ಗ್ರಹಣ ಹಿಡಿದ ಕಲ್ಯಾಣಿಗಳ ಪುನಶ್ಚೇತನ
ಬಂಗಾರಪೇಟೆ: ಜಲ ಕ್ಷಾಮಕ್ಕೆ ಸಿಲುಕಿರುವ ತಾಲೂಕಿನ ಜನರಿಗೆ ಮುಕ್ತಿ ಕಾಣಿಸಲು ಹಿಂದಿನ ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ಅವರು ಪುರಾತನ ಕಲ್ಯಾಣಿಗಳಿಗೆ ಮರು ಜೀವ ನೀಡಿದ್ದರು, ಅವರು ವರ್ಗಾವಣೆಯಾಗುತ್ತಿದ್ದಂತೆ ಅವರ ಕನಸಿನ ಕಲ್ಯಾಣಿಗಳಿಗೂ ಗ್ರಹಣ ಬಡಿದಿದೆ.
ಕಳೆದ ಒಂಬತ್ತು ವರ್ಷಗಳಿಂದ ತಾಲೂಕಿನ ಜನರು ವರುಣನ ದರ್ಶನವಿಲ್ಲದೆ ಕಂಗಾಲಾಗಿದ್ದು, ಪೂರ್ವಿಕರು ಮುಂದಾಲೋಚನೆಯಿಂದ ಕೆರೆ, ಕುಂಟೆಗಳು, ಗೋಕುಂಟೆ ಹಾಗೂ ಕಲ್ಯಾಣಿಗಳನ್ನು ನಿರ್ಮಿಸಿ ನೀರಿನ ಅಭಾವ ಬಾರದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಆದರೆ ಇಂದು ಮಳೆಯಿಲ್ಲದೆ ಕೆರೆಗಳು ಅಸ್ಥಿತ್ವ ಕಳೆದುಕೊಂಡಿವೆ. ಇದರ ನೆರಳಿನಲ್ಲೆ ಇದ್ದ ಕಲ್ಯಾಣಿಗಳು ಭೂತಗನ್ನಡಿ ಇಟ್ಟು ನೋಡಿದರೂ ಕಾಣಿಸುವುದಿಲ್ಲ ಎಂಬಂತಾಗಿತ್ತು.
ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ವಿಧಿಯಿಲ್ಲದೆ ಪ್ಲೋರೈಡ್ ನೀರನ್ನೆ ಕುಡಿಯುವುದು ಜನರಿಗೆ ಅನಿವಾರ್ಯವಾಗಿದೆ. ತಾಲೂಕಿಗೆ ಶಾಶ್ವತ ನೀರಾವರಿ ಬೇಕೆಂದು ಹಲವು ಸಂಘ ಸಂಸ್ಥೆಗಳು ಹೋರಾಟ ಮಾಡುತ್ತಲೇ ಇವೆ. ಇದಕ್ಕೆ ಜನಪ್ರತಿಧಿಗಳ ಟೊಳ್ಳು ಭರವಸೆ ಸಿಕ್ಕಿದೆ. ಇವೆಲ್ಲದರ ನಡುವೆ ಈ ಹಿಂದಿನ ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಡಾ. ವಿಶ್ವನಾಥ್ ನೀರಿನ ಸಮಸ್ಯೆ ನೀಗಿಸಲು ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲು ಅಭಿಯಾನ ನಡೆಸಿದರು. ಸ್ವತಹ ಜಿಲ್ಲಾಧಿಕಾರಿಗಳೇ ಪ್ರತಿ ಗ್ರಾಮಕ್ಕೂ ಹೋಗಿ ಕಲ್ಯಾಣಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು. ಈ ಅಭಿಯಾನದಿಂದ ಜನರಲ್ಲಿ ನೀರಿನ ಬಗ್ಗೆ ಆಶಾಕಿರಣ ಹೊರಹೊಮ್ಮಿತ್ತು, ಆದರೆ ಜಿಲ್ಲಾಧಿಕಾರಿಗಳು ರಾಮನಗರಕ್ಕೆ ವರ್ಗಾವಣೆಯಾಗುತ್ತಿದ್ದಂತೆ ಅವರ ಕನಸಿನ ಕಲ್ಯಾಣಿಗಳ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ಈಗಿನ ಜಿಲ್ಲಾಧಿಕಾರಿ ಡಿ.ಕೆ. ರವಿರವರು ಕಲ್ಯಾಣಿಗಳ ಅಭಿವೃದ್ಧಿಗೆ ಮರು ಜೀವ ನೀಡಬೇಕು ಮತ್ತೆ ಕೆರೆಗಳ ರಕ್ಷಣೆಗೂ ಆಧ್ಯತೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

