ಕೋಲಾರ

ಆಶ್ರಯ ಬಡಾವಣೆ ನಿವಾಸಿಗಳಿಗೆ ರುದ್ರಭೂಮಿ ನೀಡಲು ಒತ್ತಾಯ

Published On :

ಚಿಂತಾಮಣಿ: ಆಶ್ರಯ ಬಡಾವಣೆ ನಿವಾಸಿಗಳಿಗೆ ರುದ್ರಭೂಮಿ ಮಂಜೂರು ಮಾಡಲು ಆಗ್ರಹಿಸಿ ನೂರಾರು ನಿವಾಸಿಗಳು ತಾಲೂಕು ದಂಡಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರವನ್ನು ನೀಡಿದರು.
ನಗರದ ಆಶ್ರಯ ಬಡಾವಣೆಯ ಸ್ಥಳೀಯ ನೂರಾರು ನಿವಾಸಿಗಳು ರುದ್ರಭೂಮಿ(ಸ್ಮಶಾನ) ಭೂಮಿ ಮಂಜೂರು ಮಾಡಬೇಕೆಂದು ಆಗ್ರಹಿಸಿ ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿಯವರಿಗೆ ಮುತ್ತಿಗೆ ಹಾಕಿ ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿದರು.
ಸ್ಥಳೀಯ ಮುಖಂಡ ಮುನಿಯಪ್ಪ ಮಾತನಾಡಿ, ಆಶ್ರಯ ಬಡಾವಣೆ ಸ್ಥಾಪನೆಗೊಂಡು 15 ವರ್ಷಗಳು ಕಳೆಯುತ್ತಿದ್ದರೂ ಸ್ಥಳೀಯ ನಿವಾಸಿಗಳು ಸುಮಾರು 4 ರಿಂದ 5 ಸಾವಿರ ಜನ ವಾಸವಾಗಿರುತ್ತಾರೆ. ಇಲ್ಲಿ ಹೆಚ್ಚು ಬಡವ, ಕೂಲಿ ಕಾರ್ಮಿಕ, ಮಧ್ಯಮ ನೌಕರರು ಹಾಗೂ ದಿನ ಕೂಲಿ ನೌಕರರ ವರ್ಗದ ಕುಟುಂಬಗಳು ವಾಸವಾಗುತ್ತಿವೆಯೆಂದು ತಿಳಿಸಿದರು.
ಮೂಲ ಸಮಸ್ಯೆಗಳಿಂದ ತಾಂಡವಾಡುತ್ತಿದ್ದು ಇಲ್ಲಿನ ಜನಪ್ರತಿನಿಧಿಗಳು ರುದ್ರಭೂಮಿ(ಸ್ಮಶಾನ) ಸ್ಥಳದ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದಿಸದೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಥಳ ದೊರೆಯದೆ ಕರ್ಮಕಾಂಡಗಳು ರುದ್ರಭೂಮಿಗೆ ತೆಗೆದು ಕೊಂಡು ಹೋದ ಸಂದರ್ಭದಲ್ಲಿ ಬೇರೆ ರುದ್ರಭೂಮಿ ರವರು ಶವವನ್ನು ತೆಗೆದುಕೊಂಡು ಬರಬಾರದೆಂದು ವಿರೋಧ ವ್ಯಕ್ತಪಡಿಸಿರುತ್ತಾರೆಂದು ತೀವ್ರ ಅಸಮಾಧಾನವನ್ನು ಮುನಿಯಪ್ಪ ವ್ಯಕ್ತಪಡಿಸಿದರು.
ನಂತರ ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿಯವಿಗೆ ಮನವಿ ಪತ್ರ ಸಲ್ಲಿಸಿ ಶೀಘ್ರವೇ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರದ ಗಮನಕ್ಕೆ ತಂದು ತಮ್ಮ ಸಮಸ್ಯೆಗೆ ಸ್ಪಂದಿಸಬೇಕೆಂದು ನಿವಾಸಿಗಳಾದ ಕೃಷ್ಣಪ್ಪ, ರಾಜೇಶ್, ಭರತ್, ನಾರಾಯಣಸ್ವಾಮಿ, ನರಸಿಂಹಪ್ಪ, ನವೀನ್‌ಕುಮಾರ್, ತಿಪ್ಪನ್ನ, ವೆಂಕಟರವಣಪ್ಪ, ಗಂಗುಲಪ್ಪ, ಮಂಜುನಾಥ ಸೇರಿದಂತೆ 50 ಕ್ಕೂ ಹೆಚ್ಚು ಜನ ಸಹಿಗಳು ಮಾಡಿರುವ ಮನವಿ ಪತ್ರವನ್ನು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.