500 ಟಿಎಂಸಿ ನೀರಿಂದ ಬಯಲುಸೀಮೆ ಅಭಿವೃದ್ಧಿ ಸಾಧ್ಯ
ಕೋಲಾರ: ನೆಲಜಲದ ಪ್ರಶ್ನೆ ಬಂದಾಗ ವೀರಾವೇಶದಿಂದ ಹಾಗೂ ಸಮಯ ಸ್ಫೂರ್ತಿಯಲ್ಲಿ ಮಾತನಾಡುವ ರಾಜಕಾರಣಿಗಳು ಗಟ್ಟಿ ಮನಸ್ಸು ಮಾಡಿದಲ್ಲಿ ಮುಂಗಾರಿನ ಮಳೆಗಾಲದಲ್ಲಿ ಅರಬ್ಬಿ ಸಮುದ್ರ ಸೇರುವ 2 ಸಾವಿರ ಟಿಎಂಸಿ ನೀರಿನಲ್ಲಿ ಕನಿಷ್ಟ 500 ಟಿಎಂಸಿ ನೀರನ್ನು ಬಯಲು ಸೀಮೆಗೆ ಹರಿಸಲು ಪ್ರಯತ್ನಿಸಿದಲ್ಲಿ ಇಡೀ ದಕ್ಷಿಣ ಭಾರತವೇ ಸಮೃದ್ಧಿಯಾಗುತ್ತದೆ ಎಂದು ವಾಟರ್ ಮ್ಯಾನೇಜ್ಮೆಂಟ್ ಸೆಲ್ ಬಿಜೆಪಿ ಹಾಗೂ ರಾಷ್ಟ್ರೀಯ ಸಹ ಸಂಚಾಲಕ ಡಿ. ಗಂಗಪ್ಪ ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ ಮಹಾರಾಜರ ಕಾಲದಲ್ಲಿ ಕಟ್ಟಿಸಿರುವ ಕೆರೆ ಕುಂಟೆಗಳು ಸಾಕಷ್ಟು ಇದ್ದು ಅವುಗಳನ್ನು ಅಭಿವೃದ್ಧಿಪಡಿಸಿದಲ್ಲಿ ಮಳೆಗಾಲದಲ್ಲಿ ಸಂಗ್ರಹಣೆ ಆಗುವ ನೀರಿನಿಂದ ಅಂತರ್ಜಲ ಕಾಪಾಡಬಹುದೆಂದು ತಿಳಿಸಿದ್ದಾರೆ. ನೀರಿನ ಸಮಸ್ಯೆ ನಿವಾರಣೆಗಾಗಿಯೇ ಅಖಿಲ ಭಾರತ ಜಲಸಂಗಮ ಆಂದೋಲನ ಅಂಗವಾಗಿ ಗಂಗಾ ಕಾವೇರಿ ಮಲ್ಟಿಸ್ಟೇಟ್ ವಾಟರ್ ಕೋ-ಆಪರೇಟಿವ್ ಸೊಸೈಟಿ ರೂಪುಗೊಳ್ಳಲಿದೆ ಹಾಗೂ ಸದ್ಯದಲ್ಲೆ ಕಾರ್ಯ ಪ್ರಾರಂಭ ಮಾಡುವ ಹಂತದಲ್ಲಿದೆ. ಇದಕ್ಕೆ ಪೂರಕವಾಗಿ ಯುವ ಪಡೆ ಉತ್ಸಾಹ ಭರಿತರಾಗಿ ಭಗೀರಥ ಸೇನೆ ಎನ್ನುವ ವ್ಯವಸ್ಥೆಯಿಂದ ಕಾರ್ಯವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ. ಜಿಲ್ಲೆಯ ಚಿನ್ನದ ಗಣಿಯಲ್ಲಿ ಸಾಕಷ್ಟು ನೀರು ತುಂಬಿದೆ. ಅದನ್ನು ಬಳಕೆ ಮಾಡಲು ಆಗುತ್ತಿಲ್ಲ, ಆನೀರನ್ನು ಹೀಗೆಯೇ ಬಿಟ್ಟರೆ ಮುಂದೊಂದು ದಿನ ಬಹು ದೊಡ್ಡ ವಿಪತ್ತಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಎತ್ತಿನಹೊಳೆ ಯೋಜನೆ ಫಲಕಾರಿಯಾಗುವುದು ಅನುಮಾನ. ಸರ್ಕಾರ ಈ ಯೋಜನೆಯ ಜೊತೆಗೆ ಲಿಂಗನಮಕ್ಕಿ ಡ್ಯಾಂನಿಂದ ನೀರು ತರಲು ವ್ಯವಸ್ಥೆ ಮಾಡಿದರೆ ಕೇವಲ ಕರ್ನಾಟಕ ಬಯಲು ಸೀಮೆ ಮಾತ್ರವಲ್ಲ ತಮಿಳುನಾಡು ಮತ್ತು ಆಂದ್ರ ಪ್ರದೇಶಕ್ಕೂ ನೀರು ಕೊಡಬಹುದು ಎಂದು ವಿಶ್ವಾಸ ವ್ಯಕ್ತಪಡಿರುವ ಡಿ.ಗಂಗಪ್ಪ, ಕುಡಿಯುವ ನೀರು ಇಲ್ಲವೆಂದಾಗ ಶೌಚಾಲಯಗಳ ಮಾತೆಲ್ಲಿ ಬಂತು ಎಂದು ಲೇವಡಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

