕ, ಇಂತಹವರನ್ನು ದೇಶದ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಣೆ ಮಾಡಿರುವುದು ಆ ಪಕ್ಷದ ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ
ಟಿ ಜಿ.ವಿ. ಶ್ರೀರಾಮರೆಡ್ಡಿ, ಮಾಜಿ ಶಾಸಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

