ಜಾನುವಾರುಗಳ ಪೋಷಣೆ ನಿರ್ಲಕ್ಷ್ಯ ಸಲ್ಲ: ಶಾಸಕ ಮಂಜುನಾಥ್
ಮಾಲೂರು: ಜಾನುವಾರುಗಳ ಪೋಷಣೆಯಲ್ಲಿ ರೈತರ ನಿರ್ಲಕ್ಷ್ಯ ಸಲ್ಲ ಎಂದು ಶಾಸಕ ಕೆ.ಎಸ್. ಮಂಜುನಾಥ್ ಹೇಳಿದರು.
ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಡಾ. ಅಂಬೇಡ್ಕರ್ ಭವನದಲ್ಲಿ ಪಶುವೈದ್ಯ ಇಲಾಖೆ ಹಾಗೂ ಹಾಲು ಒಕ್ಕೂಟ ಆಯೋಜಿಸಿದ್ದ ಕಾಲುಬಾಯಿ ಜ್ವರದಿಂದ ಮೃತಪಟ್ಟ ರಾಸುಗಳ ಮಾಲೀಕರರಿಗೆ ಪರಿಹಾರ ಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಸುಗಳ ನಿರ್ವಹಣೆಯಲ್ಲಿ ರೈತರು ತೋರುತ್ತಿರುವ ನಿರ್ಲಕ್ಷದಿಂದ ಕಾಲುಬಾಯಿ ಜ್ವರ ಹೆಚ್ಚಳವಾಗಿ ರಾಸುಗಳ ಸಾವುಗಳಿಗೆ ಕಾರಣವಾಗಿದೆ ಎಂದ ಶಾಸಕರು, ನಿಗದಿತ ಸಮಯದಲ್ಲಿ ಲಸಿಕೆ ಹಾಕಿಸುವ ಜತೆಯಲ್ಲಿ ಜೀವವಿಮೆ ಸಹ ಮಾಡಿಸಿ ಎಂದರು.
ತಾಲೂಕಿನಲ್ಲಿ ಪಶುವೈದ್ಯರ ರೈತರ ಸಮಸ್ಯೆಗಳಿಗೆ ಸ್ವಂದಿಸಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ. ಇಲ್ಲದಿದ್ದಲಿ ಬೇರಡೆಗೆ ವರ್ಗಾವಣೆ ಮಾಡಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸತೀಶ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕಾಲುಬಾಯಿ ರೋಗಕ್ಕೆ ಡಿಸೆಂಬರ್‌ವರೆಗೆ 493 ರಾಸುಗಳು ಮೃತಪಟ್ಟಿದ್ದು, ತಾಲೂಕಿಗೆ ಶಾಸಕರು 46.40 ಲಕ್ಷ ಪರಿಹಾರ ಧನ ತಂದಿದ್ದಾರೆ ಎಂದು ಮಾಹಿತಿ ನೀಡಿದರು. ಮೊದಲ ಹಂತವಾಗಿ ಆಕ್ಟೋಬರ್ ಒಳಗೆ ಸತ್ತ ರಾಸುಗಳ ಮಾಲೀಕರಿಗೆ ಪರಿಹಾರ ಧನ ನೀಡಲಾಗುತ್ತಿದ್ದು, ಉಳಿದವರಿಗೆ ಹಂತಹಂತವಾಗಿ ವಿತರಣೆ ಮಾಡಲಾಗುವುದು ಎಂದರು.
ಡಾ. ಪ್ರಸನ್ನ ಕುಮಾರ್, ಡಾ. ಹೆಗ್ಗಡೆ, ಪುಟ್ಟಸ್ವಾಮಿ, ಕೃಷ್ಣಪ್ಪ, ಸದಸ್ಯ ಟಿ.ಎಂ. ಮೂರ್ತಿ, ಚಂದ್ರಪ್ಪ, ರಾಜಪ್ಪ, ಚೆನ್ನಸ್ವಾಮಿ ಗೌಡ, ಮಲ್ಲಿಕಾರ್ಜುನ್, ನಂಜೇಗೌಡ, ಪ್ರಕಾಶ್, ರವಿಶಂಕರ್, ಡಾ. ವಿಶ್ವನಾಥ್, ಡಾ. ಅನುರಾಧ, ಡಾ. ಸ್ನೇಹ, ಡಾ. ನಾರಾಯಣಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

