ಲೀಡರ್ ಆಗಿ, ಡೀಲರ್ ಆಗಬೇಡಿ
ಕೋಲಾರ: ರಾಜ್ಯದಲ್ಲಿ ಸಾವಿರರು ಮಂದಿ ಕಾರ್ಮಿಕರು ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರ ಹಿತ ಕಾಪಾಡುವುದು ಮುಖಂಡರ ಕರ್ತವ್ಯ. ಕಾರ್ಮಿಕ ಸಂಘಟನೆಗಳಲ್ಲಿ ಅಧಿಕಾರ ಹೊಂದಿರುವವರು ನಿಜವಾದ ಲೀಡರ್ಗಳಾಗಿ ಕೆಲಸ ಮಾಡಬೇಕೆ ಹೊರತು ಡೀಲರ್ ಆಗಬಾರದೆಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಅಧ್ಯಕ್ಷ ಡಾ. ಕೆ.ಎಸ್.ಶರ್ಮಾಜೀ ಕಿವಿಮಾತು ಹೇಳಿದರು.
ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಬುಧವಾರ ಕೋಲಾರ ವಿಭಾಗದ ಕೆಎಸ್ಆರ್ಟಿಸಿ ಎಂಪ್ಲಾಯೀಸ್ ಅಸೋಸಿಯೇಷನ್ನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕಾರ್ಮಿಕ ಸಂಘಟನೆಗಳು ಮೂಲ ಉದ್ದೇಶಕ್ಕೆ ಅನುಗುಣವಾಗಿ ಕಾರ್ಯಕ್ರಮ ಜಾರಿಗೆ ತರಬೇಕು, ನೌಕರರ ಹಕ್ಕುಗಳನ್ನು ದಮನ ಮಾಡುವ ಕರಾಳ ಎಸ್ಮಾ ಕಾಯ್ದೆ ಜಾರಿಯಾಗಲು ಅವಕಾಶ ನೀಡಬಾರದೆಂದರು.
ರಾಜ್ಯದಲ್ಲಿ 1 ಲಕ್ಷ 10 ಸಾವಿರ ಕಾರ್ಮಿಕರಿದ್ದಾರೆ. ಮುಖಂಡರು ನ್ಯಾಯಕ್ಕಾಗಿ ಪ್ರತಿಪಾದಿಸಬೇಕು,ಸಮಸ್ಯೆ ಎದುರಾದಾಗ ಸರ್ಕಾರದ ಗಮನ ಸೆಳೆಯಲು ಮುಷ್ಕರ ಮಾಡುವುದು ಅಗತ್ಯ ಹಾಗೂ ದು ಕಾರ್ಮಿಕರ ಜನ್ಮ ಸಿದ್ಧ ಹಕ್ಕು ಎಂದರು. ಕಾರ್ಮಿಕರ ಹಕ್ಕು ಕಸಿದುಕೊಳ್ಳುವುದಕ್ಕಾಗಿ ಈ ಹಿಂದೆ ಕೆಲ ಸರ್ಕಾರಗಳು ಎಸ್ಮಾ ಜಾರಿ ತಂದ ಪರಿಣಾಮ ಅಧಿಕಾರ ಕಳೆದುಕೊಂಡಿವೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಪಾಠ ಕಲಿಯಲಿದ್ದರೆ ಅಧಿಕಾರ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸನ್ಮಾನವನ್ನು ಸ್ವೀಕರಿಸಿದ ಮಹಾಮಂಡಳಿಯ ಪ್ರಧಾನ ಕಾರ್ಯದರ್ಶಿ ಬಿ. ಜಯದೇವರಾಜೇ ಅರಸ್ ಮಾತನಾಡಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಾ. ನಾರಾಯಣಸ್ವಾಮಿ ಸಂಘದ ವರದಿ ಹಾಗೂ ಕುಂದು ಕೊರತೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾಮಂಡಳದ ಕಾರ್ಯಾಧ್ಯಕ್ಷ ಗಂಗಾಧರಯ್ಯ, ಖಜಾಂಚಿ ಎನ್.ಆರ್. ದೇವರಾಜೇ ಅರಸ್, ಉಪಾಧ್ಯಕ್ಷ ರಾಘವರಾಜು,ಗೌರವಾಧ್ಯಕ್ಷ ಅಶ್ವಥ್ಗೌಡ, ಅಧ್ಯಕ್ಷ ಹೆಚ್.ಎಸ್. ಕೃಷ್ಣಮೂರ್ತಿ, ಖಜಾಂಚಿ ಕೆ. ವೆಂಕಟಾಚಲಪತಿ, ರಾಜಣ್ಣ, ಕೆ. ರವಿಶಂಕರ್, ಆರ್.ಪ್ರಸಾದ್, ಶಿವಕುಮಾರ್, ಗಿರೀಶ್, ಬಯ್ಯಾರೆಡ್ಡಿ, ಡಿ.ಎಂ. ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

