ಕೋಲಾರ

ಒಕ್ಕಲಿಗರ ಸಂಘದ ಚುನಾವಣೆ: ಶೇ.92ರಷ್ಟು ಮತದಾನ

Published On :

ಚಿಕ್ಕಬಳ್ಳಾಪುರ: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಮಾದರಿಯಲ್ಲಿ ಅದ್ಧೂರಿ ಪ್ರಚಾರ ಕೈಕೊಂಡಿದ್ದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಚುನಾವಣೆಯು ಜಿಲ್ಲೆಯಲ್ಲಿ ಭಾನುವಾರ ಶಾಂತಿಯುತವಾಗಿ ನಡೆದಿದ್ದು, ಜಿಲ್ಲಾದ್ಯಂತ ಶೇ.92 ರಷ್ಟು ಮತದಾನವಾಗಿದೆ. ಭಾನುವಾರ ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭವಾಯಿತು. ವಿವಿಧೆಡೆ ಸ್ಥಾಪಿಸಲಾಗಿದ್ದ ಮತಗಟ್ಟೆ ಕೇಂದ್ರಗಳಿಗೆ ಒಕ್ಕಲಿಗ ಸಂಘದಲ್ಲಿ ಸದಸ್ಯತ್ವವನ್ನು ಪಡೆದುಕೊಂಡಿರುವ ಮತದಾರರು ಬೆಳಗ್ಗೆಯೇ ಆಗಮಿಸಿದ್ದರು. ಕೆಲ ದಿನಗಳಿಂದ ನಾನಾ ರೀತಿಯಲ್ಲಿ ಪ್ರಚಾರವನ್ನು ಕೈಗೊಂಡಿದ್ದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮತಗಟ್ಟೆ ಕೇಂದ್ರಗಳಿಗೆ ಆಗಮಿಸುವ ಮತದಾರರನ್ನು ಮನವೊಲಿಸಿ ತಮ್ಮ ಪರವಾಗಿ ಮತ ಚಲಾಯಿಸುವಂತೆ ಕೋರುವಲ್ಲಿ ತೊಡಗಿದ್ದರು.
ಮತಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಕೆಲವರು ವಾಪಸ್ಸಾದರು. ರಾಜ್ಯ ಒಕ್ಕಲಿಗರ ಸಂಘದ ಹಾಲಿ ಖಜಾಂಚಿ ಯಲುವಹಳ್ಳಿ ಎನ್. ರಮೇಶ್, ಚಿಂತಾಮಣಿ ಎಂ.ಎನ್. ಸದಾಶಿವರೆಡ್ಡಿ, ಚಿಕ್ಕಬಳ್ಳಾಪುರ ಪಿ.ನಾಗರಾಜ್, ಶಿಡ್ಲಘಟ್ಟ ಬಳುವನಹಳ್ಳಿ ಎಸ್.ವಿ. ಲೋಕೇಶ್ ಗೌಡ, ಮೇಲೂರಿನ ಡಾ. ಎಂ.ಸಿ. ನವೀನ್ ಕುಮಾರ್, ಕೋಲಾರ ತಾಲೂಕಿನ ವಕ್ಕಲೇರಿ ರಾಮು, ಕಲ್ಲಂಡೂರಿನ ಆರ್. ಮಂಜುಂಡೇಗೌಡ, ಶ್ರೀನಿವಾಸಪುರ ಎಂ.ಎಲ್. ಸತೀಶ್, ಕೆ.ಬಿ. ಗೋಪಾಲಕೃಷ್ಣ, ಡಿ. ರಾಮಚಂದ್ರ, ಡಾ. ರಮೇಶ್, ಎಂ. ರಘುನಾಥ್, ಎನ್.ಶ್ರೀರಾಮ್ ಚುನಾವಣಾ ಕಣದಲ್ಲಿದ್ದಾರೆ. ಜ.6 ರಂದು ಕೋಲಾರದ ಗೋಕುಲ್ ವಿದ್ಯಾಸಂಸ್ಥೆಯಲ್ಲಿ ಎಣಿಕೆ ಕಾರ್ಯ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.