ಕೋಲಾರ

ಕ್ಯಾಸಂಬಳ್ಳ ಶಾಲೆಯಲ್ಲಿ ಮಹಾತ್ಮ ಗಾಂಧಿ ಪುಣ್ಯತಿಥಿ

Published On :

ಕೆಜಿಎಫ್: ಮಹಾತ್ಮ ಗಾಂಧೀಜಿ ಅವರು ಈ ದೇಶದ ಜನತೆ ಶಾಂತಿಯುತ ಜೀವನವನ್ನು ನಡೆಸಲು ಮತ್ತು ಅಹಿಂಸಾ ಮಾರ್ಗಗಳನ್ನು ಹೋಗಲಾಡಿಸಲು ಈ ದೇಶದ ಜನತೆಗೆ ಹಲವು ರೀತಿಯ ಉಪದೇಶಗಳನ್ನು ನೀಡಿದವರು ಗಾಂಧೀಜಿಯವರು ಎಂದು ಶಾಲಾ ಮುಖ್ಯ ಶಿಕ್ಷಕಿ ಎಂ.ಕೆ. ಶಶಿಕಲಾ ಹೇಳಿದರು.
 ಸರ್ವೋದಯ ದಿನಾಚರಣೆ ಪ್ರಯುಕ್ತ ಕ್ಯಾಸಂಬಳ್ಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿ ಸರ್ವೋದಯ ದಿನಾಚರಣೆಯಲ್ಲಿ ಶಾಲಾ ಮಕ್ಕಳಿಂದ ಸುಬಾಷ್‌ಚಂದ್ರ ಬೋಸ್, ಭಾರತ ಮಾತೆ, ಮಹಾತ್ಮ ಗಾಂಧೀಜಿ, ಒನಕೆ ಓಬವ್ವ, ಜವಾಹರ್‌ಲಾಲ್ ನೆಹರು ಸೇರಿದಂತೆ ಇತರೆ ಗಣ್ಯರ ವೇಷಗಳನ್ನು ಧರಿಸಿ ಶಾಲೆಯಿಂದ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ಕ್ಯಾಸಂಬಳ್ಳ ಗ್ರಾಮದ ಪ್ರಮುಖ ರಸ್ತೆ ಮತ್ತು ಬಸ್ ನಿಲ್ದಾಣದ ಮುಂಭಾಗ ಮಾನವ ಸರಪಳಿ ಸೃಷ್ಟಿಸಿ ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನು ಗ್ರಾಮಸ್ಥರಿಗೆ ಬೋಧಿಸಿದರು.
ಗಾಂಧೀಜಿ ಪುಣ್ಯತಿಥಿ ಅಂಗವಾಗಿ ಕ್ಯಾಸಂಬಳ್ಳ ಸರ್ಕಾರಿ ಶಾಲಾ ಮಕ್ಕಳಿಂದ ಒಂದು ನಿಮಿಷ ಕಾಲ  ದಿನಾಚರಣೆಯನ್ನು ನಡೆಸಿದ ವಿದ್ಯಾರ್ಥಿಗಳು ಗಾಂಧೀಜಿ ಅವರು ಜಾತಿ ರಹಿತ ದೇಶವನ್ನಾಗಿ ಕಟ್ಟುವುದು, ದೇಶದ ಎಲ್ಲಾ ಜನಾಂಗದವರು ಶಾಂತಿಯುತ ನೆಮ್ಮದಿಯ ಜೀವನವನ್ನು ನಡೆಸುವುದು, ಮದ್ಯಪಾನದಿಂದ ತಮ್ಮ ಉತ್ತಮ ಜೀವನವನ್ನು ಸರ್ವನಾಶ ಎಂಬುದು ಸೇರಿದಂತೆ ಅವರ ನೂರಾರು ಕನಸುಗಳ ಬಗ್ಗೆ ಶಾಲಾ ಮಕ್ಕಳಿಂದ ಗ್ರಾಮಸ್ಥರಿಗೆ ತಿಳಿವಳಿಕೆಯನ್ನು ನೀಡಿದ ನಂತರ ಕ್ಯಾಸಂಬಳ್ಳ ಗ್ರಾಮದ ಬಸ್ ನಿಲ್ದಾಣದ ಬದಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಜಾಗೃತಿ ಮೂಡಿಸಿದರು.
ಈ ವೇಳೆ ಶಾಲಾ ಮುಖ್ಯ ಶಿಕ್ಷಕಿ ಎಂ.ಕೆ.ಶಶಿಕಲಾ, ಶಿಕ್ಷಕರಾದ ಲಾವಣ್ಯಸಿಂಗ್, ರೇವತಿದೇವಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.