ಕೇಂದ್ರ ಸಚಿವ ಮುನಿಯಪ್ಪನವರ ಸಾಧನೆ ಶೂನ್ಯ: ನಾರಾಯಣಸ್ವಾಮಿ
ಟೇಕಲ್: ಕೋಲಾರ ಜಿಲ್ಲೆಗೆ ಕೆ.ಎಚ್. ಮುನಿಯಪ್ಪನವರ ಸಾಧನೆ ಶೂನ್ಯ ಎಂದು ಬಿಜೆಪಿ ಟಿಕೆಟ್ ಅಕಾಂಕ್ಷಿ ಎಂ.ನಾರಾಯಣಸ್ವಾಮಿ ಆರೋಪಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಎತ್ತಿನ ಹೊಳೆ, ನೇತ್ರಾವತಿ ತಿರುವು, ಶಾಶ್ವತ ಕುಡಿಯುವ ನೀರಿನ ಯೋಜನೆ ಬಗ್ಗೆ ಎಂದೂ ಒತ್ತಾಯ ಮಾಡಿಲ್ಲ ಎಂದು ಟೇಕಲ್ ಬಿಜೆಪಿ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಹೇಳಿದರು.
ಯರಗೋಳ್ ಯೋಜನೆ ಬಂಗಾರಪೇಟೆ, ಕೋಲಾರ, ಕೆಜಿಎಫ್, ಮಾಲೂರಿಗೆ ಕುಡಿಯುವ ನೀರನ್ನು ನೀಡುವ ಯೋಜನೆಯಾಗಿದ್ದು ಈ ಯೋಜನೆಗೆ ಎಳೇಸಂದ್ರದ ಬಳಿ ಇರುವ 105 ಎಕರೆ ಅರಣ್ಯ ಭೂಮಿಯನ್ನು ಕೇಂದ್ರದ ಅನುಮೋದನೆಗೆ ನೀಡಿಲ್ಲ. ರಾಜ್ಯದಲ್ಲಿ ರೇಷ್ಮೆ ಬೆಳೆಗಾರರು ಹೆಚ್ಚಿದ್ದು ಇದಕ್ಕೆ ತಕ್ಕ ಮಾರುಕಟ್ಟೆ ಬೆಲೆ ಸಿಗದಿರಲು ಕಾರಣ ಚೀನಾದಿಂದ ಬರುವ ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿದ್ದು ಇದಕ್ಕೆ ಯಾವುದೇ ತೆರಿಗೆ ವಿಧಿಸುತ್ತಿಲ್ಲ ಎಂದು ಕಿಡಿಕಾರಿದರು.
ನಾನು ಅಧಿಕೃತ ಅಭ್ಯರ್ಥಿ ಅಲ್ಲ ಪಕ್ಷ ನನ್ನನ್ನು ಗುರ್ತಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದರೆ ಸ್ಪರ್ಧಿಸುತ್ತೇನೆ ಎಂದರು. ನರೇಂದ್ರ ಮೋದಿಯವರನ್ನು ಈ ಬಾರಿ ಭಾರತದ ಪ್ರಧಾನಿ ಪಟ್ಟಕ್ಕೇರಿಸಲು ಎಲ್ಲರೂ ಕೈಜೋಡಿಸಬೇಕೆಂದರು.
ಕುತಂತ್ರ ರಾಜಕಾರಣಿಗೆ ಉದಾಹರಣೆ ಕೆ.ಎಚ್. ಮುನಿಯಪ್ಪ. ಇವರ ಚಾಣಾಕ್ಷತನ ಮಾಲೂರು ತಾಲೂಕಿಗೂ ವ್ಯಾಪಿಸಿದ್ದು ಕೆಲವರನ್ನು ಆಮಿಷ ಒಡ್ಡಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದು ಉತ್ತಮ ರಾಜಕಾರಣದ ವ್ಯಕ್ತಿತ್ವವಲ್ಲವೆಂದು ಹೇಳಿದರು.ರಾಷ್ಟ್ರೀಯ ಪರಿಷತ್ ಸದಸ್ಯ ಹನುಮಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಪ್ರಕಾಶ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅಪ್ಪಿ ಮಾತನಾಡಿದರು. ಎಂ. ನಾರಾಯಣಸ್ವಾಮಿಯವರನ್ನು ಬಿಜೆಪಿ ಕಾರ್ಯಕರ್ತರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ತಾಪಂ ಅಧ್ಯಕ್ಷ ಆನಂದ್, ಗೋಪಾಲಕೃಷ್ಣ, ಡಿ.ಎಂ. ವೆಂಕಟೇಶ್, ಪಾಂಡುರಂಗರಾವ್, ಪದ್ಮನಾಭಯ್ಯ, ರಮೇಶ್, ಗೋಪಾಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

