ಹೆಚ್ಚಿನ ಹಣ ವಸೂಲಿ: ಪ್ರತಿಭಟನೆ
ಚಿಂತಾಮಣಿ: ಖಾಸಗಿ ಸೈಬರ್ ಬಳಿ ಬಯೋವುಟ್ರಿಕ್ ಮಾಡಿಸಲು ಬಂದ ಗ್ರಾಮೀಣ ಜನತೆಯ ಬಳಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿ ನೂರಾರು ರೈತರು ಪ್ರತಿಭಟನೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಎಂ.ಜಿ. ರಸ್ತೆಯ ಖಾಸಗಿ ಸೈಬರ್ನಲ್ಲಿ ಬಯೋವುಟ್ರಿಕ್ ಮಾಡಿಸಲು ಬಂದ ಗ್ರಾಮೀಣ ಪ್ರದೇಶದ ವಿವಿಧ ಗ್ರಾಮಗಳ ಜನರು ಗುರುವಾರ ಬೆಳಿಗಿನ ಜಾವದಿಂದ ಕ್ಯೂನಲ್ಲಿ ನಿಂತಿದ್ದರು ನಿರ್ಲಕ್ಷ್ಯ ವಹಿಸಲಾಗಿದೆ. ಜೊತೆಗೆ 150 ರಿಂದ 500 ರು. ಪಡೆದು ಬಯೋವುಟ್ರಿಕ್ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ತಾಲೂಕಿನ ಕೋರ್ಲಪರ್ತಿ ಗ್ರಾಪಂ ಉಪಾಧ್ಯಕ್ಷ ಹಾಗೂ ಖಾಸಗಿ ಸೈಬರ್ ಸೆಂಟರಿನವರು ಒಳ ಒಪ್ಪಂದ ಮಾಡಿಕೊಂಡು ಸರ್ಕಾರಿ ಆದೇಶದ ಪ್ರಕಾರ 50 ರುಪಾಯಿ ಪಡೆಯುವ ಬದಲಾಗಿ 150 ರು.ಗುಹೆಚ್ಚು ವಸೂಲಿ ಮಾಡುತ್ತಿರುವ ಬಗ್ಗೆ ಜನರು ತಿರುಗಿಬಿದ್ದರು. ಸುದ್ದಿ ತಿಳಿದು ನಗರಠಾಣೆ ಸಬ್ಇನ್ಸ್ಪೆಕ್ಟರ್ ಮುರಳಿ ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಈ ಬಗ್ಗೆ ಹಲವು ಕನ್ನಡಪರ ಸಂಘಟನೆಗಳು ತಾಲೂಕು ದಂಡಾಧಿಕಾರಿಗಳಿಗೆ ದೂರು ನೀಡಿದರೂ ತಹಸೀಲ್ದಾರ್ ಮಾತಿಗೆ ಕಿಮ್ಮತ್ತು ನೀಡದೆ ಬಡವರಿಂದ ಹಣ ಸುಲಿಗೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲೆಂಬ ಆರೋಪ ಕೇಳಿ ಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

