ಕನ್ನಡದಲ್ಲಿ 2ನೇ ರ್ಯಾಂಕ್
ಕೋಲಾರ: ಬೆಂಗಳೂರು ವಿಶ್ವವಿದ್ಯಾಲಯದಿಂದ 2011-13 ಸಾಲಿನಲ್ಲಿ ನಡೆದ ಕನ್ನಡ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕೋಲಾರದ ಸರ್ಕಾರಿ ಬಾಲಕರ ಕಾಲೇಜಿನ ವಿದ್ಯಾರ್ಥಿ ಎ.ಕೆ. ರವಿಶಂಕರ್ ವಿಶ್ವವಿದ್ಯಾಲಯ ಮಟ್ಟದಲ್ಲಿ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಈ ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲೆ ಮಧುಲತಾ ಮೋಸಸ್ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ವರ್ಗ ಅಭಿನಂದಿಸಿದೆ.
ಪೊಲೀಸರ ಸಹಕಾರದಲ್ಲಿ ಒತ್ತುವರಿ ತೆರವು
ಮಾಲೂರು: ಪಟ್ಟಣದ ಬಸ್ ನಿಲ್ದಾಣ ಸುತ್ತಮುತ್ತಲ ಪ್ರದೇಶಗಳಲ್ಲಿ ಅನಧಿಕೃತವಾಗಿ ಮಾಡಿಕೊಂಡಿರುವ ಒತ್ತುವರಿ ಪೊಲೀಸರ ಸಹಕಾರದಲ್ಲಿ ಇನ್ನೂಂದು ವಾರದಲ್ಲಿ ತೆರವುಗೊಳಿಸುವ ಕಾರ್ಯಾಚರಣೆ ಹಮ್ಮಿಕೊಳ್ಳುತ್ತಿರುವುದಾಗಿ ಪುರಸಭೆ ಮುಖ್ಯಾಧಿಕಾರಿ ರೇಣುಕಾ ಹೇಳಿದರು. ಸ್ಥಳೀಯ ಎಸ್ಐ ದಯಾನಂದ್ ಜತೆ ಈ ಸಂಬಂಧ ನಡೆಸಿದ ಸಭೆ ನಂತರ ಮಾತನಾಡಿ, ಬಸ್ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಉದ್ಯಾನವನ ಬಳಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವ ದ್ವಿಚಕ್ರ ವಾಹನಗಳ ಬಗ್ಗೆಯೂ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ ಮುಖ್ಯಾಧಿಕಾರಿಗಳು ಹುಣಸೇಮರದ ಬಳಿಯ ಅಂಗಡಿಗಳ ಒತ್ತುವರಿ ತೆರವುಗೊಳಿಸುವುದಾಗಿ ತಿಳಿಸಿದರು. ತೆರವುಗೊಳಿಸುವ ಮುನ್ನ ಅಂಗಡಿಯವರಿಗೆ ನೋಟಿಸ್ ನೀಡುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿಗಳು ಅನಧಿಕೃತಗಳಿಗೆ ನೋಟಿಸ್ ನೀಡುವ ಪ್ರಮೇಯ ಇಲ್ಲ ಎಂದರು. ರಸ್ತೆಗಳಲ್ಲಿ ಸಂಚಾರ ಪಾಲನೆ ಗೆರೆಗಳನ್ನು ಬಣ್ಣದಲ್ಲಿ ಹಾಕಿಸಲಾಗುವುದು ಎಂದರು. ಅಭಿಯಂತರ ಮಂಜುನಾಥ್, ಪುರಸಭೆ ಸದಸ್ಯ ಅಲೂಮಂಜು, ಹನುಮಂತರೆಡ್ಡಿ, ರಮೇಶ್ ಇದ್ದರು.
ಪದಾಧಿಕಾರಿಗಳ ಆಯ್ಕೆ
ಗುಡಿಬಂಡೆ: ಪಟ್ಟಣದ ಸಿಪಿಎಂ ಕಚೇರಿಯಲ್ಲಿ ನಡೆದ ಡಿವೈಎಫ್ಐ 5ನೇ ಯುವಜನ ತಾಲೂಕು ಸಮ್ಮೇಳನದಲ್ಲಿ ಸಂಘಟನೆ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೆ.ಎನ್. ವೆಂಕಟರಮಣ, ಕಾರ್ಯದರ್ಶಿಯಾಗಿ ಪಿ.ಆರ್. ರಾಜಪ್ಪ, ಉಪಾಧ್ಯಕ್ಷರಾಗಿ ಡಿ.ಆರ್.ದೇವರಾಜ್, ವೆಂಕಟರೆಡ್ಡಿ, ಆದಿನಾರಾಯಣರೆಡ್ಡಿ, ಸಹ ಕಾರ್ಯದರ್ಶಿಗಳಾಗಿ ರವಿ, ನರಸಿಂಹಮೂರ್ತಿ, ಖಜಾಂಚಿಯಾಗಿ ಎಚ್.ಎಂ. ವೆಂಕಟಸ್ವಾಮಿರೆಡ್ಡಿ, ಸದಸ್ಯರಾಗಿ ಕಡೇಹಳ್ಳಿ ವೆಂಕಟರೆಡ್ಡಿ, ಹರಿ, ಮಧು, ಶ್ರೀನಿವಾಸ, ಮಲ್ಲಿಖಾರ್ಜುನ, ಮಂಜುನಾಥ, ವೆಂಕಟೇಶ್, ರಾಮಕೃಷ್ಣಾರೆಡ್ಡಿರನ್ನು ಆಯ್ಕೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

