ರೇಲ್ವೆ ತಾಂತ್ರಿಕ ಸಿಬ್ಬಂದಿಯಿಂದ ಕಿರಿಕಿರಿ
ಕ.ಪ್ರ.ವಾರ್ತೆ ಕೋಲಾರ ಫೆ. 18
ನಗರದ ಕೋಲಾರ-ಟೇಕಲ್ ರಸ್ತೆಯಲ್ಲಿನ ರೇಲ್ವೆ ಲೆವೆಲ್ ಕ್ರಾಸಿಂಗ್ ಬಳಿ ರೇಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿಯು ಪದೆ ಪದೆ ಟ್ರ್ಯಾಲಿಯ ಮೇಲೆ ಓಡಾಡುವುದರಿಂದ ವಾಹನ ಚಾಲಕರು ಮತ್ತು ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಕೋಲಾರ ರೇಲ್ವೆ ನಿಲ್ದಾಣದಿಂದ ಟ್ರ್ಯಾಲಿಯಲ್ಲಿ ಕುಳಿತು ಕಾಮಗಾರಿ ಪರಿಶೀಲನೆಗೆ ಹೋಗುವ ತಾಂತ್ರಿಕ ಸಿಬ್ಬಂದಿಗಾಗಿ ಸುಮಾರು ಅರ್ಧಗಂಟೆ ಗೇಟ್ ಬಂದ್ ಮಾಡುವುದರಿಂದ ಟೇಕಲ್ ರಸ್ತೆಯಲ್ಲಿ ನೂರಾರು ವಾಹನಗಳು ನಿಲುಗಡೆ ಆಗುತ್ತವೆ. ಗೇಟ್ ತೆಗೆದ ಬಳಿಕ ಒಟ್ಟಿಗೆ ಎಲ್ಲಾ ವಾಹನಗಳು ರೇಲ್ವೆ ಹಳಿಗಳ ಮೇಲೆ ಸಾಗುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಲ್ಲದೆ, ವಾಹನ ಚಾಲಕರ ನಡುವೆ ಘರ್ಷಣೆಗಳಾಗುವುದಕ್ಕೆ ಕಾರಣವಾಗುತ್ತಿದೆ.
ಸಂಚಾರ ದಟ್ಟಣೆ ಇಲ್ಲದ ಸಮಯದಲ್ಲಿ ತಾಂತ್ರಿಕ ಸಿಬ್ಬಂದಿ ಕಾಮಗಾರಿ ವೀಕ್ಷಣೆ ಮಾಡಲು ಟ್ರ್ಯಾಲಿಯ ಮೇಲೆ ಹೋಗುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಕೋಲಾರ-ಟೇಕಲ್ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟವಾಗಿರುತ್ತದೆ. ವಾಹನ ಮತ್ತು ಜನತೆಯ ಅನುಕೂಲಕ್ಕಾಗಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದ ರೇಲ್ವೆ ಇಲಾಖೆಯವರು ಜನರಿಗೆ ಶಿಕ್ಷೆ ಕೊಡುವುದಕ್ಕೆ ಅಧಿಕಾರವಿಲ್ಲವೆಂದು ಸಾರ್ವಜನಿಕರು ತಿಳಿಸಿದ್ದಾರೆ. ಅಲ್ಲದೆ, ರೇಲ್ವೆ ಲೆವೆಲ್ ಕ್ರಾಸ್ಸಿಂಗ್ ಬಳಿ ಸಂಚಾರ ದಟ್ಟಣೆ ಎಂಬುದು ತಾಂತ್ರಿಕ ಸಿಬ್ಬಂದಿಯ ಅರಿವಿಗೂ ಬಂದಿರುವುದರಿಂದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಟೇಕಲ್ ರಸ್ತೆಯಲ್ಲಿ ಹಾದು ಹೋಗಿರುವ ರೇಲ್ವೆ ಕ್ರಾಸ್ಸಿಂಗ್ ಬಳಿ ಸುಗಮ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

