ಕೋಲಾರ

'ರಾಜಕೀಯ ಬೆಳವಣಿಗೆ ಸಹಿಸದೆ ತೇಜೋವಧೆ'

Published On :

ಬಂಗಾರಪೇಟೆ: ಪಡಿತರ ಅಕ್ಕಿ ಕಳ್ಳತನದಿಂದ ಮಾರುವವರಿಗೆ ಅಥವಾ ಮಾರಾಟ ಮಾಡುವವರಿಗೆ ನಾನು ಎಂದಿಗೂ ಬೆಂಬಲ ನೀಡುವುದಿಲ್ಲ. ತಮ್ಮ ಬೆಂಬಲಿಗರು ಯಾರು ಅಂತಹ ದಂಧೆಯಲ್ಲಿ ತೊಡಗಿಲ್ಲ. ಕೆಲವರು ನಾನು ಕ್ಷೇತ್ರದಲ್ಲಿ ರಾಜಕೀಯವಾಗಿ ಬೆಳೆಯುತ್ತಿರುವುದನ್ನು ಸಹಿಸಲಾಗದೆ ನನ್ನನ್ನು ತೇಜೋವಧೆ ಮಾಡಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಖಂಡನೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಜ್ಯೋತಿ ಪಬ್ಲಿಕ್ ಶಾಲೆಯಲ್ಲಿ ಜೈ ಕರ್ನಾಟಕ ಕವಿ ಕಾವ್ಯ ಸಾಂಸ್ಕೃತಿಕ ಕಲಾ ಸಂಘದ ಮೂರನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ಕವಿಗೋಷ್ಠಿ ಹಾಗೂ ಭಾವನೆಗಳಲ್ಲರಳಿದ ಬಂಗಾರದಕ್ಷರಗಳು ಎಂಬ ಕವನ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಧ್ಯಾಪಕರು ಹಾಗೂ ಕವಿಗಳಾದ ಡಾ. ಶಿವಪ್ಪ, ಕಸಾಪ ಜಿಲ್ಲಾ ಸಂಚಾಲಕ ಟಿ.ಎಸ್. ಬದರೀನಾಥ್ ಮಾತನಾಡಿದರು. ಇದೇ ವೇಳೆ ವಿ. ಲಕ್ಷ್ಮಯ್ಯ ಅವರ ಕೃತಿ ಭಾವನೆಗಳಲ್ಲರಳಿದ ಬಂಗಾರದಕ್ಷರ ಹಾಗೂ ಟಿ. ರಾಮಚಂದ್ರರವರ ಕಗ್ಗಲ್ಲ ಕಣಿವೆಗೆ ಎಂಬ ಕಥ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು. ಕೋಗಿಲಹಳ್ಳಿ ಕೃಷ್ಣಪ್ಪ, ಕಸಾಪ ಅಧ್ಯಕ್ಷ ಅಶ್ವತ್ಥ್, ನೌಕರ ಸಂಘದ ಅಧ್ಯಕ್ಷ ಚಂದ್ರಶೇಖಗೌಡ, ಆರ್. ಜಗದೀಶ್, ಎಸ್.ಕೆ. ವೆಂಕಟರಾಮಯ್ಯ, ಎ.ಕೆ. ವೆಂಕಟೇಶ್, ಕವಿ ಕಾವ್ಯ ವೇದಿಕೆ ಅಧ್ಯಕ್ಷ ರಾಮಚಂದ್ರ, ಕವಿವಿ ಲಕ್ಷ್ಮಯ್ಯ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.