ಕೋಲಾರ

ಪಕ್ಷಭೇದ ಮರೆತು ಊರ ಹಬ್ಬ ಆಚರಣೆ

Published On :

ಗೌರಿಬಿದನೂರು: ತಾಲೂಕಿನ ಎಚ್. ನಾಗಸಂದ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಭೇದ ಮರೆತು ಕಳೆದ 30 ವರ್ಷಗಳಿಂದ ಸ್ಥಗಿತಗೊಂಡಿದ್ದ ಊರ ಹಬ್ಬವನ್ನು ಆಚರಿಸಿದರು.
ವಿಧಾಸಬಾ ಉಪಾಧ್ಯಕ್ಷರಾದ ಶಿವಶಂಕರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ,  ರಾಜ್ಯ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಎನ್. ಜ್ಯೋತಿರೆಡ್ಡಿ ಅವರು ಒಗ್ಗಟ್ಟು ಪ್ರದರ್ಶಿಸಿದರು.
ಈ ಮೊದಲು 1984ರಲ್ಲಿ ಗ್ರಾಮದೇವತಗಳ ಜಾತ್ರೆ ನಡೆದಿತ್ತು. ರಾಜಕೀಯ ಒಮ್ಮತದ ಕೊರತೆಯಿಂದ ಸ್ಥಗಿತಗೊಂಡಿದ್ದ ಈ ಜಾತ್ರೆ ಗಾಮಸ್ಥರ ಒತ್ತಾಸೆಯಿಂದ ಇಂದು ವಿಜೃಂಭಣೆಯಿಂದ ನೆರವೇರಿಸಿತು. ಮೂರೂ ಕುಟುಂಬದವರೂ ಪರಸ್ಪರ ಮನೆಗಳಿಗೆ ತೆರಳಿ ಗ್ರಾಮದೇವತೆಗಳ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಗ್ರಾಮಹಬ್ಬದಲ್ಲಿ ವಿಜೃಂಭಿಸಿದರು.
ಶಿವಶಂಕರರೆಡ್ಡಿ ಅವರ ಮನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಮಾಜಿ ಶಾಸಕ ಸುಧಾಕರ್ ಮುಂತಾದವರು ಆಗಮಿಸಿದರೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಮಾಜಿ ಸಚಿವ ಬಚ್ಚೇಗೌಡ, ಶಾಸಕ ವಿಶ್ವನಾಥ್, ವೈ.ಎ. ನಾರಾಯಣಸ್ವಾಮಿ ಆಗಮಿಸಿದ್ದರು.
ಮಾಜಿ ಶಾಸಕಿ ಎನ್. ಜ್ಯೋತಿರೆಡ್ಡಿ ಅವರ ಆಹ್ವಾನದ ಮೇರೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ವರ್ತೂರು ಕೃಷ್ಣಪ್ಪ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ಮಾಜಿ ಶಾಸಕ ಎಸ್.ವಿ. ಅಶ್ವತ್ಥ್ ನಾರಾಯಣರೆಡ್ಡಿ, ಮಾಜಿ ಶಾಸಕ ಬಚ್ಚೇಗೌಡ, ಸತೀಶ್ ರೆಡ್ಡಿ, ನಾಗರಾಜರೆಡ್ಡಿ ಮುಂತಾದವರು ಪಾಲ್ಗೊಂಡಿದ್ದರು. ಊರ ಹಬ್ಬಕ್ಕೆ ಮಂಗಳವಾರ ನಿನ್ನೆ ಶಾಕಾಹಾರ ಹಾಗೂ ಬುಧವಾರ ಮಾಂಸಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಪಕ್ಷಕ್ಕೆ ಬದ್ಧ: ಹಬ್ಬಕ್ಕೆ ಒಂದಾಗಿದ್ದರೂ ಪಕ್ಷಕ್ಕೆ ಬದ್ಧ ರಾಜಕೀಯ ಮತ್ತು ಪಕ್ಷದ ವಿಷಯದಲ್ಲಿ ರಾಜಿಯಿಲ್ಲ ಎಂದು ಅಧ್ಯಕ್ಷೆ ಎನ್. ಜ್ಯೋತಿರೆಡ್ಡಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.