ಕೋಲಾರ

ಸುದ್ದಿ ಸಂಕ್ಷೇಪ

Published On :

7 ರಿಂದ ಆರ್‌ಟಿಇ ಅರ್ಜಿಗಳ ವಿತರಣೆ
ಮಾಲೂರು: ಶಿಕ್ಷಣ ಹಕ್ಕು ಕಾಯಿದೆಯಡಿ ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸಲು ಬಯಸುವ ಪೋಷಕರು ಈ ತಿಂಗಳ 7 ರಿಂದ ಒಂದು ತಿಂಗಳ ಕಾಲ ಅರ್ಜಿ ವಿತರಣೆ ಹಾಗೂ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದ್ದು, ತಾಲೂಕಿನ ಜನತೆ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಕ್ಷೇತ್ರಾಶಿಕ್ಷಣಾಧಿಕಾರಿ ಸುಬ್ರಮಣ್ಯ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ತಾಲೂಕಿನ ಖಾಸಗಿ ಶಾಲೆಗಳಲ್ಲಿ ಯೋಜನೆಯ ಮಾನದಂಡದಂತೆ ಶೇ.25 ಅಂದರೆ 411 ಸೀಟುಗಳು ಆರ್‌ಟಿಇ ಕಾಯ್ದೆಯಡಿ ಅವಕಾಶವಿದ್ದು, ಉಳಿದ ಶಾಲೆಗಳಲ್ಲಿ ಒಂದನೇ ತರಗತಿಗೆ ಸೇರಿಸಲು 365 ಸೀಟುಗಳನ್ನು ಮೀಸಲಿಡಲಾಗಿದೆ ಎಂದರು. ಶಾಲೆಯಿಂದ ಒಂದು ಕಿ.ಮೀ.ವ್ಯಾಪ್ತಿಯೊಳಗೆ ಬರುವ ವಿದ್ಯಾರ್ಥಿಗಳಿಗೆ ಪ್ರಥಮ ಅದ್ಯತೆ ನೀಡಲಾಗುತ್ತದೆ ಎಂದ ಬಿಇಒ ಅವರು, ವಾರ್ಷಿಕ ವರಮಾನ ಒಂದು ಲಕ್ಷ ರು.ಒಳಗೆ ಇರುವವರಿಗೆ ಮೊದಲ ಅದ್ಯತೆ ನೀಡಿ ನಂತರ 3.5 ಲಕ್ಷ ರು.ಗ ವರಮಾನ ವ್ಯಾಪ್ತಿಯವರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು. ಅರ್ಜಿಗಳು ತಾಲೂಕಿನ ಎಲ್ಲ ಖಾಸಗಿ ಶಾಲೆಗಳು ಸೇರಿದಂತೆ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಿಗಲಿದ್ದು, ಖಾಸಗಿ ಶಾಲೆಗಳಲ್ಲಿ ಅರ್ಜಿ ಪಡೆಯಲು ನಿರಾಕರಿಸಿದರೆ ಬಿಇಒ ಕಚೇರಿ-08151-232242 ಮೊ-9480695269 ಹಾಗೂ ನೋಡಲ್ ಅಧಿಕಾರಿ-9449349652ರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಖಾಸಗಿ ಶಾಲೆಗಳಿಂದ ಬರುವ ಅರ್ಜಿಗಳನ್ನು ಮಾನದಂಡದ ಅನ್ವಯ ಆಯ್ಕೆ ಮಾಡಿ ಮಾರ್ಚ್ 3 ರಂದು ಪ್ರಕಟಿಸಲಾಗುವುದು. ಒಂದು ವೇಳೆ ಅಯ್ಕೆಯಾದ ವಿದ್ಯಾರ್ಥಿಗಳು ಶಾಲೆಗಳಲ್ಲಿ ದಾಖಲಾಗುವುದರಲ್ಲಿ ವಿಫಲರಾದರೆ ಜೂನ್‌ನಲ್ಲಿ 2 ನೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.  ದೇವದತ್ತ ನಾಯಕ್, ವಿಜಯಕುಮಾರ್ ಇದ್ದರು.
ಕಲೆ ಮೂಲಕ ಸಮಾಜದ ಅಂಕು ಡೊಂಕು ತಿದ್ದಿ
ಕೋಲಾರ: ಸಮಾಜದ ಅಂಕು ಡೊಂಕು ತಿದ್ದಲು ಕಲೆಗಳು ಸಹಕಾರಿಯಾಗಿವೆ, ಸಮಾಜವನ್ನು ಅರ್ಥೈಸಿಕೊಂಡಿರುವ ಕಲಾವಿದರು ಜನರ ಧ್ವನಿಯಾಗಬಲ್ಲರು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ. ಬಿ.ಸಿ. ಮೈಲಾರಪ್ಪ ಅಭಿಪ್ರಾಯಪಟ್ಟರು. ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನೆಹರು ಯುವ ಕೇಂದ್ರ, ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಲಾ ಮೇಳ ಉದ್ಘಾಟಿಸಿ ಮಾತನಾಡಿ, ದೇಶದ 120 ಕೋಟಿ ಜನಸಂಖ್ಯೆಯಲ್ಲಿ ಶೇ.98 ಮಂದಿ ಬಡವರಿದ್ದಾರೆ. ಇಂತಹವರ ಮಾನಸಿಕ ನೆಮ್ಮದಿಗೆ ಸಾಂಸ್ಕೃತಿಕ ಕಲೆಗಳು ಪೂರಕವಾಗಲಿದೆ ಎಂದು ತಿಳಿಸಿದರು. ಟಿ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎನ್. ಕೃಷ್ಣಮೂರ್ತಿ, ಪಾಲ್ಗುಣ, ಹೂಹಳ್ಳಿ ನಾಗರಾಜ್, ಈ ನೆಲ ಈ ಜಲದ ವೆಂಕಟಾಚಲಪತಿ, ರಾಮಚಂದ್ರ, ವೆಂಕಟೇಶಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.