ರಂಗಭೂಮಿ ಕಲೆ ನಶಿಸಿಸುತ್ತಿದೆ: ಚಿನ್ನಪ್ಪ
ಗುಡಿಬಂಡೆ: ಆಧುನೀಕತೆಯಿಂದಾಗಿ ದೇಶದ ಸಾಂಪ್ರಾದಾಯಿಕ ಪ್ರಾಚೀನ ರಂಗಭೂಮಿ ಕಲೆ ನಶಿಸುವ ಹಂತ ತಲುಪಿದೆ ಎಂದು ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಗಾಯತ್ರಿ ಪ್ರಸಾಧ ಭವನದಲ್ಲಿ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಹಾಗೂ ಐಶ್ವರ್ಯ ಕಲಾನಿಕೇತನ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಚಿಕ್ಕಬಳ್ಳಾಪುರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದೊಂದಿಗೆ ಆಯೋಜಿಸಿದ್ದ 4 ದಿನಗಳ ಉನ್ನತಿ ನಾಟಕ ಮತ್ತು ಕಲಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ಪೌರಾಣಿಕ, ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಪಟ್ಟ ನಾಟಕಗಳಿಂದ ಜನರು ಮನರಂಜನೆ ಪಡೆಯುತ್ತಿದ್ದರು. ಜನರಲ್ಲಿ ನಾಗರಿಕತೆ ಬೆಳೆದಂತೆ ಹೊಸ ಆವಿಷ್ಕಾರಗಳ ಫಲವಾಗಿ ದೃಶ್ಯ ಮಾದ್ಯಮ ಮತ್ತು ಚಲನಚಿತ್ರಗಳ ತಯಾರಿ ನಡೆಯಿತು. ಇವುಗಳಿಂದ ನಾಟಕಗಳ ಬಗ್ಗೆ ಜನರಲ್ಲಿ ಆಸಕ್ತಿ ಕುಂಠಿತವಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ಸ.ನ. ನಾಗೇಂದ್ರ, ರಂಗಭೂಮಿ ಕ್ಷೇತ್ರದಲ್ಲಿ ಜಿ.ಬಿ. ಶೆಟ್ಟಪ್ಪ, ಗುಡಿಬಂಡೆ ದೇವಾನಂದ್ ಎಂ.ಶ್ರೀನಿವಾಸ ಮೂರ್ತಿ, ರಾಜಶೇಖರನಾಯ್ಡುರವರು ಈ ಭಾಗದ ಕಲಾ ನಕ್ಷತ್ರಗಳಿದ್ದಂತೆ, ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಇಲಾಖೆ ಸಹಕಾರ ಅಗತ್ಯವಿದ್ದು ಈಗಾಗಲೇ ಈ ಸಂಬಂಧ ನೀಲಿ ನಕ್ಷೆ ಸಿದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಉನ್ನತಿ ರಂಗಭೂಮಿ ಸೇವಾ ರತ್ನ ಪ್ರಶಸ್ತಿಯನ್ನು ಚಲನಚಿತ್ರ ನಿರ್ದೇಶಕ ಜಿ.ಎನ್. ರಾಜಶೇಖರ ನಾಯ್ಡು, ಐಶ್ವರ್ಯ ಕಲಾನೀಕೆತನ ಸಂಸ್ಥೆಯ ಜಿ.ವಿ. ಪ್ರಸನ್ನಕುಮಾರ್ಗೆ, ಕನ್ನಡ ಸಾಹಿತ್ಯ ಸೇವಾ ಶ್ರೀ ಪ್ರಶಸ್ತಿಯನ್ನು ಡಾ.ಕೆ.ಎಂ. ನಯಾಜ್ ಅಹ್ಮದ್ಗೆ, ಉನ್ನತಿ ಕಲಾ ಸೇವಾ ರತ್ನ ಪ್ರಶಸ್ತಿಯನ್ನು ಸೋ.ಸು. ನಾಗೇಂದ್ರನಾಥ್ಗೆ ನೀಡಲಾಯಿತು. ನಂತರ ಬಿ.ವಿ.ರಾಜರಾಂ ನಿರ್ದೇಶನದ ಮಂಗ ಮಾಣಿಕ್ಯ ಪ್ರಹಸನ ನಾಟಕ ಪ್ರದರ್ಶನಗೊಂಡಿತು. ಈ ವೇಳೆ ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಬಿ.ವಿ. ರಾಜರಾಂ, ಜಿಪಂ ಸದಸ್ಯ ಎಂ.ವಿ. ಕೃಷ್ಣಪ್ಪ, ಗಾಯಕ ನಾಮಗೊಂಡ್ಲು ಎಲ್. ವೆಂಕಟೇಶಮೂರ್ತಿ, ವಕೀಲ ಜಿ.ವಿ. ವಿಶ್ವನಾಥ, ಸುರೇಶ್, ಚಂದ್ರಶೇಖರ, ಶ್ರೀನಿವಾಸ ಯಾದವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

