ಕೃಷಿ ಮೂಲಕ ಜಾಗೃತಿ ಮೂಡಿಸಿ
ಚಿಕ್ಕಬಳ್ಳಾಪುರ: ಸಾಹಿತ್ಯದ ಕೃಷಿ ಮೂಲಕ ಸಮಾಜದಲ್ಲಿ ಕಂಡು ಬರುವ ಅಂಕು ಡೊಂಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದು ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹೊಸ ಬಸ್ ನಿಲ್ದಾಣ ಸಮೀಪವಿರುವ ಶ್ರೀ ಯೋಗಿನಾರೇಯಣ ಯತೀಂದ್ರರ ಆಲಯದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ತತ್ವ ಗಾಯನ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ ನಿಂತ ನೀರಲ್ಲ. ಸಮಾಜದ ಆಗುಹೋಗುಗಳಿಗೆ ಅನುಗುಣವಾಗಿ ನಿರಂತರವಾಗಿ ಮನುಷ್ಯ ಜೀವನದೊಂದಿಗೆ ನಡೆದು ಬರುವಂತಹುದು. ಅದೇ ರೀತಿ ಈ ಹಿಂದಿನ ಕಾಲದಿಂದಲೂ ಅನೇಕ ಮಹಾನ್ ಸಾಹಿತಿಗಳು ಹುಟ್ಟಿ ತಮ್ಮ ಸಾಹಿತ್ಯದ ಮೂಲಕ ಸಮಾಜದ ಮೇಲೆ ಬೆಳಕು ಚೆಲ್ಲುತ್ತ ಜನರಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಹಿತ್ಯಕ್ಕೆ ತನ್ನದೇ ಆದ ಮಹತ್ವ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪಾನ್ಯಾಸಕ ಬಿ.ಆರ್. ವೆಂಕಟರಾಮ್ ಮಾತನಾಡಿ, ಚುಟುಕು ಸಾಹಿತ್ಯ ಬದುಕಿನ ಲಾಲಿತ್ಯ ಜೀವನದ ಅನುಭವವನ್ನು ಬಿಂಬಿಸುತ್ತದೆ. ಪ್ರಮುಖ ಕವಿಗಳಾದ ದುಂಡೀರಾಜ್, ಅಕ್ಬರ್ ಆಲಿ, ದಿನಕರದೇಸಾಯಿರವರ ಚುಟುಕು ಕವಿತೆಗಳು ಸರಳ ಭಾಷೆಯಲ್ಲಿ ಹೊಸ ಅನುಭವವನ್ನು ನೀಡುತ್ತವೆ ಎಂದರು. ಲಯನ್ಸ್ ಸಂಸ್ಥೆಯ ಅಧ್ಯಕ್ಷ ಭದ್ರಾಚಲಂ ಮಾತನಾಡಿ, ಶ್ರೀ ಯೋಗಿ ನಾರೇಯಣರ ಬೋಧನೆಗಳು ಮತ್ತು ತತ್ವಗಳು ಉತ್ತಮ ಜೀವನ ನಡೆಸಲು ಪ್ರೇರಣೆ ನೀಡುತ್ತವೆ ಎಂದರು. ನಿವೃತ್ತ ಉಪನ್ಯಾಸಕ ಸಿ.ವಿ. ವೆಂಕಟಾಚಲಪತಿ, ಪತ್ರಕರ್ತ ಎಸ್. ಶಿವರಾಮ್, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪಾತಮುತ್ತಕದಹಳ್ಳಿ ಎಂ.ಚಲಪತಿಗೌಡ, ತಾಲೂಕು ಅಧ್ಯಕ್ಷ ಗೋವಿಂದರಾಜು ಮಾತನಾಡಿದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಸೌಭಾಗ್ಯ ಆನಂದ್, ಉಮಾ ಅಮರ್, ಅಂಬರೀಶ, ಬೈರಪ್ಪ, ಹನುಮಂತರಾಜು, ರಮೇಶ್, ವರದರಾಜು, ಕೃಷ್ಣಮೂರ್ತಿ, ಶಂಕರ್, ಆದಿನಾರಾಯಣ, ಸುಂದರಭಟ್ಟರು, ಮಂಜುನಾಥ, ಮಹೇಶ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

