ಕೋಲಾರ

ನನ್ನ ವೈಯಕ್ತಿಕ ಹಿತಾಸಕ್ತಿಯೇನೂ ಇಲ್ಲ: ಶಿವಶಂಕರರೆಡ್ಡಿ

Published On :

ಗೌರಿಬಿದನೂರು: ದಂಡಿಗಾನಹಳ್ಳಿ ಹೊಸಕೆರೆಯ ಕುಡಿಯುವ ನೀರಿನ ಯೋಜನೆಗೆ ವೈಯಕ್ತಿಕ ಹಿತಾಸಕ್ತಿಯೇನೂ ಇಲ್ಲ. ತಜ್ಞ ಅಧಿಕಾರಿಗಳ ವರದಿಯನ್ನು ಆಧರಿಸಿ ಗೌರಿಬಿದನೂರು ಪಟ್ಟಣ ಮತ್ತು 11 ಹಳ್ಳಿಗಳಿಗೆ ಉಪಯೋಗವಾಗುವಂತೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು. ಈ ವಿಷಯದಲ್ಲಿ ಉದಾರತೆ ಹಾಗೂ ದೂರದೃಷ್ಟಿತ್ವ ಮುಖ್ಯ ಎಂದು ವಿಧಾಸಭಾ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ  ತಿಳಿಸಿದರು.
ಈ ಕುರಿತು ಇನ್ನೆರಡು ದಿನಗಳಲ್ಲಿ ಚರ್ಚಿಸುತ್ತೇನೆ ಎಂದರು. ತಿಪ್ಪಗಾನಹಳ್ಳಿ ಕೆರೆ ಜಲಾವೃತ ಪ್ರದೇಶ 297.63, ವಾಟದಹೊಸಹಳ್ಳಿ ಕೆರೆ ಜಲಾವೃತ ಪ್ರದೇಶ 288.99 ಇದ್ದು, ಈ ಎರಡನ್ನೂ ಏಕೆ ಆಯ್ಕೆ ಮಾಡಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಿಪ್ಪಗಾನಹಳ್ಳಿ ಕೆರೆಯಲ್ಲಿ ಡೆಡ್ ಸ್ಟೋರೇಜ್ ಇಲ್ಲ ಬೇಗ ನೀರು ಖಾಲಿಯಾಗುತ್ತದೆ. ನೀರನ್ನು ಹಿಡಿದಿಡುವ ಶಕ್ತಿ ಅದಕ್ಕೆ ಇಲ್ಲ, ಅದೇ ರೀತಿ ವಾಟದಹೊಸಹಳ್ಳಿ ಕೆರೆಯ ಜಲಾವೃತ ಪ್ರದೇಶ 288.99 ಇದ್ದರೂ ಇಲ್ಲೂ ಅದೇ ಪರಿಸ್ಥಿತಿ ಇರುವುದರಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದರು.
ಯೋಜನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾವುದೇ ಕಾರಣಕ್ಕೂ ಕೆರೆಯಿಂದ ನೇರವಾಗಿ ನೀರನ್ನು ಬಳಸಿಕೊಳ್ಳುವುದಿಲ್ಲ. ಬದಲಿಗೆ ಕೆರೆ ಕಟ್ಟೆಯ ಪಕ್ಕದಲ್ಲಿ  ಜಾಕ್‌ವೆಲ್ ನಿರ್ಮಿಸಿ ಶೇಖರಣಾ ಟ್ಯಾಂಕ್‌ಮೂಲಕ ಸರಬರಾಜು ಮಾಡಲಾಗುವುದು ಎಂದರು. ಈ ಬಗ್ಗೆ ಹೋಬಳಿಯ ಮುಖಂಡರ ಸಭೆ ಕರೆದು ಚರ್ಚಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.