ಕೈವಾರ ತಾತಯ್ಯರ ತತ್ವಪದಗಳಲ್ಲಿ ಸಮಾಜಮುಖಿ ಚಿಂತನೆ
ಚಿಂತಾಮಣಿ: ಜಾತಿಮತಗಳ ಎಲ್ಲೆ ದಾಟಿ ಮಾನವಕುಲ ಒಂದೇ ಎಂದು ಹಾಡಿದ ಸಂತ ಕೈವಾರ ತಾತಯ್ಯ ಅವರ ತತ್ವಪದಗಳಲ್ಲಿ ಸಮಾಜಮುಖಿ ಚಿಂತನೆಗಳನ್ನು ಕಾಣಬಹುದಾಗಿದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟರು.
ಕೈವಾರ ಯೋಗಿ ನಾರೇಯಣ ಸಭಾಂಗಣದಲ್ಲಿ ಆಯೋಜಿಸಿದ್ದ ಧಾರ್ಮಿಕ ಕ್ಷೇತ್ರ ಪ್ರವಾಸದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಭಕ್ತಕೋಟಿಗೆ ದಾರಿ ಹೇಳಿಕೊಟ್ಟ ತಾತಯ್ಯ ದೇವವಾಣಿಯನ್ನು ಜನಮನಕ್ಕೆ ಬೋಧಿಸಿದವರು. ಇವರು ತಮ್ಮ ತಪಸ್ಸಿನ ಸಿದ್ಧಿಯಿಂದ ಅಲೌಕಿಕ ಪವಾಡ ಮೆರೆದು ಅವಧೂತರಂತೆ ಬದುಕಿದವರು. ತಾವು ಕಂಡಿರುವ ತತ್ವಜ್ಞಾನವನ್ನು ಕೀರ್ತನೆ, ಶತಕಗಳ ರೂಪದಲ್ಲಿ ಜನರಿಗೆ ಹಂಚಿದ ತತ್ವಪದಕಾರ ತಾತಯ್ಯ ಎಂದರು.
ತಾತಯ್ಯನವರು ತಮ್ಮ ಕೀರ್ತನೆಗಳಲ್ಲಿ ಜೀವನದ ಅನುಭವ ಸಾರ ಬಿಚ್ಚಿಟ್ಟಿದ್ದಾರೆ. ಸಂಸಾರವೆನ್ನುವುದು ಸಂತೆಕೂಟವಿದ್ದಂತೆ ಜಗಳವಿಲ್ಲದ ಸಂಸಾರವೇ ವೈಕುಂಠಪುರ ತನ್ನನ್ನು ತಾನು ತಿಳಿದವನೇ ಯೋಗಿ ಪರರ ವಸ್ತು ಪಾಷಾಣ ಸಮಾನ ಮುಂತಾದ ತಾತ್ವಿಕ ಚಿಂತನೆಗಳು ತಾತಯ್ಯನವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ ಎಂದರು.
ಸಾಂಪ್ರದಾಯಿಕ ಮೌಢ್ಯಗಳಲ್ಲಿ ನಲುಗಿಹೋಗಿದ್ದ ಸಮಾಜಕ್ಕೆ ಜೀವನ ವಿಧಾನ ಕಲಿಸಿದ ಮಹಾನ್ ವ್ಯಕ್ತಿ. ಅವರ ತತ್ವ ಬೋಧನೆ ಅನುಕರಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸಲಿದೆ ಎಂದರು. ತಾತಯ್ಯನವರು ರಚಿಸಿರುವ ಕಾಲಜ್ಞಾನ ಲೋಕವಿಖ್ಯಾವಾಗಿದ್ದು ಎಲ್ಲರಿಗೂ ಸಂಗ್ರಹಯೋಗ್ಯ ಎಂದರು.
ಸಮಾರೋಪ ಸಮಾರಂಭದಲ್ಲಿ ಕೈವಾರ ಯೋಗಿನಾರೇಯಣ ಮಠದ ಆಡಳಿತಾಧಿಕಾರಿ ಕೆ. ಲಕ್ಷ್ಮಿನಾರಾಯಣ್, ಆಶ್ರಮದ ಸದಸ್ಯರಾದ ಟಿ.ಕೆ.ಎನ್. ಕೃಷ್ಣಯ್ಯಶೆಟ್ಟಿ, ಕೆ. ರಾಜಗೋಪಾಲ್, ರವಿಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

