ಹೋರಾಟ ಮುಖ್ಯವಲ್ಲ ಸಾಮಾಜಿಕ ಕಳಕಳಿ ಬೇಕು: ಸಿದ್ಧಲಿಂಗಯ್ಯ
ಚಿಕ್ಕಬಳ್ಳಾಪುರ: ಕೇವಲ ಸಂಘಟನೆಗಳನ್ನು ಕಟ್ಟಿಕೊಂಡು ಹೋರಾಟಗಳನ್ನು ನಡೆಸುವುದು ಮುಖ್ಯವಲ್ಲ. ಪ್ರಾಮಾಣಿಕವಾಗಿ ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕೆಂದು ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ದಲಿತ ಕವಿ ಸಿದ್ಧಲಿಂಗಯ್ಯ ಸಲಹೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಅಂಬೇಡ್ಕರ್ 57 ನೇ ಪರಿ ನಿಬ್ಬಾಣದ ಅಂಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ಚಿಂತನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುಂಪು ಗುಂಪುಗಳಾಗಿ ಚದುರಿ ಸಂಘಟನೆಗಳನ್ನು ಕಟ್ಟಿಕೊಳ್ಳಲಾಗುತ್ತಿದೆ. ದಲಿತರಿಗಾಗಿ ಅನೇಕ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆಯಾದರೂ ಸಹ ಕೆಲವರು ಮಾತ್ರ ಉದ್ಧಾರವಾಗುತ್ತಿದ್ದಾರೆ. ಆದರೆ, ನಿಜವಾದ ದಲಿತರು ಮಾತ್ರ ಇಂದಿಗೂ ಹಿಂದುಳಿದ ಪರಿಸ್ಥಿತಿಯಲ್ಲಿಯೇ ಇದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ ಅವರು,ದಲಿತರು ಮೊದಲು ಬದಲಾಗಬೇಕು. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಪರಿವರ್ತನೆಯನ್ನು ತರುವಂತಹ ಕೆಲಸ ಪ್ರಮುಖವಾಗಿ ಆಗಬೇಕೆಂದರು.
ಅಂಬೇ ಡ್ಕರ್ ತತ್ವ ಸಿದ್ಧಾಂತಗಳ ಸಮಾಜವನ್ನು ನಿರ್ಮಾಣ ಮಾಡಲು ದಲಿತರು ಮೊದಲು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕು.ಶಿಕ್ಷಣವು ಎಲ್ಲವನ್ನೂ ಬದಲಾಯಿಸುತ್ತದೆ.ಇದನ್ನು ಅರ್ಥ ಮಾಡಿಕೊಂಡು ಪ್ರಗತಿಯನ್ನು ಸಾಧಿಸಿದರೆ ದಲಿತರ ಉದ್ಧಾರವಾಗುತ್ತದೆ ಎಂದರು. ಬೆಂಗಳೂರು ವಿ.ವಿ. ಪ್ರೊ. ಸಮತಾ ದೇಶಪಾಂಡೆ ಮಾತನಾಡಿ, ತಮ್ಮ ತಂದೆ ತಾಯಿಗಳು ತಮಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿದ ಕಾರಣದಿಂದಲೇ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಯಿತು. ವಿದ್ಯೆಯಿಂದಲೇ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಇದರಿಂದ ಪ್ರತಿಯೊಬ್ಬರು ವಿದ್ಯಾವಂತರಾಗಬೇಕೆಂದು ಕರೆ ನೀಡಿದರು.
ಮಲ ಹೊರುವ ಪದ್ಧತಿ ಜೀವಂತವಾಗಿರುವುದಕ್ಕೆ ನಿದರ್ಶನವಾಗಿ ಘಟನೆ ನಡೆದಿದೆ. ಇದನ್ನು ಪ್ರತಿಯೊಬ್ಬರು ಖಂಡಿಸಬೇಕು. ಹೋರಾಟವನ್ನು ನಡೆಸಿ ಅನಿಷ್ಠ ಪದ್ಧತಿ ದೂರವಾಗುವಂತೆ ಮಾಡಬೇಕೆಂದರು. ಪತ್ರಕರ್ತ ನಾರಾಯಣಸ್ವಾಮಿ, ಪ್ರೊ. ಕೋಡಿರಂಗಪ್ಪ, ತಹಸೀಲ್ದಾರ್ ನಟರಾಜ್, ದಲಿತ ಮುಖಂಡರಾದ ಸು.ದಾ. ವೆಂಕಟೇಶ್, ರಾಮಕೃಷ್ಣಪ್ಪ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

