ಮಾದಿಗ ಜನಾಂಗಕ್ಕೆ ಒಳಮೀಸಲಾತಿ ನೀಡಿ
ಕ.ಪ್ರ. ವಾರ್ತೆ ಚಿಕ್ಕಬಳ್ಳಾಪುರ ಜ. 6
ಸಮಾಜದ ಎಲ್ಲಾ ಕೇತ್ರಗಳಲ್ಲಿ ಹಿಂದುಳಿದಿರುವ ಮಾದಿಗ ಜನಾಂಗಕ್ಕೆ ಸದಾಶಿವ ಆಯೋಗದಂತೆ ಒಳಮೀಸಲಾತಿಯನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕೇಶವಮೂರ್ತಿ ಒತ್ತಾಯಿಸಿದರು.
ಅವರು ಮಾದಿಗ ಹೋರಾಟ ಸಮಿತಿಯ ವತಿಯಿಂದ ತಾಲೂಕಿನ ನಂದಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನಂದಿ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಶೈಕ್ಷಣಿಕ, ಉದ್ಯೋಗ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಮಾದಿಗ ಸಮಾಜ ಜನಾಂಗದವರು ಒಗ್ಗಟ್ಟಿನೊಂದಿಗೆ ತಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆಯಬೇಕೆಂದು ಕರೆ ನೀಡಿದರು.
ನ್ಯಾ.ಎ.ಜೆ. ಸದಾಶಿವರವರ ಅಧ್ಯಕ್ಷತೆ ತಾರತಮ್ಯ ವಿಚಾರಣಾ ಸಮಿತಿಯು ಸುದೀರ್ಘ 5 ವರ್ಷಗಳ ಶ್ರಮ ವಹಿಸಿ ವೈಜ್ಞಾನಿಕ ಆಧಾರದ ಮೇಲೆ ತಯಾರಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಶೈಕ್ಷಣಿಕ, ಉದ್ಯೋಗ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದಿರುವ ಮಾದಿಗ ಮತ್ತು ಮಾದಿಗ ಸಂಬಂದಿತ ಜಾತಿಗಳೆಂದು ಜನಸಂಖ್ಯೆಯಲ್ಲೂ ಬಹುಸಂಖ್ಯಾತರೆಂದು ಪರಿಶಿಷ್ಟ ಜಾತಿಗಳ ಸೌಲಭ್ಯಗಳನ್ನು ಸಮಾನತೆಯ ಮತ್ತು ಜನಸಂಖ್ಯೆವಾರ ಮೀಸಲಾತಿ ನೀಡಲು,ಅಂದರೆ ಮಾದಿಗ ಸಮುದಾಯಕ್ಕೆ ಶೇ.6, ರಂತೆ ಮೀಸಲಾತಿ ಹಂಚಿಕೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿತು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಜಿ. ವೆಂಕಟರಮಣಪ್ಪ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತ ದೇಶದ ಜಾತಿ ವ್ಯವಸ್ಥೆಯೊಳಗೆ ಜಾತಿ-ಜಾತಿಗಳ ನಡುವೆ ಅಸಮಾನತೆ ಮತ್ತು ಶೋಷಣೆಯನ್ನು ಅರಿತು ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲಾ ದಲಿತ ವರ್ಗಗಳಿಗೂ ಶಿಕ್ಷಣ, ಉದ್ಯೋಗ, ಆರ್ಥಿಕ ಸಮಾನತೆ, ಸ್ವಾಭಿಮಾನ, ಸಂಘಟನೆ, ಸ್ವಾತಂತ್ರ್ಯ, ಆತ್ಮಗೌರವ ಮತ್ತು ರಾಜಕೀಯ ಅಧಿಕಾರಿಗಳು ಸಮಾನವಾಗಿ ಹಂಚಿಕೆಯಲ್ಲಾದ ಸಂವಿಧಾನದಲ್ಲಿ ಮೀಸಲಾತಿಯನ್ನು ಕಲ್ಪಿಸಿಕೊಟ್ಟಿದ್ದಾರೆ. ಆದರೆ ಅದನ್ನು ಜಾರಿಗೆ ತರಬೇಕಾಗಿರುವುದು ಆಡಳಿತ ನಡೆಸುವ ಸರ್ಕಾರಗಳು ಮತ್ತು ಜನರಿಂದ. ಪ್ರಜಾಪ್ರಭುತ್ವದ ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ಹಕ್ಕುಗಳನ್ನು ಜಾರಿಗೆ ತಂದುಕೊಳ್ಳಲು ನಿರಂತರವಾಗಿ ನಮ್ಮಗಳ ಸ್ವಂತ ಶಕ್ತಿಯ ಹೋರಾಟದಿಂದಲೇ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ತಾ.ಪಂ. ಅಧ್ಯಕ್ಷ ಕೃಷ್ಣಮೂರ್ತಿ, ನಂದಿ ಗ್ರಾ.ಪಂ. ಉಪಾಧ್ಯಕ್ಷ ಸಿ.ಕೆ. ಮಲ್ಲಪ್ಪ, ರಾಜ್ಯ ಕ.ದ.ಸಂ.ಸ. ಸಂಘಟನಾ ಸಂಚಾಲಕ ಬಿ.ಎನ್. ಗಂಗಾಧರಪ್ಪ, ಶಿಕ್ಷಕರ ಸಂಘದ ಹನುಮಂತಪ್ಪ, ಗ್ರಾ.ಪಂ. ಸದಸ್ಯರಾದ ಮಂಜುಳ ತುಳಸಿ, ಮುನಿಕೃಷ್ಣಪ್ಪ, ನಗರಸಭಾ ಸದಸ್ಯರಾದ ಸಿಂಧೂರ್, ಸಂಘಟನೆಯ ಲಕ್ಷ್ಮೀನಾರಾಯಣ್, ಲೋಕೇಶ್ ಬಾಬು, ರಾಮಣ್ಣ, ರವಿಕುಮಾರ್, ಮುನೀಂದ್ರ ಹಾಗೂ ಮತ್ತಿತರರು ಉಪಸ್ಥಿರಿದ್ದರು. ಮರಿಯಪ್ಪ ಸ್ವಾಗತಿಸಿ, ರಮಣ್ ಅಕೇಶ್ ನಿರೂಪಿಸಿದರು. ಗಂಗಾಧರಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

