ಕೋಲಾರ

ಸುದ್ದಿ ಸಂಕ್ಷೇಪ

Published On :

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ
ಮುಳಬಾಗಲು: ತಾಲೂಕಿನ ಮಂಡಿಕಲ್ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಕ್ತಿಗೀತೆ ಸ್ಪರ್ಧೆಯಲ್ಲಿ ಗೆಲವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಂ.ಸಿ. ಪ್ರಶಾಂತಿ, ಎಂ.ಸಿ. ಸಹನಾ, ಎಂ.ಆರ್. ಲೇಖಶ್ವಿನಿ, ಎಂ.ಎಸ್. ಸಹನಾ, ಎಂ.ಎಸ್. ರುಚಿತಾ, ಎಂ.ಎಸ್. ಚಂದನ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಲಕ್ಷ್ಮಣಸಿಂಗ್, ಮುಖ್ಯ ಶಿಕ್ಷಕ ಎ. ನಾಗರಾಜ್, ಸಹಶಿಕ್ಷಕ ಸೋಮಶೇಖರ್, ಶಾಲಾವೃದ್ಧಿ ಸಮಿತಿ ಅಧ್ಯಕ್ಷ ಎನ್. ಶ್ರೀನಿವಾಸಗೌಡ, ಉಪಾಧ್ಯಕ್ಷೆ ಉಷಾ ಸುದೇಂದ್ರರಾವ್, ಎಂ.ವಿ. ಚಂದ್ರಶೇಖರ್ ಮುಂತಾದವರು ಭಾಗವಹಿಸಿದ್ದರು.
ಆರ್‌ಟಿಇ ಅರ್ಜಿ ಆಹ್ವಾನ
ಕೋಲಾರ: ಶಿಕ್ಷಣ ಹಕ್ಕು ಅಧಿನಿಯಮದ ಪ್ರಕಾರ 2014-15 ನೇ ಸಾಲಿಗೆ 1ನೇ ತರಗತಿ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಸರ್ಕಾರ ಆಹ್ವಾನ ನೀಡಿದೆ. ಶ್ರೀನಿವಾಸಪುರ ತಾಲೂಕಿನ 40 ಖಾಸಗಿ ಪ್ರಾಥಮಿಕ ಶಾಲೆಗಳಿಂದ ಶೇ.25ರ ಅಡಿಯಲ್ಲಿ ಒಟ್ಟು 456 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಮೀಸಲಿರಿಸಿರುವ 456 ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ 141 ಸ್ಥಾನಗಳನ್ನು, ಪರಿಶಿಷ್ಟ ಪಂಗಡಕ್ಕೆ 30 ಸ್ಥಾನಗಳು ಹಾಗೂ 285 ಸ್ಥಾನಗಳನ್ನು ಅವಕಾಶ ವಂಚಿತ ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಕಾದಿರಿಸಲಾಗಿದೆ.ಜ.7ರಿಂದ ಅರ್ಜಿಗಳನ್ನು ಸಂಬಂಧಿಸಿದ ಶಾಲೆಗಳಿಂದ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆದು ಸಲ್ಲಿಸಬಹುದಾಗಿದೆ. ವಿವರಗಳಿಗಾಗಿ ಕಚೇರಿ ದೂ- 08157-246305ಕ್ಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾಸ್ಪತ್ರೆ ನೌಕರ ಕೃಷ್ಣಪ್ಪ ನಿಧನ
ಕೋಲಾರ: ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಡಿ. ಗ್ರೂಪ್ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣಪ್ಪ (58) ಭಾನುವಾರ ನಿಧನರಾಗಿದ್ದಾರೆ. ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮುನಿರಾಜು, ಆರೋಗ್ಯ ಸಂಘದ ಅಧ್ಯಕ್ಷೆ ವಿಜಯಮ್ಮ ಮತ್ತಿತರರು ಕಠಾರಿಪಾಳ್ಯದ ಮೃತರ ನಿವಾಸಕ್ಕೆ ತೆರಳಿ ಸಂತಾಪ ಸೂಚಿಸಿದರಲ್ಲದೆ ಅಂತ್ಯ ಸಂಸ್ಕಾರಕ್ಕಾಗಿ 5 ಸಾವಿರ ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ, ಮುನಿರಾಜು, ಕಮಲಾಕರ್, ರವಣಪ್ಪ, ಮಹೇಶ್, ವೆಂಕಟೇಶ್ ಬಾಬು, ಸರಸ್ವತಿ, ನೌಕರರ ಸಂಘದ ನಾರಾಯಣಪ್ಪ, ರಘುನಾಥ್, ಲಕ್ಷ್ಮೀನಾರಾಯಣ, ಹನುಮಪ್ಪ, ಸ್ಯಾಮಸನ್ ಬಾಬು, ಗುರುಪ್ರಕಾಶ್, ವೇಣುಗೋಪಾಲ್ ಸರಸ್ವತಿ, ಷಾಹೀನ್ ತಾಜ್, ಮಾರುತಿಕುಮಾರ್ ಶ್ರದ್ಧಾಂಜಲಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.