ಭೂಸ್ವಾಧೀನ ಯೋಜನೆಗೆ ವಿರೋಧ
ಕೋಲಾರ: ಫಲವತ್ತಾದ ವ್ಯವಸಾಯ ಭೂಮಿಯನ್ನು ಕೈಗಾರಿಕೋಧ್ಯಮದ ಅಭಿವೃದ್ಧಿ ನೆಪದಲ್ಲಿ ಭೂಸ್ವಾಧೀನಪಡಿಸಿಕೊಳ್ಳುವುದಕ್ಕೆ ಕೋಲಾರ ತಾಲೂಕು ಮಾವು ಮತ್ತು ತೋಟಗಾರಿಕೆ ಬೆಳೆಗಾರರ ಸಂಘ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಕೋಲಾರ ತಾಲೂಕು ಮಾವು ಮತ್ತು ತೋಟದ ಬೆಳೆಗಾರರ ಸಂಘದ ನಿರ್ದೇಶಕ ಕೆ.ಆರ್. ಹುಲುನಾಚೇಗೌಡ, ಹೈಕೋರ್ಟ್ ಹಿರಿಯ ವಕೀಲ ಎಂ. ಶಿವಪ್ರಕಾಶ್, ಬಂಗಾರಪೇಟೆ ತಾಲೂಕಿನ ಪ್ರಸನ್ನ, ಶ್ರೀನಿವಾಸಪುರದ ವೆಂಕಟರೆಡ್ಡಿ, ಕೈಗಾರಿಕೆಗಳ ಸ್ಥಾಪನೆ ಆಗುವುದೆಂದು ಅಗ್ಗದ ಪ್ರಚಾರ ಕೊಟ್ಟು ಜನರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಲ್ಲಾ ವೇದಿಕೆಗಳಲ್ಲೂ ವ್ವಯಸಾಯ ಭೂಮಿಯನ್ನು ಕೈಗಾರಿಕೆಗಳಿಗೆ ಬಳಸಬಾರದು ಮತ್ತು ಅವನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಲೇ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಶಾಸನಗಳನ್ನು ಜಾರಿಗೆ ತರುತ್ತಿದೆ ಎಂದು ಟೀಕಿಸಿದ್ದಾರೆ.
ಸುಪ್ರೀಂ ಕೋರ್ಟ್ ಚಾರಿತ್ರ್ಯಾರ್ಹ ತೀರ್ಪುಗಳನ್ನು ನೀಡಿ ವ್ಯವಸಾಯ ಜಮೀನು, ತೋಟಗಾರಿಕೆ ಜಮೀನುಗಳನ್ನು ಕೈಗಾರಿಕಾ ಪ್ರದೇಶಗಳಾಗಿ ಭೂ ಸ್ವಾಧೀನ ಮಾಡ ಕೂಡದು ಎಂದು ಸ್ಪಷ್ಟ ತೀರ್ಪು ನೀಡಿರುತ್ತದೆ. ಆದರೆ, ಜನಪ್ರತಿನಿಧಿಗಳು ಅಗ್ಗದ ಪ್ರಚಾರಕ್ಕೆ ಜಾಣ ಕುರುಡರಂತೆ ಕೈಗಾರಿಕೆಗಳನ್ನು ಮುದುವಾಡಿ ಗ್ರಾಮದಿಂದ ದಳಸನೂರು ಗೇಟಿನವರೆಗೂ ಕೆ.ಐ.ಎ.ಡಿ.ಬಿ ವತಿಯಿಂದ ಭೂ ಸ್ವಾಧೀನ ಪಡಿಸಿಕೊಳ್ಳುತ್ತೇವೆ ಎಂದು ಘೋಷಣೆ ಮಾಡಿರುವುದು ಕ್ಷಮಿಸಲಾರದ ಅಪಚಾರ ಎಂದು ತಿಳಿಸಿದ್ದಾರೆ.
ಈ ಘೋಷಣೆ ಜನರನ್ನು ತಪ್ಪು ದಾರಿಗೆ ಎಳೆದು ದೇಶಕ್ಕೆ, ಸಮಾಜಕ್ಕೆ ಆಹಾರ ಕೊಡುವ ಆಹಾರ ಭದ್ರತೆ ಕಾಯ್ದೆಗೆ ಪೂರಕವಾಗಿರುವ ವ್ಯವಸಾಯ ಜಮೀನುಗಳ ವಶಕ್ಕೆ ನಮ್ಮ ವಿರೋಧವಿದೆ ಎಂದು ತಿಳಿಸಿದ್ದಾರೆ.
ಜನರ ಸರ್ವನಾಶಕ್ಕೆ ಯೋನೆಯನ್ನು ರೂಪಿಸಲಾಗುತ್ತಿದೆ. ಮಾಲೂರು, ನರಸಾಪುರ, ವೇಮಗಲ್, ಕೋಲಾರ, ಹೊಸಕೋಟೆ ಕೈಗಾರಿಕಾ ಪ್ರದೇಶದಲ್ಲಿ ಶೇ.25 ರಿಂದ 30ರಷ್ಟು ಭೂಮಿಯನ್ನು ಕೈಗಾರಿಕೆಗಳ ಉಪಯೋಗಕ್ಕೆ ಕೊಟ್ಟಿದ್ದು, ಉಳಿದೆಲ್ಲಾ ಜಮೀನು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಸಿಕೊಂಡಿರುವರ ಪಾಲಾಗಿದೆ. ಇದರ ಬಗ್ಗೆ ಅಂಕಿ ಅಂಶಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

