ಹಾಸ್ಯಕ್ಕೀಡಾದ ಅರ್ಚಕ ಗುಂಪಿನ ಮಾತಿನ ಚಕಮಕಿ
ಚಿಂತಾಮಣಿ: ಶಾಸಕರ ಸಮಕ್ಷಮ ಅರ್ಚಕರು 2 ಗುಂಪುಗಳಾಗಿ ಪರ ವಿರೋಧ ಮಾತಿನ ಚಕಮುಕಿ ನಡೆದು ಹಾಸ್ಯಕ್ಕೆ ಈಡಾದ ಘಟನೆ ಇಲ್ಲಿನ ಹರಿಹರೇಶ್ವರಸ್ವಾಮಿ ದೇವಾಲಯದಲ್ಲಿ ಗುರುವಾರ ನಡೆದಿದೆ.
ನಗರದ ಆಜಾದ್‌ಚೌಕ ಬಳಿ ಇರುವ ಹರಿಹರೇಶ್ವಸ್ವಾಮಿ ದೇವಾಲಯದಲ್ಲಿ ಮುಜರಾಯಿ ದೇವಾಲಯಗಳ ಅರ್ಚಕ ಆಗಮಿಕರ ಸಂಘದ ವತಿಯಿಂದ 2013-14 ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಸಂಘದ ಅಧ್ಯಕ್ಷ ಶ್ರೀನಿವಾಸಚಾರ್ಯ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಸಭೆ ಪ್ರಾರಂಭ ಮುನ್ನವೇ ಅರ್ಚಕರ ಪರ-ವಿರೋಧ ಮಾತಿನ ಚಕಮಕಿ ನಡೆದು ಶಾಸಕರ ಎದುರಿನಲ್ಲೇ ಪರಸ್ಪರ ನೂಕಾಟ-ತಳ್ಳಾಟ ನಡೆಯಿತು.
ನಡೆದಿದ್ದೇನು: ಮುಜರಾಯಿ ದೇವಾಲಯಗಳ ಅರ್ಚಕ, ಆಗಮಿಕರ ಸಂಘದ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿತ್ತು.
ಸಭೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ತಾಲೂಕಿನ ವಡ್ಡಹಳ್ಳಿ ವೀರಾಂಜನೇಯಸ್ವಾಮಿ ದೇವಾಲಯ ಅರ್ಚಕ ನರಸಿಂಹಮೂರ್ತಿ ಇನ್ನೂ ಹಲವರು ಸಭೆಗೆ ಬಂದು ಶಾಸಕರಿಗೆ ಸರ್ಕಾರದ ಅನುದಾನ ನೇರವಾಗಿ ಅರ್ಚಕರಿಗೆ ಸಿಗಲು ಕೋರಿ ಮತ್ತು 8 ಬೇಡಿಕೆ ಈಡೇರಿಸಲು ಗಮನಕ್ಕೆ ತರಲು ಮುಂದಾದಾಗ ಅಧ್ಯಕ್ಷ ಮಧ್ಯ ಪ್ರವೇಶಿಸಿ ಸಂಘದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಗಮನಕ್ಕೆ ತಾರದೆ ಏಕಪಕ್ಷೀಯವಾಗಿ ಮನವಿ ಪತ್ರ ಸಲ್ಲಿಸಬಾರದೆಂದು ತಾಕೀತು ಮಾಡಿದಾಗ ಹಲವು ಅರ್ಚಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಹಾಗೂ ಮನವಿ ಪತ್ರ ಶಾಸಕರಿಗೆ ನೀಡಲು ಮುಂದಾದಾಗ ಎರಡು ಗುಂಪುಗಳ ನಡುವೆ ಶಾಸಕರ ಸಮಕ್ಷಮ ಮಾತಿನ ಚಕಮಕಿ ನಡೆದು ಪರಸ್ಪರ ನೂಕಾಟತಳ್ಳಾಟ ನಡೆಯಿತು.
ಇದರಿಂದ ಕೆಲ ಸಮಯ ಸಭೆ ಗೊಂದಲಮಯವಾಗಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು.
ನಂತರ ಹಲವು ಹಿರಿಯ ಅರ್ಚಕರು ಮಧ್ಯ ಪ್ರವೇಶಿಸಿ ಶಾಂತಿಯಿಂದ ಸಭೆ ನಡೆಸಲು ಎಲ್ಲಾ ಅರ್ಚಕರು ಹಾಗೂ ಆಗಮಿಕರು ಶಾಂತಿಯಿಂದ ಸಭೆಯನ್ನು ನಡೆಸಿಕೊಡಲು ಕೋರಿದರು. ನಂತರ ಸಭೆ ಮುಂದುವರೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

