ಇಂದಿನಿಂದ ಉಚಿತ ವೈದ್ಯಕೀಯ ಸೇವೆ
ಕಪ್ರ ವಾರ್ತೆ ಕೋಲಾರ ಫೆ.19
ಅವಿಭಜಿತ ಕೋಲಾರ ಮತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಬಡ ಜನರಿಗಾಗಿ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಗುರುವಾರದಿಂದ ಉಚಿತ ವೈದ್ಯಕೀಯ ಸೇವೆ ಆರಂಭಿಸಲಾಗುತ್ತಿದೆ ಎಂದು ಆಸ್ಪತ್ರೆ ಅಧ್ಯಕ್ಷ ಆರ್.ಎಲ್. ಜಾಲಪ್ಪ ತಿಳಿಸಿದರು.
ನಗರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ವಸತಿ ನಿಲಯದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಸತತ ಬರಗಾಲ ಅವರಿಸಿದ್ದು, ಜಿಲ್ಲೆಯ ರೈತರು ಮತ್ತು ಬಡ ಜನತೆ ಸಂಕಷ್ಟದಲ್ಲಿ ಸಿಕ್ಕಿರುವುದರಿಂದ ನಮ್ಮ ಆಸ್ಪತ್ರೆಯಿಂದ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆಗಳ ಮುಖಾಂತರ ಸಾಮಾಜಿಕ ಬದ್ಧತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆ ಜನತೆ ಪ್ಲೋರೈಡ್, ನೈಟ್ರೇಟ್ ಮಿಶ್ರಿತ ವಿಷ ಪೂರಿತ ನೀರನ್ನು ಸೇವನೆ ಮಾಡುತ್ತಿರುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ಅನೇಕರು ವಿಕಲಚೇತನರಾಗಿದ್ದಾರೆ, ಸಾಕಷ್ಟು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹಣವಿಲ್ಲದೆ ನರಳುತ್ತಿರುವುದರಿಂದ ನಮ್ಮ ಸಂಸ್ಥೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ ಎಂದು ಹೇಳಿದರು. ಸಂಸ್ಥೆ ಹಣಕಾಸಿನ ತೊಂದರೆಯಿಲ್ಲದೆ ಉತ್ತಮ ಸ್ಥಿತಿಯಲ್ಲಿರುವುದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೇವೆ ಮಾಡಲು ನಮ್ಮ ಟ್ರಸ್ಟ್ ತೀರ್ಮಾನಿಸಿದ್ದು ಎರಡೂ ಜಿಲ್ಲೆಯ ಜನತೆ ಇದರ ಪ್ರಯೋಜನ ಪಡೆಯಬೇಕೆಂದು ಹೇಳಿದರು.
ಉಚಿತ ಸೌಲಭ್ಯ ಯಾವುದಕ್ಕೆ: ವೈದ್ಯಕೀಯ, ಮಕ್ಕಳ, ಶಸ್ತ್ರ ಚಿಕಿತ್ಸೆ ಹಾಗೂ ಎಲ್ಲಾ ವಿಭಾಗಗಳಲ್ಲಿ ಸಾಮಾನ್ಯ ವಾರ್ಡಿನ ರೋಗಿಗಳಿಗೆ ವಾರ್ಡ್ಚಾರ್ಜ್ ಇರುವುದಿಲ್ಲ, ವೈದ್ಯಕೀಯ ಹಾಗೂ ಮಕ್ಕಳ ವಾರ್ಡ್ ಚಿಕಿತ್ಸಾ ಸೇವೆಗಳು, ವೈದ್ಯರ ಮತ್ತು ಶುಶ್ರೂಷಕೆಯರ ಶುಲ್ಕವಿರುವುದಿಲ್ಲ ಎಂದು ತಿಳಿಸಿದರು.
ಮಲ, ಮೂತ್ರ, ರಕ್ತ, ಕಫ ಮತ್ತು ಇಸಿಜಿ ಉಚಿತ, ರಕ್ತದಲ್ಲಿ ಸಕ್ಕರೆ, ಅಂಶ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ಕೆಲವು ರಕ್ತ ಪರೀಕ್ಷೆಗಳು ಉಚಿತ, ಸ್ತ್ರೀಯರ ಹೆರಿಗೆ ಮತ್ತು ಶಸ್ತ್ರ ಚಿಕಿತ್ಸೆ ಹರಿಗೆ ಉಚಿತ, 30 ಕಿ.ಮೀ.ವರೆಗೆ ಉಚಿತ ಅ್ಯಂಬುಲೆನ್ಸ್ ಸೌಕರ್ಯ, ಗರ್ಭಕೋಶದ ಎಲ್ಲಾ ತರಹದ ಶಸ್ತ್ರ ಚಿಕಿತ್ಸೆಗಳು ಉಚಿತ, ಅಪೆಂಡಿಕ್ಸ್, ಹರ್ನಿಯ, ಥೈರಾಡ್, ಸಾಮಾನ್ಯ ಗಡ್ಡೆಗಳು ಪಿತ್ತಕೋಶ ಮುಂತಾದವುಗಳ ಶಸ್ತ್ರಚಿಕಿತ್ಸೆಗೂ ಯಾವುದೇ ಶುಲ್ಕ ಪಡೆಯುವುದಿಲ್ಲ, ಇದಲ್ಲದೆ ಒಳ ರೋಗಿಗಳಿಗೆ ಪ್ರತಿ ದಿನ 200 ಎಂಎಲ್ ಹಾಲು, ಉಪಹಾರ ಹಾಗೂ ಮಧ್ಯಾಹ್ನದ ಹಾಗೂ ರಾತ್ರಿಯ ಊಟವನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಸ್ಕ್ಯಾನಿಂಗ್ಗೆ ರಿಯಾಯಿತಿ: ಎಕ್ಸರೇ, ಸ್ತನಪರೀಕ್ಷೆ, ಸಿ.ಟಿ. ಮತ್ತು ಎಂ.ಆರ್.ಐ.ಸ್ಕ್ಯಾನ್, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮತ್ತು ಡಾಪ್ಲರ್ ಸ್ಟಡಿಯಲ್ಲಿ ಶೇ.30ರಷ್ಟು ವಿನಾಯಿತಿ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ದೊಡ್ಡ ಆಸ್ಪತ್ರೆಗಳಲ್ಲಿ ದೊರಕುವ ಆತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸಾ ಸೌಲಭ್ಯ ಹೊಂದಿದ 1100 ಹಾಸಿಗೆಯುಳ್ಳ ಆಸ್ಪತ್ರೆಯಾಗಿದ್ದು, ಜನತೆ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು. ಆರ್.ಎಲ್. ಜಾಲಪ್ಪ ಆಸ್ಪತ್ರೆ ಕಾರ್ಯದರ್ಶಿ ನಾಗರಾಜ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶ್ರೀರಾಮಲು ಇದ್ದರು.
ವೈದ್ಯಕೀಯ, ಮಕ್ಕಳ, ಶಸ್ತ್ರ ಚಿಕಿತ್ಸೆ ಹಾಗೂ ಎಲ್ಲಾ ವಿಭಾಗಗಳಲ್ಲಿ ಸಾಮಾನ್ಯ ವಾರ್ಡಿನ ರೋಗಿಗಳಿಗೆ ವಾರ್ಡ್ಚಾರ್ಜ್, ಮಕ್ಕಳ ವಾರ್ಡ್ ಚಿಕಿತ್ಸಾ ಸೇವೆಗಳು ಜಿರುವುದಿಲ್ಲ
ಟಿ ಆರ್.ಎಲ್. ಜಾಲಪ್ಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

