ಕೋಲಾರ

ಓಡಿಹೋದ ಮಗಳು; ವಿಷ ಸೇವಿಸಿದ ಪೋಷಕರು

Published On :

ಮಾಲೂರು: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಯುವಕನೊಂದಿಗೆ ಓಡಿ ಹೋದ ಹಿನ್ನೆಲೆಯಲ್ಲಿ ಬೇಸತ್ತ ಆಕೆಯ ಪೋಷಕರು ವಿಷ ಸೇವಿಸಿ ಅತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ವರದಿಯಾಗಿದೆ.
ತಾಲೂಕಿನ ಚೌಡದೇನಹಳ್ಳಿ ಗ್ರಾಮದ ರಾಜಾರೆಡ್ಡಿ ಹಾಗೂ ಅಮೃತ ವಿಷ ಸೇವಿಸಿದ ದಂಪತಿಗಳಾಗಿದ್ದಾರೆ. ಪಟ್ಟಣದ ಜೆಎಸ್ಎಸ್ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಪ್ರತಿಭಾ(ಹೆಸರು ಬದಲಾಯಿಸಲಾಗಿದೆ)ತಾಲೂಕಿನ ಜಕ್ಕಸಂದ್ರದ ನಿವಾಸಿ ಶಿವಕುಮಾರ್ ಜತೆ ಕಳದೆ 17 ರಂದು ಓಡಿಹೋಗಿ ಮದುವೆ ಆಗಿದ್ದಾರೆ. ಈ ವಿಷಯ ತಿಳಿದ ಪ್ರತಿಭಾಳ ಪೋಷಕರು 18 ರಂದು ಸ್ಥಳೀಯ ಪೊಲೀಸರಿಗೆ ಜಕ್ಕಸಂದ್ರದ ಶಿವಕುಮಾರ್ ತಮ್ಮ ಮಗಳನ್ನು ಅಪಹರಿಸಿದ್ದಾನೆ. ಅಪ್ರಾಪ್ತ ಮಗಳನ್ನು ಹುಡುಕಿ ಶಿವಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದಾರೆ. ದೂರು ನೀಡಿದ ನಂತರ ರಾಜಾರೆಡ್ಡಿ ಮಗಳು ಹಾಗೂ ಅಕೆಯ ಪ್ರಿಯಕರನೊಂದಿಗೆ ಮಾತನಾಡಿ, ತನ್ನ ಮಗಳನ್ನು ಬಿಟ್ಟು ಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಆವರ ಮಗಳೇ ತಾನೂ ತನ್ನ ಪ್ರಿಯಕರನ ಜತೆ ಇರುವುದಾಗಿ ಹೇಳಿ ಪೋಷಕರನ್ನು ತಿರಸ್ಕರಿಸಿದ್ದಾಳೆ. ಇದರಿಂದ ನೊಂದ ದಂಪತಿಗಳು ಪಟ್ಟಣದ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿ 18 ರಂದು ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ. ಕೆಳಗೆ ಬಿದ್ದು ಒದಾಡುತ್ತಿದ್ದ ದಂಪತಿಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕೋಲಾರದ ಜಾಲಪ್ಪ ಆಸ್ವತ್ರೆಗೆ ಸಾಗಿಸಲಾಗಿದೆ. ಇಬ್ಬರು ಕೋಮಾ ಸ್ಥಿತಿಯಲ್ಲಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಪ್ರಕರಣ ನಂತರ ಪ್ರೇಮಿಗಳಿಬ್ಬರು ಪರಾರಿಯಾಗಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ಪರಾರಿಯಾಗಿರುವ ಪ್ರೇಮಿಗಳಿಗಾಗಿ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.