ಕೋಲಾರ

20ನಿಮಿಷ 20ಸುದ್ದಿ

Published On :

ಪೊಲೀಸ್ ಕ್ರೀಡೆ: ಡಿಎಆರ್ಗೆ ತಂಡ ಪ್ರಶಸ್ತಿ
ಕೋಲಾರ: ಜಿಲ್ಲಾ ಪೊಲೀಸ್ ಕ್ರೀಡಾಕೂಟದಲ್ಲಿ ಡಿ.ಎ.ಆರ್ ತಂಡ ಪ್ರಶಸ್ತಿಯನ್ನು ಹಾಗೂ ಕಾನ್ಸ್ಟೇಬಲ್ ರಾಜೇಂದ್ರ ಕುಮಾರ್ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಕಳೆದ ವಾರ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ  ಬಹುಮಾನ ಹಾಗೂ ತಂಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.ಕ್ರೀಡಾಕೂಟದಲ್ಲಿ ಗೆದ್ದವರಿಗೆ ಎಸ್ಪಿ ಡಾ.ರಾಮ್ನಿವಾಸ್ ಸಪಟ್ ಬಹುಮಾನಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದರು.ಎಎಸ್ಪಿ ಎಂ.ಐ. ಜಮೀಲ್, ಡಿ.ವೈ.ಎಸ್.ಪಿ. ಅಶೋಕ್ಕುಮಾರ್ ಇದ್ದರು. ದೊಡ್ಡಯ್ಯ ಸ್ವಾಗತಿಸಿ. ವೆಂಕಟಸ್ವಾಮಿ ನಿರೂಪಿಸಿದರು. ನಗರ ವೃತ್ತ ನಿರೀಕ್ಷಕ ಪಿ. ಶಿವಕುಮಾರ್ ವಂದಿಸಿದರು.

ಮತದಾನದ ಹಕ್ಕಿನಿಂದ ಸಮಾಜ ಸುಧಾರಣೆ ಸಾಧ್ಯ
ಚಿಂತಾಮಣಿ: ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ತಡೆಗಟ್ಟಲು ಪ್ರಜಾಪ್ರಭುತ್ವ ಅಸ್ತ್ರವಾದ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿದ್ದಲ್ಲಿ ಸಮಾಜ ಸುಧಾರಣೆ ಸಾಧ್ಯವೆಂದು ಹಿರಿಯ ವಕೀಲ ರಾಜಾರಾಮ್ ಹೇಳಿದರು. ನಗರದ ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಎಬಿವಿಪಿ ವತಿಯಿಂದ ಮತದಾರರ ಜಾಗೃತಿ ಹಾಗೂ ಮಾಹಿತಿ ಹಕ್ಕು ಕಾರ್ಯಾಗಾರ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅರಿವು ಮೂಡಿಸಿದರು. ಮಾಹಿತಿ ಹಕ್ಕು ಕಾಯ್ದೆ 2005ರಲ್ಲಿ ಜಾರಿಗೊಂಡಿದ್ದು, ಪ್ರತಿಯೊಬ್ಬ ವ್ಯಕ್ತಿಯೂ ಸರ್ಕಾರ ಭರಿಸುವ ಖರ್ಚುವಚ್ಚ ತಿಳಿಯುವುದು ಸಂವಿಧಾನ ಹಕ್ಕು ಎಂದರು. ನಂಜಪ್ಪ, ಮಂಜುನಾಥರೆಡ್ಡಿ, ಸುರೇಶ್, ಲಕ್ಷ್ಮಣ್, ನವಾಜ್, ಲಾವಣ್ಯ, ಹರ್ಷಿಯಾ, ವಿಜಯ್, ಶ್ವೇತಾ ಸೇರಿ ಇತರರಿದ್ದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಮೊದಲ ಮಹಿಳಾ ಎಸ್ಪಿ ದಿವ್ಯ
ಚಿಕ್ಕಬಳ್ಳಾಪುರ: ಜಿಲ್ಲಾ ರಕ್ಷಣಾಧಿಕಾರಿಯಾಗಿ ದಿವ್ಯ ವಿ. ಗೋಪಿನಾಥ್ ಶುಕ್ರವಾರ ಅಧಿಕಾರವನ್ನು ಸ್ವೀಕರಿಸುವ ಮೂಲಕ ಜಿಲ್ಲೆಯ ಮೊದಲ ಮಹಿಳಾ ರಕ್ಷಣಾಧಿಕಾರಿ ಎನಿಸಿಕೊಂಡಿದ್ದಾರೆ.
ಇಲ್ಲಿ ಈ ಹಿಂದೆಯಿದ್ದ ಜಿಲ್ಲಾ ರಕ್ಷಣಾಧಿಕಾರಿ ಎನ್. ಶಿವಪ್ರಸಾದ್ ಬಡ್ತಿ ಮೇಲೆ ವರ್ಗಾವಣೆಯಾಗಿದ್ದು ಇವರ ಜಾಗಕ್ಕೆ ದಿವ್ಯ ಗೋಪಿನಾಥ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ನಗರದಲ್ಲಿರುವ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಆಗಮಿಸಿ ಅಧಿಕಾರವನ್ನು ಸ್ವೀಕರಿಸಿದ ನೂತನ ಪ್ರಥಮ ಮಹಿಳಾ ಎಸ್ಪಿ ದಿವ್ಯಾ ವಿ. ಗೋಪಿನಾಥ್ರಿಗೆ ಕುಕಡಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಪೊಲೀಸ್ ಸಿಬ್ಬಂದಿ ಪುಷ್ಪ ಗುಚ್ಚವನ್ನು ನೀಡಿ ಸ್ವಾಗತಿಸಿದರು. ಮಂಗಳೂರಿನಲ್ಲಿ ಪ್ರೊಬೇಷನರಿಯಾಗಿ ರಾಯಚೂರಿನಲ್ಲಿ ಎಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಲೆದರ್ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ
ಮಾಲೂರು: ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆಯೂ ಸಹಕಾರ ನೀಡಲಿದ್ದು, ವಿದ್ಯೆಯಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗಳಿಗೂ ನೀಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣ್ಯ ರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಸ್ಥಳೀಯ ಬಿಜೆಪಿಯುವ ಮೋರ್ಚಾ ಆಯೋಜಿಸಿದ್ದ ಲೆದರ್ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿ, ವಿದ್ಯೆ ಮೆದುಳಿಗೆ ಕಸರತ್ತು ನೀಡಿದರೆ ಕ್ರೀಡೆ ದೇಹದ ಎಲ್ಲ ಅಂಗಗಳಿಗೂ ಕಸರತ್ತು ನೀಡುತ್ತದೆ ಎಂದರು. ಓಂಶಕ್ತಿ ಚಲಪತಿ, ಯುವ ಮೋರ್ಚಾದ ತಾಲೂಕು ಅಧ್ಯಕ್ಷ ರಾಜು ಅಪ್ಪಿ, ಹಿರಿಯ ಮುಖಂಡ ತಬಲ ನಾರಾಯಣಸ್ವಾಮಿ, ಬುಜ್ಜಿ ಶ್ರೀನಾಥ್ ಮಾತನಾಡಿದರು. ಬಿಜೆಪಿ ಯುವ ಮೋರ್ಚಾದ ಆಂಜಿನಪ್ಪ, ಹರ್ಷ, ವೆಂಕಟಾಚಲಪತಿ ಇದ್ದರು.

ಹಳ್ಳಿ ಜನರಿಗೆ ಸೌಲಭ್ಯ ಒದಗಿಸಿ: ಇಒ ಸೂಚನೆ
ಚಿಂತಾಮಣಿ: ಹಳ್ಳಿ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಬೇಕೆಂದು ತಾಲೂಕು ಪಂಚಾಯಿತಿ ಇಒ ವಸಂತ್ ಕುಮಾರ್ ಕರೆ ನೀಡಿದರು. ನಗರದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉಪಗ್ರಹ ಆಧಾರಿತ ತರಬೇತಿಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ವೈಯಕ್ತಿಕವಾಗಿ ದನಗಳ ಹಟ್ಟಿ, ಕುರಿಗಳ ಹಟ್ಟಿ, ಶೌಚಾಲಯ, ಕ್ರೀಡಾಂಗಣ, ಜಮೀನುಗಳಲ್ಲಿ ಬದು ನಿರ್ಮಾಣ, ಗಿಡಗಳು ಇತ್ಯಾದಿ ಸಾಲ ಸೌಲಭ್ಯ ಪಡೆದುಕೊಳ್ಳಬೇಕೆಂದು ತರಬೇತುದಾರರಿಗೆ ಅವರು ಅರಿವು ಮೂಡಿಸಿದರು. ಶೇಖರ್ ಬಾಬು, ಕೋಕಿಲಮ್ಮ, ಆಂಜನಪ್ಪ, ಕವಿತಾ ಸೇರಿದಂತೆ ಹಲವರು ಇದ್ದರು.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಟಿಇ ಹಣ ಬಿಡುಗಡೆಗೆ ಒತ್ತಾಯ
ಕೆಜಿಎಫ್: ಸರ್ಕಾರದ ನಿಯಮಾನುಸಾರ ಆರ್ಟಿಇ ಅಡಿಯಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಮಯಕ್ಕೆ ಸರಿಯಾಗಿ ಹಣ ನೀಡುವಂತೆ ಒತ್ತಾಯಿಸಿ ಕೆಜಿಎಫ್ನ ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಂಘದ ಗೌರವಾಧ್ಯಕ್ಷ ಅರ್ಜುನನ್ ಮಾತನಾಡಿ, ದಾಖಲಾತಿಗಳಿಗೆ ಸರ್ಕಾರದ ವತಿಯಿಂದ ಪ್ರತಿ ವಿದ್ಯಾರ್ಥಿಗಳಿಗೆ 11,848 ಗಳನ್ನು ಇಲಾಖೆ ಪೂರ್ಣ ಮೊತ್ತದಲ್ಲಿ ನೀಡದೆ ಬ್ಯಾಲೆನ್ಸ್ ಶೀಟ್ ಹಾಗೂ ಇತರೆ ಖರ್ಚುಗಳ ನ್ಯೂನತೆಗಳ ಹೆಸರಿನಲ್ಲಿ ಇಲಾಖಾ ಅಧಿಕಾರಿಗಳು ಪೂರ್ಣ ಮೊತ್ತವನ್ನು ನೀಡದೆ ಆರ್ಟಿಇ ಕಾಯ್ದೆ ಜಾರಿಯಾದಾಗನಿಂದಲೂ ವಂಚಿಸುತ್ತಿರುವುದು ಖಂಡನೀಯ ಎಂದರು.

ಅಂಗವಿಕಲ ವಿದ್ಯಾರ್ಥಿ ಯೋಗಕ್ಷೇವು ವಿಚಾರಿಸಿದ ಶಾಸಕ
ಚಿಂತಾಮಣಿ: ಅನಾರೋಗ್ಯದಿಂದ 2 ಕಾಲಿನ ಶಕ್ತಿ ಕಳೆದುಕೊಂಡಿರುವ ಬಾಲಕಿ ಶ್ರಾವಣಿಗೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಆತ್ಮಸ್ಥೈರ್ಯ ತುಂಬಿ, ಮುಖ್ಯಮಂತ್ರಿ ಪರಿಹಾರ ನಿಧಿ ಅಥವಾ ಅಂಗವಿಕಲ ಕಲ್ಯಾಣ ನಿಧಿಯಿಂದ ಆರ್ಥಿಕ ಸಹಾಯದ ಭರವಸೆ ನೀಡಿದ್ದಾರೆ. ನಗರದ ಚೌಡರೆಡ್ಡಿಪಾಳ್ಯ ಬಳಿ ಇರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡುವ ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರವು ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಇದನ್ನು ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕರೆ ನೀಡಿದರು.
ಈ ವೇಳೆ ನಗರಸಭಾ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ವೆಂಕಟರವಣಪ್ಪ, ಶ್ರೀರಾಮಪ್ಪ, ಕಿಟ್ಟಪ್ಪ, ಮುಖ್ಯ ಶಿಕ್ಷಕ ಶಕೀಲಾ ಮುನೋವರಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರಿಯಾಜ್, ಮುಖಂಡರಾದ ತೌಡ್ ಅಪ್ಪಲ್ಲ, ಸೀನ, ಕೃಷ್ಣಮೂರ್ತಿ, ರಘುನಾಥರೆಡ್ಡಿ, ರಮೇಶ್, ನಯಾಜ್, ಏಜಾಜ್ ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

23 ಸ್ಥಾನಗಳಲ್ಲಿ ಗೆಲ್ಲಲು ಬಿಜೆಪಿ ಪಣ: ಸಿ.ಟಿ. ರವಿ

ರಾಮನಗರ: ಮುಂಬರುವ ಚುನಾವಣೆಯಲ್ಲಿ ಕನಿಷ್ಠ 23 ಸ್ಥಾನಗಳಲ್ಲಿ ಗೆಲ್ಲಲು ಬಿಜೆಪಿ ಪಣ ತೊಟ್ಟಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ತಿಳಿಸಿದರು.  ರಾಜ್ಯದ 5 ಲೋಕಸಭೆ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 23 ಕಡೆ ಒಂದಿಲ್ಲೊಂದು ಬಾರಿ ಬಿಜೆಪಿ ಗೆಲವು ಸಾಧಿಸಿದೆ. ಕಳೆದ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೇ ಇರುವುದೂ ಒಂದು ರಾಜಕೀಯ ತಂತ್ರವಾಗಿತ್ತು. ಈ ಬಾರಿ  ಎಲ್ಲ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗುವುದು ಎಂದರು.  ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಕಾಂಗ್ರೆಸ್ ವಿರುದ್ಧ ಜನತೆ ತಿರುಗಿಬಿದ್ದಿದ್ದಾರೆ. ಪಕ್ಷ ತೊರೆದಿದ್ದವರನ್ನು ವಾಪಸ್ ಕರೆತಂದು, ನರೇಂದ್ರ ಮೋದಿ ಅಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಕಾಂಗ್ರೆಸ್, ಜೆಡಿಎಸ್ ಸೋಲಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಇದರಲ್ಲಿ ಖಂಡಿತ ಯಶಸ್ಸು ಸಾಧಿಸಲಾಗುವುದು ಎಂದು ಹೇಳಿದರು.

ರೈತಸಂಘದ ನಾಯಕರಿಗೆ ಬೆದರಿಕೆ: ಪ್ರತಿಭಟನೆ
ಕೆಜಿಎಫ್: ಬಂಗಾರಪೇಟೆಯ ಭಾರತ್ ಟ್ರೇಡಿಂಗ್ ಮಾಲೀಕ ಪದ್ಮನಾಭಶೆಟ್ಟಿ ಪಡಿತರಕ್ಕೆ ಹಂಚಬೇಕಾದ ಅಕ್ಕಿಯನ್ನು ಅಕ್ರಮವಾಗಿ ತಮ್ಮ ಖಾಸಗಿ ಗೋಡನ್ನಲ್ಲಿ ದಾಸ್ತಾನು ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಟಿ.ಎಸ್. ರಾಮೇಗೌಡ ನೇತೃತ್ವದಲ್ಲಿ ದಾಳಿ ನಡೆಸಿ ಲಕ್ಷಾಂತರ ಬೆಲೆ ಬಾಳುವ ಅಕ್ಕಿಯನ್ನು ಆಹಾರ ಸರಬರಾಜು ಇಲಾಖೆಗೆ ಒಪ್ಪಿಸಿದರು. ಈ ಹಿನ್ನೆಲೆಯಲ್ಲಿ ಚಂದ್ರಯ್ಯಶೆಟ್ಟಿ ರೈತ ಸಂಘದ ಅಧ್ಯಕ್ಷ ಟಿ.ಎನ್. ರಾಮೇಗೌಡರಿಗೆ ಬೆದರಿಕೆ ಹಾಕಿದ್ದಲ್ಲದೆ ರೈತ ಸಂಘ ವಿರುದ್ಧ ಬಂಗಾರಪೇಟೆ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ರಾಮೇಗೌಡ ಆರೋಪಿಸಿದ್ದಾರೆ. ಶ್ರೀನಿವಾಸ್, ಆಂಜೀ, ಮಂಜುನಾಥ್, ಮಂದ್ರಪ್ಪ, ಶ್ರೀನಿವಾಸಗೌಡ, ವೆಂಕಟಾಚಲಪತಿ, ವೆಂಕಟೇಶ್, ಕೃಷ್ಣಪ್ಪ, ಕುಮಾರ್, ರಮೇಶ್ ಇದ್ದರು.

ಅರ್ಹ ಫಲಾನುಭವಿಗಳಿಗೆ ಸವಲತ್ತು ಸಿಗಲಿ: ವೆಂಕಟೇಶ್
ಮಾಲೂರು: ಸಮುದಾಯದ ಮುಖಂಡರು ಪಕ್ಷಾತೀತರಾಗಿದ್ದಾಗ ಮಾತ್ರ ಸರ್ಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪಿ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಕರ್ನಾಟಕ ಮದಕರಿ ನಾಯಕ ಸೇನೆ ರಾಜ್ಯಾಧ್ಯಕ್ಷ ಸಿಂಗಾಪುರ ವೆಂಕಟೇಶ್ ಹೇಳಿದರು.
ಪಟ್ಟಣದ ಕೃಷಿಕ ಸಮಾಜದಲ್ಲಿ ಆಯೋಜಿಸಲಾಗಿದ್ದ ಮದಕರಿ ನಾಯಕ ಸೇನೆಯ ತಾಲೂಕು ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಬಹುತೇಕ ಸಮುದಾಯದ ಸಂಘಟನೆಗಳ ಮುಖ್ಯಸ್ಥರು ಒಂದಲ್ಲ ಒಂದು ರಾಜಕೀಯ ಪಕ್ಷದಲ್ಲಿರುವುದರಿಂದ ರಾಜ್ಯ ಸರ್ಕಾರವು ಅನುಷ್ಠಾನಗೊಳಿಸುವ ಬಹುತೇಕ ಯೋಜನೆಗಳ ಫಲಗಳು ಜನಪ್ರತಿನಿಧಿಗಳ ಹಿಂಬಾಲಕರ ಪಾಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಜ.12 ರಂದು ಬೆಂಗಳೂರಿನಲ್ಲಿ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಮೀಸಲಾತಿಯನ್ನು ಹೆಚ್ಚಿಸಬೇಕೆಂಬ ಮನವಿ ಪತ್ರ ಅರ್ಪಿಸಲಾಗುವುದು ಎಂದರು. ನಂತರ ಪದಾಧಿಕಾರಿಗಳನ್ನು ಆರಿಸಲಾಯಿತು. ತಾಲೂಕು ಅಧ್ಯಕ್ಷ ವಾಟರ್ ನಾರಾಯಣಸ್ವಾಮಿ, ರಾಮಪ್ಪ, ಲಘು ಮನಾಯಕ, ಉಮಾಪತಿ ಇದ್ದರು.

ಆಟೋ ಗ್ಯಾಸ್ ದಲೆ ಏರಿಕೆ ಖಂಡಿಸಿ ಪ್ರತಿಭಟನೆ
ಕೋಲಾರ: ಕೇಂದ್ರ ಸರ್ಕಾರ ಗ್ಯಾಸ್ ದರ ಏರಿಕೆ ಮಾಡಿರುವುದರಿಂದ ಆಟೋ ರಿಕ್ಷಾಗಳ ಮಾಲೀಕರಿಗೆ ಹೆಚ್ಚಿನ ಹೊರೆ ಆಗಲಿದ್ದು ಕೂಡಲೇ ಗ್ಯಾಸ್ ದರ ಇಳಿಕೆ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ನಡೆಯಿತು. ತ್ರಿಚಕ್ರ ವಾಹನ ಚಾಲಕರ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆಟೋ ಚಾಲಕರು ಕೇಂದ್ರ ಸರ್ಕಾರ ಗ್ಯಾಸ್ ದರ ಏರಿಕೆ ಮಾಡಿರುವುದರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಆಟೋ ಗ್ಯಾಸ್ ದರವನ್ನು ಒಮ್ಮೆಲೆ 11.50 ರು. ಏರಿಸಲಾಗಿರುವುದರಿಂದ ಬಡ ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ ತೊಂದರೆ ಆಗುತ್ತದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ತ್ರಿಚಕ್ರ ವಾಹನ ಚಾಲಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಚೋಟಾ ಸಾಬ್, ಪ್ರಧಾನ ಕಾರ್ಯದರ್ಶಿ ಸೈಯದ್ ಜಬೀವುಲ್ಲಾ ಮತ್ತಿತರರು ಇದ್ದರು.

ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ: ನಾರಾಯಣಸ್ವಾಮಿ
ಬಂಗಾರಪೇಟೆ: ಪ್ರತಿಯೊಬ್ಬರಿಗೂ ಆರೋಗ್ಯ ಅತಿ ಮುಖ್ಯವಾಗಿದೆ. ಆದರೆ ಕೆಲವರು ಹಣಕ್ಕೆ ನೀಡುವ ಪ್ರಾಮುಖ್ಯತೆ ಆರೋಗ್ಯಕ್ಕೆ ಕೊಡದೆ ನಿರ್ಲಕ್ಷ್ಯ ವಹಿಸುತ್ತಾರೆ. ಪ್ರತಿಯೊಬ್ಬರು ಆರೋಗ್ಯ ರಕ್ಷಣೆ ಕಡೆ ಹೆಚ್ಚಿನ ಒಲವು ಕೊಡಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಬಾಲಕರ ಜೂನಿಯರ್ ಕಾಲೇಜು ಆವರಣದಲ್ಲಿ ಕೋಲಾರದ ಜಾಲಪ್ಪ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜನರು ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡುವುದಿಲ್ಲ. ಅವರಲ್ಲೇ ಹೆಚ್ಚಿನ ಮಂದಿ ಅನಾರೋಗ್ಯಕ್ಕೆ ಒಳಗಾಗುವರು ಇಂತಹ ಶಿಬಿರಗಳನ್ನು ಭಾಗವಹಿಸಿ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರೆ ಮುಂದಿನ ಜೀವನ ಸುಗಮವಾಗುತ್ತದೆ ಎಂದು ಸಲಹೆ ನೀಡಿದರು.

ಇಂದು ಮಡಿವಾಳರ ಜಾಗೃತಿ ಸಮಾವೇಶ
ಕೋಲಾರ: ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಜ.5 ರಂದು ಬೆಂಗಳೂರಿನ ನ್ಯಾಷನಲಲ್ಕಾಲೇಜು ಮೈದಾನದಲ್ಲಿ ರಾಜ್ಯ ಮಡಿವಾಳ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮಡಿವಾಳ ಸಮಾಜ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿಯೂ ಅತ್ಯಂತ ಹಿಂದುಳಿದಿದ್ದು, ಸಂಘಟನೆ ಇಲ್ಲದೆ ಮೂಲೆ ಗುಂಪಾಗಿದೆ ಎಂದರು. ದೇಶದ 17 ರಾಜ್ಯಗಳಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಈ ಅವಕಾಶ ಕಲ್ಪಿಸಲಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾನುವಾರ ನಡೆಯುವ ಸಮಾವೇಶಕ್ಕೆ  ಜಿಲ್ಲೆಯಿಂದ ಸುಮಾರು 15 ಸಾವಿರ ಮಂದಿ ಭಾಗವಹಿಸಲಿದ್ದು, ಶಾಸಕ ವರ್ತೂರು ಪ್ರಕಾಶ್ ಜಿಲ್ಲೆಯಿಂದ ಹೋಗುವಂತಹ ಜನರಿಗೆ ಸುಮಾರು 10 ಬಸ್ಗಳನ್ನು ವ್ಯವಸ್ಥೆ ಮಾಡಿಕೊಟ್ಟಿದ್ದಾರೆಂದು ಹೇಳಿದರು.

ಬಾಗಲೂರು ಬಳಿ ಮಹಿಳೆ ಶವಪತ್ತೆ
ಬೆಂಗಳೂರು: ತುಮಕೂರು ಮೂಲದ ಮಹಿಳೆಯನ್ನು ಕೊಲೆಗೈದು ಶವವನ್ನು ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೂವಿನಾಯಕನಹಳ್ಳಿಯ ನೀಲಗಿರಿ ತೋಪಿನಲ್ಲಿ ಬಿಸಾಡಲಾಗಿದೆ.  ತುಮಕೂರಿನಲ್ಲಿ ಸ್ಪಂದನ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆ ನಡೆಸುತ್ತಿದ್ದ ಗಂಗಾ ಚಂದ್ರಶೇಖರ್ (35) ಎಂಬುವರೇ ಕೊಲೆಯಾದವರು. ಶನಿವಾರ ಬೆಳಗ್ಗೆ ತೋಪಿನಲ್ಲಿ ಶವ ಬಿದ್ದಿರುವುದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದುಷ್ಕರ್ಮಿಗಳು ಗಂಗಾ ಅವರನ್ನು ಬೇರೆಡೆ ಕೊಲೆಗೈದು ಶವವನ್ನು ತಂದು ಬಾಗಲೂರಿನಲ್ಲಿ ಬಿಸಾಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಗಂಗಾ ಪತಿ ಚಂದ್ರಶೇಖರ್ 7 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇವರ ಮಗಳು ದಿವ್ಯಾ ಎಂಬಾಕೆ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು ಒಬ್ಬ ಮಗ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾನೆ.  ಕೆಲ ವರ್ಷಗಳಿಂದ ಗಂಗಾ ಹರೀಶ್ ಎಂಬುವರೊಂದಿಗೆ ಸಂಪರ್ಕದಲ್ಲಿದ್ದರು. ಶುಕ್ರವಾರ ರಾತ್ರಿ 11.30ರ ಸುಮಾರಿಗೆ ತುಮಕೂರಿನಿಂದ ಪರಿಚಿತ ಹರೀಶ್ನೊಂದಿಗೆ ಗಂಗಾ ಹೊರಗೆ ಹೋಗುವುದನ್ನು ಗಮನಿಸಿರುವುದಾಗಿ ಮಕ್ಕಳು ಪೊಲೀಸರಿಗೆ ತಿಳಿಸಿದ್ದಾರೆ.

'ವಿದ್ಯಾರ್ಥಿಗಳಲ್ಲಿ ವ್ಯಾಪಾರ  ಜ್ಞಾನ ಬೆಳೆಸುವುದು ಮುಖ್ಯ'
ಮಾಲೂರು: ವಿದ್ಯಾರ್ಥಿ ದೆಸೆಯಲ್ಲೇ ಮಕ್ಕಳಲ್ಲಿ ವ್ಯಾಪಾರ ವಹಿವಾಟು ಜ್ಞಾನ ಬೆಳೆಸುವುದು ಅತಿ ಮುಖ್ಯವಾಗಿದೆ ಎಂದು ಜಿಲ್ಲಾ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಎಚ್. ಮುನಿವೆಂಕಟಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜುನಲ್ಲಿ ಶನಿವಾರ ಆಯೋಜಿಸಲಾಗಿದ್ದ ವಾಣಿಜ್ಯ ಕೌಶಲ್ಯ ಪ್ರದರ್ಶನದಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನ ಬೆಳದಷ್ಟು ಭವಿಷ್ಯದಲ್ಲಿ ಉತ್ತಮವಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಶಾಲಾ- ಕಾಲೇಜುಗಳಲ್ಲಿ ಆಯೋಜಿಸುತ್ತಿರುವ ವಾಣಿಜ್ಯ ಕೌಶಲ್ಯ ಪ್ರದರ್ಶನವು ಉತ್ತಮ ವೇದಿಕೆಯಾಗಿದ್ದು, ಪ್ರತಿ ವಿದ್ಯಾರ್ಥಿನಿಯರು ಸದುಪಯೋಗಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಂಶುಪಾಲ ವೆಂಕಟೇಶಪ್ಪ, ಎಂ. ರಾಜಶೇಖರ್, ಬಾಲಕೃಷ್ಣ, ಎ.ಜಿ. ಕೃಷ್ಣಯ್ಯ ಇದ್ದರು.

ಕೆ.ಜಿ. ಹಳ್ಳಿ ವ್ಯಾಪ್ತಿಯ ನರೇಗಾ ಕಾಮಗಾರಿ ಪರಿಶೀಲನೆ
ಟೇಕಲ್: ಶಾಸಕ ಮಂಜುನಾಥಗೌಡರು ಕೆ.ಜಿ. ಹಳ್ಳಿ ಗ್ರಾಪಂ ವ್ಯಾಪ್ತಿಯ ಹಲವಾರು ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಪಂ ವತಿಯಿಂದ ನಡೆಯುತ್ತಿರುವ ನರೇಗಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಗ್ರಾಮಗಳಲ್ಲಿ ಮೊದಲಿಗೆ ಮೂಲ ಸೌಕರ್ಯಗಳ ಬಗ್ಗೆ ಹೆಚ್ಚು ಒತ್ತನ್ನು ನೀಡಬೇಕೆಂದು ಹಾಗೂ ಕುಡಿಯುವ ನೀರಿಗೆ ತಾಲೂಕಿನಲ್ಲಿ ಶೇ.70ಕ್ಕೂ ಹೆಚ್ಚು ಅದರ ಭವಣೆ ಕಡಿಮೆಯಾಗಿದ್ದು, ಇನ್ನೂ ಕೆಲವು ಕಡೆ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ ಎಂದರು.
ಮಾಲೂರು ತಾಲೂಕಿನ ಬಹುತೇಕ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ನಡೆಸಲಾಗುವುದು ಎಂದು ತಿಳಿಸಿದರು. ಕೆ.ವೈ. ನಂಜೇಗೌಡ, ಲಕ್ಷ್ಮಮ್ಮ ರಮೇಶ್, ಪಿಡಿಒ ಗೋವಿಂದೆಗೌಡ, ಗ್ರಾಪಂ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.