ಕೋಲಾರ

ಕೇಂದ್ರದಲ್ಲಿ ಮತ್ತೆ ಕಿಚಡಿ ಸರ್ಕಾರ

Published On :

ಕೋಲಾರ: ದೇಶದಪ್ರಸಕ್ತ ರಾಜಕೀಯ ಚಟುವಟಿಕೆಗಳು ಗಮನಿಸಿದರೆ ಮತ್ತೆ ಕೇಂದ್ರದಲ್ಲಿ ಕಿಚಡಿ ಸರ್ಕಾರವೇ ಗಟ್ಟಿ ಎಂಬ ಅನುಮಾನ ಕಾಡುತ್ತಿದೆ ಎಂದು ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ತಿಳಿಸಿದರು.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶಕ್ಕೆ ವಿಪತ್ತು ಎದುರಾಗಿದೆ, ಪ್ರಜಾಪ್ರಭುತ್ವ ಯಾವ ದಿಕ್ಕಿನಲ್ಲಿ ಸಾಗಬೇಕಾಗಿತ್ತೋ ಅದಕ್ಕೆ ಧಕ್ಕೆಯುಂಟಾಗಿದೆ ಎಂದು ನೊಂದು ನುಡಿದರು.
ಆಂಧ್ರ ವಿಭಜನೆಗೆ ಸಂಬಂಧಿಸಿ ಸಂಸತ್ತಿನಲ್ಲಿ ನಡೆದ ಘಟನೆಗಳು ದೇಶದ ಕೀರ್ತಿಗೆ ಮಸಿ ಬಳಿಯುವಂತೆ ಮಾಡಿದೆ, ಇತ್ತೀಚಿಗೆ ಸಂಸತ್ತಿನಲ್ಲಿ ಆಂಧ್ರ ಪ್ರದೇಶದ ಕೆಲ ಸಂಸದರು ನಡೆದುಕೊಂಡಿರುವ ರೀತಿ ಸರಿಯಲ್ಲ, ಸಂಸದರಾದವರು ಅಧಿವೇಶನಕ್ಕೆ ಮೆಣಸು ಪುಡಿ, ಚಾಕು ಹಿಡಿದು ಹೋಗಿ ದಾಂದಲೆ ನಡೆಸಿರುವುದು ಸಂಸತ್ ಘನತೆ ಹಾಗೂ ಪಾವಿತ್ರ್ಯತೆಯನ್ನು ಹಾಳುಗೇಡುವಂತೆ ಮಾಡಿದೆ ಎಂದು ಟೀಕಿಸಿದರು.
ಆಂಧ್ರ ವಿಭಜನೆ ಕುರಿತು ಸಂಸತ್ನಲ್ಲಿ ಪರಿಣಾಮಕಾರಿಯಾಗಿ ಆ ರಾಜ್ಯದ ಸಂಸದರು ಚರ್ಚೆ ನಡೆಸಬೇಕಾಗಿತ್ತು, ತಮ್ಮ ನಿಲುವುಗಳನ್ನು ಪ್ರತಿಪಾದಿಸಲು ಮತದಾನಕ್ಕೆ ಅವಕಾಶ ಪಡೆಯಬಹುದಾಗಿತ್ತು. ಆದರೆ, ತೆಲಂಗಾಣ ವಿಭಜನೆಯ ವಿಚಾರದಲ್ಲಿ ಸಂಸದರು ನಡೆದುಕೊಂಡ ರೀತಿ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆಯಲ್ಲದೆ ಹೇಸಿಗೆ ಉಂಟು ಮಾಡಿದೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಸಮರ್ಥ ಅಭ್ಯರ್ಥಿಯೇ ಎಂಬ ಪ್ರಶ್ನೆಗೆ ನನಗೆ ಆ ಬಗ್ಗೆ ತಿಳಿದಿಲ್ಲ, ಇದನ್ನು ಜನರೇ ತೀರ್ಮಾನ ಮಾಡಲಿ ಎಂದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತೃತೀಯ ರಂಗ ಸ್ಥಾಪನೆ ಮಾಡುತ್ತಿರುವ ಬಗ್ಗೆ ಕೇಳಿದಾಗ, ಶ್ರೀಮದ್ ರಮಾರಣ ಗೋವಿಂದಾ ಗೋವಿಂದಾ ಎಂದು ತಮ್ಮದೇ ಶೈಲಿಯಲ್ಲಿ ವ್ಯಂಗ್ಯವಾಡಿದರಲ್ಲದೆ, ಮುಂದಿನ ಲೋಕಸಭಾ ಚುನಾವಣೆಯಲ್ಲೂ ಯಾವ ಪಕ್ಷಕ್ಕೂ ಬಹುಮತ ಬಾರದ ವಾತಾವರಣ ಇದ್ದು, ಮತ್ತೆ ರಾಷ್ಟ್ರದ ಜನತೆ ಕಿಚಡಿ ಸರ್ಕಾರನ್ನು ನೋಡುವ ದುಸ್ಥಿತಿ ಎದುರಾಗಬಹುದೆಂದು ಅನುಮಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.